Advertisement

ರೈಲು ನಿಲ್ದಾಣದಲ್ಲಿ ಸ್ಫೋಟ: ಆರು ಸಿಆರ್ ಪಿಎಫ್ ಸಿಬ್ಬಂದಿಗೆ ಗಾಯ

12:15 PM Oct 16, 2021 | Team Udayavani |

ರಾಯ್ ಪುರ: ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ನಡೆದ ಸ್ಪೋಟದಲ್ಲಿ ಆರು ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಸಿಬ್ಬಂದಿ ಗಾಯಗೊಂಡಿದ್ದಾರೆ.

Advertisement

ಸಿಆರ್ ಪಿಎಫ್ ನ 211 ಬೆಟಾಲಿಯನ್ ನ ಯೋಧರು ಇಂದು ಬೆಳಗ್ಗೆ ಜಮ್ಮುವಿಗೆ ವಿಶೇಷ ರೈಲಿನಲ್ಲಿ ಹೊರಟಿದ್ದರು. ಈ ವೇಳೆ ಬಾಕ್ಸ್ ನಲ್ಲಿರಿಸಿದ್ದ ಡಿಟೋನೇಟರ್ಸ್  ಸ್ಪೋಟವಾಗಿದೆ.

ಒರಿಸ್ಸಾದ ಝರ್ಸುಗುಡಾದಿಂದ ಜಮ್ಮುವಿಗೆ ಈ ವಿಶೇಷ ರೈಲು ತೆರಳುತ್ತಿತ್ತು. ಬೆಳಗ್ಗೆ 6.30ರ ಸುಮಾರಿಗೆ ರಾಯ್ ಪುರ ರೈಲು ನಿಲ್ಧಾಣದಲ್ಲಿ ಸ್ಫೋಟವಾಗಿದೆ ಎಂದು ರಾಯ್ ಪುರ ಎಸ್ ಪಿ ಪ್ರಶಾಂತ್ ಅಗರ್ವಾಲ್ ಹೇಳಿದರು.

ಇದನ್ನೂ ಓದಿ:ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು

ಬೆಟಾಲಿಯನ್ ಪಡೆಯು ನಿಲ್ದಾಣದಲ್ಲಿ ಸ್ಫೋಟಕಗಳನ್ನು ತುಂಬಿದ್ದ ಬಾಕ್ಸ್ ಗಳನ್ನು ರೈಲಿನಲ್ಲಿ ಇರಿಸುವಾಗ ಆಕಸ್ಮಿಕವಾಗಿ ಬಾಕ್ಸ್ ಕೆಳಕ್ಕೆ ಬಿದ್ದಿದೆ. ಇದರಿಂದ 29 ಡಿಟೋನೇಟರ್ಸ್ ಗಳು ಸ್ಫೋಟವಾಗಿದೆ. ಇದರಿಂದ ಸಿಬ್ಬಂದಿ ಗಾಯಗೊಂಡರು ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next