ಬೀದರ್: ಗಡಿ ನಾಡು ಬೀದರ್‌ನಲ್ಲಿ ಶನಿವಾರ ಕೋವಿಡ್ ಸೋಂಕಿಗೆ 6 ಜನರನ್ನು ಬಲಿ ಪಡೆದು ಮರಣ ಮೃದಂಗ ಬಾರಿಸಿದೆ.
ಜಿಲ್ಲೆಯಲ್ಲಿ ಮೃತರ ಸಂಖ್ಯೆ 27ಕ್ಕೆ ಏರಿಕೆ ಆಗಿದ್ದು, ಹೆಮ್ಮಾರಿ ಅಟ್ಟಹಾಸಕ್ಕೆ ಜನರು ಅಕ್ಷರಶ ಬೆಚ್ಚಿ ಬಿದ್ದಿದ್ದಾರೆ. ಇನ್ನೊಂದೆಡೆ 21 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಜೂ. 27ಕ್ಕೆ 3 ಮತ್ತು ಜು. 1ರಂದು 2 ಸೋಂಕಿತರನ್ನು ಸಾವಿನ ಮನೆಗೆ ತಳ್ಳಿದ್ದ ಕೋವಿಡ್ ಮತ್ತೆ ತನ್ನ ಅಟ್ಟಹಾಸ ಮೆರೆದಿದೆ.
55 ವರ್ಷದ ಮಹಿಳೆ, 24 ವರ್ಷದ ಪುರುಷ, 70 ವರ್ಷದ ಪುರುಷ, 50 ವರ್ಷದ ಮಹಿಳೆ, 70ವರ್ಷದ ಮಹಿಳೆ ಮತ್ತು 31 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.
ಈ ಪೈಕಿ ಮೂರು ಸಾರಿ ಕೇಸ್‌ಗಳಿದ್ದರೆ, ಒಂದು ಪ್ರಕರಣದಲ್ಲಿ ಸಂಪರ್ಕವೇ ಪತ್ತೆ ಆಗಿಲ್ಲ. ಇನ್ನೂ ಇದರಲ್ಲಿ ಓರ್ವ ಮಹಿಳೆ ಗರ್ಭಿಣಿ ಆಗಿದ್ದರು ಎಂದೆನ್ನಲಾಗಿದೆ.
ಇನ್ನೊಂದೆಡೆ ಜಿಲ್ಲೆಯಲ್ಲಿ ಒಂದೇ ದಿನ 51 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 726ಕ್ಕೆ ಏರಿಕೆಯಾಗಿದೆ.