Advertisement
ಪಡುಬಿದ್ರಿ ಕಂಚಿನಡ್ಕದ ಮಹಮ್ಮದ್ ಅನೀಸ್ (24), ಬಜಪೆ ಜೋಕಟ್ಟೆಯ ಶೌಕತ್ ಅಲಿ (32), ಹಳೆಯಂಗಡಿ ಸಂತೆಕಟ್ಟೆಯ ಝಾಕೀರ್ ಹುಸೇನ್(20), ಮೂಲ್ಕಿ ಕೊಲಾಡು ಕೆ.ಎಸ್. ನಗರದ ಮಹಮ್ಮದ್ ಅನ್ವರ್ (26), ಹಳೆಯಂಗಡಿ ಇಂದಿರಾ ನಗರದ ಮೆಹರಾಜ್ (26) ಮತ್ತು ಪಡುಪಣಂಬೂರಿನ ಓರ್ವ ಬಾಲಕ ಬಂಧಿತರು.
Related Articles
Advertisement
ತಂಡದ ಮೇಲಿನ ಪ್ರಮುಖ ಆರೋಪಗಳು2017ರಲ್ಲಿ ಐಕಳದ ಮನೆಯೊಂದರಲ್ಲಿ ಒಂಟಿಯಾಗಿದ್ದ ವಸಂತಿ ಶೆಟ್ಟಿ (60) ಮನೆಗೆ ಕರೆಂಟ್ ಬಿಲ್ ಕೇಳುವ ನೆಪದಲ್ಲಿ ಬಂದು ಕುಡಿಯಲು ನೀರು ಕೇಳಿ ಅವರ ಕುತ್ತಿಗೆ ಸೀಳಿ ಕೊಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದು, ಹಳೆಯಂಗಡಿಯ ಪಕ್ಷಿಕೆರೆ ಬಳಿಯ ಕಾವೇರಿ (60) ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ ಮಾಡಿದ್ದು, ಕೊಲಾ°ಡು ಗುತ್ತು ಬಳಿಯ ಶಾರದಾ ಶೆಟ್ಟಿ (62) ಮನೆಗೂ ಕರೆಂಟ್ ಬಿಲ್ ನೆಪದಲ್ಲಿ ಬಂದು ನೀರು ಕೇಳಿ ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ ಮಾಡಿದ್ದು ಸಹಿ ತ ಮೂಲ್ಕಿ, ಶಿರ್ವ, ಪಾಂಡೇಶ್ವರ, ಬಂದರು ಮುಂತಾದ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನದ ಆರೋಪಗಳು ಈ ತಂಡದ ಮೇಲಿವೆ. ಇನ್ನಷ್ಟು ಪ್ರಕರಣ ಬಯಲಿಗೆ?
ಬಂಧಿತರಿಗೆ ಯಾವುದೇ ಉದ್ಯೋಗ ಇರದಿದ್ದರೂ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬುದು ತನಿಖೆ ಯಿಂದ ತಿಳಿದು ಬಂದಿದೆ. ಇವರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ನಿರೀ ಕ್ಷೆ ಪೊಲೀಸರಲ್ಲಿದೆ. ಇವರಿಗೆ ಸಹಕರಿಸುತ್ತಿರುವ ಆರೋಪದಲ್ಲಿ ಇನ್ನೂ ಕೆಲವರು ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ.