Advertisement

ತುಂಬಾ ಹತ್ತಿರದಲ್ಲಿರುವ ಆರು ಚೆಂದದ ಜಲಪಾತಗಳು

04:10 PM Jan 21, 2017 | |

ನದಿ ರಭಸದಿಂದ ಹರಿದು ಜಲಪಾತದಿಂದ ಹಾರಿ ಬೀಳುವ ದೃಶ್ಯ ನೋಡಲು ಎರಡು ಕಣ್ಣು ಸಾಲುವುದಿಲ್ಲ. ಹಾಗಾಗಿ ನೀವು ಈ ವರ್ಷ ನೋಡಬಹುದಾದ ಜಲಪಾತಗಳ ಪಟ್ಟಿ ಇಲ್ಲಿದೆ. ಸಮಯ ನೋಡಿಕೊಂಡು ಪುರ್ಸೊತ್ತಲ್ಲಿ ಹೋಗಿ ಬರಬಹುದು.

Advertisement

1. ಶಿವನ ಸಮುದ್ರ
ಆಕಡೆ ಭರಚುಕ್ಕಿ ಈ ಕಡೆ ಗಗನಚುಕ್ಕಿ. ಸ್ವರ್ಗ ಎಲ್ಲಿದೆ ಎಂದರೆ ಇಲ್ಲೇ ಇದೆ ಅನ್ನಬೇಕು. ಅಷ್ಟು ಚಂದದ ಜಲಪಾತಗಳಿವು. ಹೆಸರು ಬಹುತೇಕರಿಗೆ ಗೊತ್ತಿದೆ. ಆದರೆ ನೋಡಿದವರ ಸಂಖ್ಯೆ ಕಡಿಮೆ ಇದೆ. ಜೀವಮಾನದಲ್ಲಿ ಒಂದ್ಸಲ ಆದ್ರೂ ನೋಡಲೇಬೇಕಾದ, ಮಂಡ್ಯ ಜಿಲ್ಲೆಯಲ್ಲಿರುವ ಈ ಜಲಪಾತ ನಮಗೆ ಹತ್ತಿರದಲ್ಲೇ ಇದೆ.
ದೂರ- ಸುಮಾರು 135 ಕಿಮೀ.

2. ಚುಂಚಿ ಫಾಲ್ಸ್‌
ಹಸಿರು ತುಂಬಿದ ತಾಣದಲ್ಲಿ ನದಿಯೊಂದು ರಂಭಸದಿಂದ ಧಾವಿಸಿ ಕೆಳಕ್ಕೆ ಹಾರಿ ಝರಿಯಾಗುವ ವಿಸ್ಮಯವನ್ನು ಕಣ್ತುಂಬಲು ಚುಂಚಿ ಫಾಲ್ಸ್‌ಗೆ ಹೋಗಬೇಕು. ಕನಕಪುರದಲ್ಲಿರುವ ಈ ಜಲಪಾತ ನೋಡಲು ಫ್ರೆಂಡ್ಸ್‌ ಜೊತೆ ಹೋಗುವುದು ಚೆಂದಾಚೆಂದ. ಎಲ್ಲರೂ ಒಟ್ಟಾಗಿ ಹೋಗಿ ಆನಂದಿಸಿ.
ದೂರ- ಸುಮಾರು 90 ಕಿಮೀ.

3. ಹೊಗೇನಕಲ್‌
ಅದ್ಭುತ ದೃಶ್ಯ ಕಾವ್ಯ ಈ ಜಲಪಾತ. ಕಾವೇರಿಯ ಅಂದವನ್ನು ಸವಿಯಬೇಕಾದರೆ ಒಂದ್ಸಲ ಈ ಜಲಪಾತದ ಕಡೆ ನೀವು ಹೋಗಬೇಕು. ಕಾವೇರಿಯ ಅಂದ ಚೆಂದವನ್ನು ನೋಡಿ ಮೈ ಮರೆಯಬೇಕು. ಇದೊಂದು ಆಕರ್ಷಣೀಯ ಸ್ಥಳ. ತೆಪ್ಪ ಸವಾರಿ ಇಲ್ಲಿನ ಬಹು ಜನಪ್ರಿಯ ಆಟ. 
ದೂರ- ಸುಮಾರು 180 ಕಿಮೀ.

4. ಚುಂಚನಕಟ್ಟೆ ಜಲಪಾತ
ಮೈಸೂರಿಗೆ ಹೋಗುವ ಐಡಿಯಾ ನಿಮಗಿದ್ದರೆ ಮೈಸೂರಿಗೆ ಈ ಜಲಪಾತ ತುಂಬಾ ಹತ್ತಿರದಲ್ಲಿದೆ. ಬೆಂಗಳೂರಿಂದ ಹೋಗುವುದಾದರೂ ಅಂಥಾ ದೂರವೇನಿಲ್ಲ. ಈ ತಾಣಕ್ಕೆ ಒಂದ್ಸಲ ಕಾಲಿಟ್ಟರೆ ನಿಮ್ಮನ್ನೇ ನೀವು ಮರೆತುಹೋಗುತ್ತೀರಿ. ಪ್ರಕೃತಿ ಮಡಿಲಲ್ಲಿ ಕೂರುವುದೆಂದರೆ ಕಳೆದುಹೋಗುವುದೆಂದೇ ಲೆಕ್ಕ.
ದೂರ- ಸುಮಾರು 210 ಕಿಮೀ.

Advertisement

5. ಮುತ್ಯಾಲ ಮಡು ಜಲಪಾತ
ಆನೆಕಲ್‌ ಸಮೀಪ ಇರೋ ಈ ಚಂದದ ತಾಣಕ್ಕೆ ಟ್ರೆಕ್ಕಿಂಗ್‌ ಮಾಡೋಕೆಂದೇ ಹೋಗುವವರಿದ್ದಾರೆ. ಒಬ್ಬರು ಇಬ್ಬರು ಹೋಗುವುದಕ್ಕಿಂತ ಗುಂಪಾಗಿ ಹೋದರೆ ಅದರ ಮಜವೇ ಬೇರೆ. ಹಾಗಾಗಿ ಈ ತಾಣಕ್ಕೆ ಹೋಗುವಾಗ ಫ್ರೆಂಡ್ಸ್‌ ಗುಂಪು ಕಟ್ಟಿಕೊಂಡು ಹೋಗಿ ಖುಷಿ ಪಡಿ.
ದೂರ- ಸುಮಾರು 40 ಕಿಮೀ.

6. ಮಲ್ಲಳ್ಳಿ ಜಲಪಾತ
ಕೊಡಗಿನಲ್ಲಿರುವ ಅತ್ಯಂತ ಚೆಂದದ ಜಲಪಾತಗಳಲ್ಲಿ ಇದು ಒಂದು. ದಟ್ಟ ಕಾನನ ಮಧ್ಯೆ ಇರುವ ಈ ಜಲಪಾತವನ್ನು ನೋಡಲು ಹೋದರೆ ನೀರಿನ ಸದ್ದನ್ನು ಕೇಳುವುದೇ ಹಬ್ಬ. ಅದರ ಜೊತೆಗೆ ಕಾಡಿನ ಸದ್ದನ್ನು ಆಲಿಸುತ್ತಾ ನಿಂತರೆ ಹೊತ್ತು ಸರಿಯುವುದೇ ಗೊತ್ತಾಗದು. ಲೈಫ್ಟೈಮ್‌ ಅನುಭವ ಅದು.
ದೂರ- ಸುಮಾರು 250 ಕಿಮೀ.     

Advertisement

Udayavani is now on Telegram. Click here to join our channel and stay updated with the latest news.

Next