Advertisement
ನಗರದ ಆಳಂದ ರಸ್ತೆಯ ಬೆಣ್ಣೂರು ಕಲ್ಯಾಣ ಮಂಟಪದಲ್ಲಿ ದಕ್ಷಿಣ ಮತಕ್ಷೇತ್ರದ ಸಿಂದಗಿ, ಪಟ್ಟಣ, ಭೀಮಳ್ಳಿ, ಸಾವಳಗಿ, ಕೋಟನೂರ ಡಿ, ಹುಣಸಿಹಡಗಿಲ್, ಶರಣಸಿರಸಗಿ, ಹೀರಾಪುರ, ಮಿಣಜಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎರಡು ಸಾವಿರ ರೈತರಿಗೆ ಆರು ಕೋಟಿ ರೂ, ಬಡ್ಡಿ ರಹಿತ ಬೆಳೆಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಇದನ್ನೂ ಓದಿ: ಲೆಹೆಂಗದಲ್ಲಿ ವಿದೇಶಕ್ಕೆ ಮಾದಕ ವಸ್ತುಗಳ ರಫ್ತು
ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಠಗಾ, ರೈತರಿಗೆ ಸಾಲ ನೀಡದಿರುವ ಮಟ್ಟಿಗೆ ತಲುಪಿದ್ದ ಬ್ಯಾಂಕ್ ಪುನಶ್ಚೇತನಗೊಳ್ಳಲು ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಇಚ್ಛಾಶಕ್ತಿ ಕಾರಣವಾಗಿದೆ. ಮಧ್ಯಾಮಾವಧಿ ಸಾಲ ಮನ್ನಾ ಮಾಡಿರುವುದು ಹಾಗೂ 10 ಕೋಟಿ ರೂ. ಶೇರು ನೀಡಿರುವುದು, ಜತೆಗೆ 200 ಕೋಟಿ ರೂ. ಅಪೆಕ್ಸ್ ದಿಂದ ಸಾಲ ದೊರಕಿಸುವಂತೆ ಮಾಡಿರುವುದೇ ಕಾರಣ ಎಂದರು.
ಮತ್ತೋರ್ವ ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿದರು. ಡಿಸಿಸಿ ಬ್ಯಾಂಕ್ ಎಂಡಿ ಚಿದಾನಂದ ನಿಂಬಾಳ, ಜನರಲ್ ಮ್ಯಾನೇಜರ ಮುತ್ತುರಾಜ, ತಹಶೀಲ್ದಾರ್ ಪ್ರಕಾಶ ಕುದುರೆ, ಸಹಾಯಕ ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ, ಪ್ರಮುಖರಾದ ರಾಜೇಂದ್ರ ಕರೇಕಲ್, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಹಣಮಂತರಾವ ಭೈರಾಮಡಗಿ, ಲಿಂಗರಾಜ ಧುಳಗೊಂಡ, ಸಂಗಮೇಶ್ವರ ಚೋರಗಸ್ತಿ, ಶಿವರಾಯ ಶಿವಮೂರ್ತಿ, ಶಿವರಾಜ ಎಸ್. ಸಿರಸಗಿ ಕೋಟನೂರ, ಪ್ರಭುಲಿಂಗ ಮೂಲಗೆ, ಗಂಗಾಧರ ಪೊಲೀಸ್ ಪಾಟೀಲ, ಲಿಂಗಣಗೌಡ ಪಾಟೀಲ, ಬ್ಯಾಂಕ್ ಅಧಿಕಾರಿಗಳಾದ ಬಸವರಾಜ ಕಲ್ಲೂರ, ರುದ್ರಗೌಡ, ಸದಲಾಪುರ, ಪ್ರವೀಣ, ಮಲ್ಲಿಕಾರ್ಜುನ, ಗಣಪುರ, ಪೂಜಾರಿ ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ 250 ರೈತರಿಗೆ ಬೀಜ, ಎಂ.ಎನ್. ಲಿಕ್ವಿಡ್ ಕೀಟನಾಶಕ ಹಾಗೂ 94 ಸಿ ಅಡಿಯಲ್ಲಿ ರೈತರಿಗೆ ಹಕ್ಕುಪತ್ರಗಳನ್ನು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ವಿತರಿಸಿದರು. ಶಿವಶಂಕರ ಬಿರಾದಾರ ನಿರೂಪಿಸಿದರು, ಬಿ.ಜಿ. ಕಲ್ಲೂರ ಸ್ವಾಗತಿಸಿದರು.