ಬಿಹಾರ: ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಸೀತಾಮರ್ಹಿಯಲ್ಲಿ ಸಂಭವಿಸಿದೆ.
ಮನೆಯಲ್ಲಿ ಟೀ ತಯಾರಿಸುತ್ತಿರುವ ವೇಳೆ ಸಿಲಿಂಡರ್ ಸ್ಫೋಟಗೊಂಡಿದಿದ್ದು ಗಾಯಗೊಂಡವರನ್ನು ಸೀತಾಮರ್ಹಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ಯಾಸ್ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿದ್ದು ಇಡೀ ಮನೆಯನ್ನು ಆವರಿಸಿತ್ತು ಈ ವೇಳೆ ಚಹಾ ತಯಾರಿಸಲು ಗ್ಯಾಸ್ ಹೊತ್ತಿಸಿದ ವೇಳೆ ಅವಘಡ ಸಂಭವಿಸಿದೆ ಎಂದು ಮನೆಮಂದಿ ಹೇಳಿದ್ದಾರೆ.
ಎಸ್‌ಡಿಒ ಪ್ರಶಾಂತ್ ಕುಮಾರ್ ಅವರು ತಮ್ಮ ತಂಡದೊಂದಿಗೆ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಆಗಮಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದರು.
ಇದನ್ನೂ ಓದಿ: Elephant Rescue: ಕಾಡಾನೆ ಕಾರ್ಯಾಚರಣೆ: ಕಿಲ್ಲರ್ ಸಲಗ ಬಿಟ್ಟು ಸೆರೆಯಾಯ್ತಾ ಬೇರೆ ಆನೆ ?