ವಾಷಿಂಗ್ಟನ್ : ಅಮೆರಿಕದ ಪ್ರತಿಷ್ಠಿತ ಸ್ಕ್ರಿಪ್ಸ್ ನ್ಯಾಶನಲ್ ಸ್ಪೆಲಿಂಗ್ ಬೀ ಚಾಂಪ್ಯನ್‌ಶಿಪ್ ಗೆದ್ದಿರುವ ಎಂಟು ಮಂದಿಯಲ್ಲಿ ಆರು ಮಂದಿ ಭಾರತೀಯ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.
ಈ ವಿಜೇತರು 50,000 ಡಾಲರ್‌ಗಳಿಗೂ ಅಧಿಕ ನಗದು ಮತ್ತು ಇತರ ಬಹುಮಾನಗಳನ್ನು ಪಡೆದಿದ್ದಾರೆ.
ಈ ಸಾಧನೆ ಮಾಡಲು ಈ ಸ್ಪರ್ಧಾ ವಿಜೇತರು 550ಕ್ಕೂ ಅಧಿಕ ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸಿದ್ದಾರೆ. ಈ ಸ್ಪರ್ಧೆ ಅಮೆರಿಕದಲ್ಲೇ ಅಭೂತಪೂರ್ವ ಎನಿಸಿಕೊಂಡಿದೆ.
94 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಸ್ಪರ್ಧೆಯಲ್ಲಿ ಎರಡಕ್ಕಿಂತ ಹೆಚ್ಚು ಜಂಟಿ ಚಾಂಪ್ಯನ್‌ಗಳನ್ನು ಹೆಸರಿಸಲಾಗಿದೆ.
ಸ್ಪರ್ಧಾ ವಿಜೇತರ ಹೆಸರು ಇಂತಿದೆ : ರಿಷಿಕ್ ಗಂಧಶ್ರೀ ಕ್ಯಾಲಿಫೋರ್ನಿಯಾ, 13, ಸಾಕೇತ್ ಸುಂದರ್, ಮೇರಿಲ್ಯಾಂಡ್, 13, ಶ್ರುತಿಕಾ ಪಧೀ, ನ್ಯೂ ಜೆರ್ಸಿ, 13, ಸೋಹಂ ಸುಖ್‌ತನ್‌ಕರ್, ಟೆಕ್ಸಾಸ್ 13, ಅಭಿಜಯ್ ಕೊಡಾಲಿ, ಟೆಕ್ಸಾಸ್, 12, ರೋಹನ್ ರಾಜಾ, ಟೆಕ್ಸಾಸ್, 13, ಕ್ರಿಸ್ಟೋಫರ್ ಸೆರಾವ್, ನ್ಯೂ ಜೆರ್ಸಿ, 13, ಎರಿನ್ ಹೋರ್ವಾರ್ಡ್, ಅಲಬಾಮಾ,14. ಇವರನ್ನು ಜಂಟಿ ಚಾಂಪ್ಯನ್‌ಗಳೆಂದು ಘೋಷಿಸಲಾಗಿದೆ.