Advertisement

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

06:13 PM Nov 16, 2024 | ಸುಹಾನ್ ಶೇಕ್ |

ಭಾರತದಲ್ಲಿ ಕಿರುತೆರೆ ವೀಕ್ಷಕರು ಹೆಚ್ಚಾಗಿದ್ದಾರೆ. ಧಾರಾವಾಹಿಗಳು ಭಾರತೀಯರ ದಿನನಿತ್ಯದ ಮನರಂಜನೆಯ ಭಾಗವಾಗಿ ಬಿಟ್ಟಿದೆ. ಇದೇ ಕಾರಣದಿಂದ ಕಿರುತೆರೆಯ ಕಲಾವಿದರು ವೀಕ್ಷಕರ ಮನದಲ್ಲಿ ಯಾವ ಸಿನಿಮಾ ಸೂಪರ್‌ಗಳಿಗೂ ಕಮ್ಮಿಯಿಲ್ಲದಂತಹ ಪ್ರೀತಿ – ಪ್ರೋತ್ಸಾಹವನ್ನು ಪಡೆದುಕೊಂಡಿದ್ದಾರೆ.

Advertisement

ಧಾರಾವಾಹಿಗಳು ಸಿನಿಮಾರಂಗಕ್ಕೆ ಪ್ರವೇಶಿಸಲು ಸೇತುವೆ ಆಗುತ್ತದೆ ಎಂದರೆ ತಪ್ಪಾಗದು. ವರ್ಷಾನುಗಟ್ಟಲೆ ಪ್ರಸಾರವಾಗುವ ಸೀರಿಯಲ್‌ಗಳು ಅನೇಕರನ್ನು ಸ್ಟಾರ್‌ ಗಳನ್ನಾಗಿ ಮಾಡಿದೆ. ಹೀಗೆ ಕಿರುತೆರೆಯಲ್ಲಿ ಮಿಂಚಿ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದವರು ಹಲವರು.. ಇಲ್ಲಿದೆ ಅಂಥ ಖ್ಯಾತನಾಮರ ಪಟ್ಟಿ..

ರಾಧಿಕಾ ಮದನ್ (Radhika Madan):  2021ರಲ್ಲಿ ಬಾಲಿವುಡ್‌ನಲ್ಲಿ ʼಶಿದ್ದತ್ʼ ಎನ್ನುವ ಸಿನಿಮಾವೊಂದು ಬಂದಿತ್ತು. ವಿಕ್ಕಿ ಕೌಶಲ್‌ ಸಹೋದರ ಸನ್ನಿ ಕೌಶಲ್‌ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಿದ್ದರು. ನಾಯಕಿಯಾಗಿ ರಾಧಿಕಾ ಮದನ್‌ ಕಾಣಿಸಿಕೊಂಡಿದ್ದರು.

ತನ್ನ ಮಾದಕ ನೋಟದಿಂದ, ಅದ್ಭುತ ಅಭಿನಯದಿಂದ ರಾಧಿಕಾ ಸಿನಿಮಾದಲ್ಲಿ ಮೋಡಿ ಮಾಡಿದ್ದರು. ʼಪಟಾಕʼ ಸಿನಿಮಾದ ಮೂಲಕ ಬಿಟೌನ್‌ಗೆ ಎಂಟ್ರಿ ಕೊಟ್ಟಿದ್ದ ರಾಧಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುವ ಮುನ್ನ ಕಿರುತೆರೆಯಲ್ಲಿ ಮಿಂಚಿದ್ದರು.

Advertisement

ʼಮೇರಿ ಆಶಿಕಿ ತುಮ್ ಸೆ ಹೈʼ ಧಾರಾವಾಹಿ ಕಾಣಿಸಿಕೊಂಡಿದ್ದ ಅವರು ‘ಝಲಕ್ ದಿಖ್ಲಾ ಜಾ 8’ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದಾದ ನಂತರ ಬಾಲಿವುಡ್‌ಗೆ ಅವರ ಎಂಟ್ರಿ ಆಗಿತ್ತು.

ʼಮೋನಿಕಾ ಓ ಮೈ ಡಾರ್ಲಿಂಗ್ʼ,ʼʼಕುತ್ತೆʼ, ಕಚ್ಚಿ ಲಿಂಬುʼ, ʼಸರ್ಫಿರಾʼ ,ʼಅಂಗ್ರೇಜಿ ಮೀಡಿಯಮ್‌ʼ,  ʼಶಿದ್ದತ್‌ʼ  ಸೇರಿದಂತೆ ಹಲವು ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

ಮೋನಾ ಸಿಂಗ್ (Mona Singh): ಬಾಲಿವುಡ್‌ ಸಿನಿಮಾರಂಗದಲ್ಲಿ ಇಂದು ಮೋನಾ ಸಿಂಗ್‌ ಜನಪ್ರಿಯ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇಂದಿಗೂ ಅವರನ್ನು ಜನ ಹೆಚ್ಚಾಗಿ ಇಷ್ಟಪಡುತ್ತಿರುವುದು ಟಿವಿ ಲೋಕದಲ್ಲಿ ಅವರು ಕಾಣಿಸಿಕೊಂಡಿದ್ದ ಪಾತ್ರಗಳಿಂದಲೇ ಎಂದರೆ ತಪ್ಪಾಗದು. ʼಜಸ್ಸಿ ಜೈಸ್ಸಿ ಕೋಯಿ ನಹೀಂʼ ಮೂಲಕ ಹಲವು ವರ್ಷ ಸಣ್ಣ ಪರದೆಯಲ್ಲಿ ಮಿಂಚಿದ್ದರು. ʼಕ್ಯಾ ಹುವಾ ತೇರಾ ವಾದʼ ಮತ್ತು ʼಕವಚ್‌ʼ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದ ಧಾರಾವಾಹಿಗಳಾಗಿತ್ತು.

ಸೀರಿಯಲ್‌ನಲ್ಲಿರುವಾಗಲೇ ಅವರಿಗೆ ಹಲವು ಸಿನಿಮಾಗಳಿಂದ ಆಫರ್‌ಗಳು ಬರುತ್ತಿತ್ತು. ಇದರಲ್ಲಿ ರಾಜ್‌ ಕುಮಾರ್‌ ಹಿರಾನಿ ಅವರ ʼ3 ಈಡಿಯೇಟ್ಸ್‌ʼ ಕೂಡ ಒಂದು. ‌ʼಉಟ್ ಪತಾಂಗ್ʼ, ʼಲಾಲ್ ಸಿಂಗ್ ಚಡ್ಡಾʼ ʼಮುಂಜ್ಯಾʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಸಿನಿಮಾ ಮಾತ್ರವಲ್ಲದೆ ಓಟಿಟಿಯಲ್ಲೂ ಅವರು ತನ್ನ ಛಾಪನ್ನು ಮೂಡಿಸಿದ್ದಾರೆ. ʼಕೆಹನೆ ಕೊ ಹಮ್ಸಫರ್ ಹೈʼ,  ʼಮಿಷನ್‌ ಓವರ್‌ ಮಾರ್ಸ್‌ʼ, ʼಮೇಡ್ ಇನ್ ಹೆವೆನ್ʼ, ʼಕಾಲಾ ಪಾನಿʼ ವೆಬ್‌ ಸಿರೀಸ್‌ನಲ್ಲೂ ಅವರು ನಟಿಸಿ ಗಮನ ಸೆಳೆದಿದ್ದಾರೆ.

ವಿಕ್ರಾಂತ್ ಮಾಸ್ಸೆ(Vikrant Massey): ಇತ್ತೀಚೆಗೆ ಬಂದ ʼ12th ಫೇಲ್‌ʼ ಮೂಲಕ ನ್ಯಾಷನಲ್‌ ವೈಡ್‌ ಫೇಮ್‌ ಆದ ವಿಕ್ರಾಂತ್‌ ಒಂದು ಕಾಲದಲ್ಲಿ ಕಿರುತೆರೆಯ ಖ್ಯಾತ ನಟರಲ್ಲಿ ಒಬ್ಬರಾಗಿದ್ದರು. ʼಧೂಮ್ ಮಚಾವೋ ಧೂಮ್ʼ ಮ್ಯೂಸಿಕಲ್‌ ಧಾರಾವಾಹಿಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಅವರು ʼಕುಬೂಲ್ ಹೈʼ, ʼಬಾಲಿಕಾ ವಧುʼ, ʼಧರಮ್ ವೀರ್ʼ ನಂತಹ ಹಿಟ್‌ ಧಾರಾವಾಹಿಗಳಲ್ಲಿ ನಟಿಸಿದ್ದರು.

ಹಲವು ವರ್ಷಗಳ ಕಿರುತೆರೆಯಲ್ಲಿ ಗುರುತಿಸಿಕೊಂಡ ಬಳಿಕ ʼಲೂಟೆರಾʼ , ʼದಿಲ್ ಧಡಕ್ನೆ ದೋʼ ʼಹಾಫ್ ಗರ್ಲ್‌ಫ್ರೆಂಡ್‌ʼ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಬಾಲಿವುಡ್‌ಗೆ ಎಂಟ್ರಿ ಆದರು. ಹೀಗೆ ಕೆಲವು ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರದಲ್ಲಿ ನಟಿಸಿದ ನಂತರ ʼಚಪಾಕ್ʼ, ʼ12th ಫೇಲ್‌ʼ,   ʼಹಸೀನ್ ದಿಲ್ರುಬಾ, ʼಫಿರ್ ಆಯಿ ಹಸೆನ್ ದಿಲ್ರುಬಾʼ ಸಿನಿಮಾದಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡರು.

ಓಟಿಟಿಯಲ್ಲಿ ʼಮಿರ್ಜಾಪುರ್ʼ, ʼಬ್ರೋಕನ್ ಬಟ್ ಬ್ಯೂಟಿಫುಲ್‌ʼ, ʼಮೇಡ್ ಇನ್ ಹೆವೆನ್ʼ ಮುಂತಾದ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರ ʼಸಬರಮತಿ ರಿಪೋರ್ಟ್‌ʼ ಸಿನಿಮಾ ರಿಲೀಸ್‌ ಆಗಿದೆ.

ಮೌನಿ ರಾಯ್‌ (Mouni Roy): ಬಿಟೌನ್‌ ಮೋಹಕ ಬೆಡಗಿ ಮೌನಿ ರಾಯ್‌ ಕಿರುತೆರೆಯಲ್ಲಿ ʼನಾಗಿನ್‌ʼ ಆಗಿಯೇ ಅಪಾರ ಮನೆಮಂದಿಯನ್ನು ರಂಜಿಸಿದವರು. ʼಕ್ಯೂಂಕಿ ಸಾಸ್ ಭೀ ಕಭಿ ಬಹು ಥಿʼ , ʼದೇವೋನ್ ಕೆ ದೇವ್…ಮಹಾದೇವ್ʼ ಧಾರಾವಾಹಿಯಲ್ಲಿ ನಟಿಸಿದ ಮೌನಿ ರಾಯ್ ಅವರಿಗೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ʼನಾಗಿನ್‌ʼ ಹಾಗೂ ʼನಾಗಿನ್‌ -2ʼ. ನಾಗಕನ್ಯೆಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ಮೌನಿ ರಾಯ್‌ ತನ್ನ ಮಾದಕ ನೋಟದಿಂದಲೇ ಬಿಟೌನ್‌ನಲ್ಲಿ ಸದ್ದು ಮಾಡಿದವರು.

ʼಗೋಲ್ಡ್‌ʼ, ʼಬ್ರಹ್ಮಾಸ್ತ್ರʼ, ‘ಕೆಜಿಎಫ್‌ -1ʼ, ʼವೇದಾʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಟಂ ಸಾಂಗ್ಸ್‌ಗಳಲ್ಲೂ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಮೃಣಾಲ್‌ ಠಾಕೂರ್‌ (Mrunal Thakur): ʼಸೀತಾ ರಾಮಂʼ ಬೆಡಗಿ ಮೃಣಾಲ್‌ ಠಾಕೂರ್‌ ಸಿನಿಮಾರಂಗಕ್ಕೆ ಬರುವ ಮುನ್ನ ಕಿರುತೆರೆಯಲ್ಲಿ ಹಲವು ವರ್ಷ ಕೆಲಸ ಮಾಡಿದವರು. ಜನಪ್ರಿಯ ಧಾರಾವಾಹಿಗಳಾಗಿದ್ದ ʼಮುಜ್ಸೆ ಕುಛ್ ಕೆಹ್ತಿʼ,  ʼಯೇ ಖಮೋಶಿಯಾನ್ʼ , ʼಕುಂಕುಮ್ ಭಾಗ್ಯʼದಲ್ಲಿ ನಟಿಸಿದ್ದರು.

ʼಕುಂಕುಮ್‌ ಭಾಗ್ಯʼ ದಲ್ಲಿ ಅವರ ʼ ಬುಲ್ ಬುಲ್ ಅರೋರಾʼ ಪಾತ್ರ ಸಣ್ಣ ಪರೆದ ವೀಕ್ಷಕರ ಮನಗೆದ್ದಿತ್ತು. ಅರ್ಜಿತ್ ತನೇಜಾ ಜತೆ ಜೋಡಿಯಾಗಿ ಕಾಣಿಸಿಕೊಂಡಿದ್ದಾ ಅವರು ಈ ಧಾರಾವಾಹಿ ಬಿಟ್ಟು ಬಂದಾಗ ಅನೇಕರು ಶಾಕ್‌ ಆಗಿದ್ದರು.

ಇದಾದ ಬಳಿಕ ಅವರು ಹೃತಿಕ್‌ ರೋಷನ್‌ ಅವರ ʼಸೂಪರ್‌ 30ʼ ಸಿನಿಮಾದ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದರು. ಈ ಸಿನಿಮಾದ ಬಳಿಕ ʼಧಮಾಕಾʼ, ʼತೂಫಾನ್ʼ, ʼಲವ್ ಸೋನಿಯಾʼ, ʼಬಟ್ಲಾ ಹೌಸ್ʼ ಸೇರಿದಂತೆ ಸಾಲು ಸಾಲು ಸಿನಿಮಾದಲ್ಲಿ ಕಾಣಿಸಿಕೊಂಡರು.

ಹಿಂದಿ ಮಾತ್ರವಲ್ಲದೆ ಸೌತ್‌ ಮೂವಿಗಳಾದ ʼಹಾಯ್ ನನ್ನಾʼ, ʼಸೀತಾ ರಾಮಂʼ ʼಜೆರ್ಸಿʼ ಅಂತಹ ಸಿನಿಮಾಗಳು ಮೃಣಾಲ್‌ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು.

ರೋನಿತ್ ರಾಯ್ (Ronit Roy): ಪೋಷಕ ಪಾತ್ರಗಳಲ್ಲಿ ಪವರ್‌ ಫುಲ್‌ ಆಗಿ ಅಭಿನಯಿಸುವ ರೋನಿತ್‌ ರಾಯ್‌ ಬಿಟೌನ್‌ಗೆ ಎಂಟ್ರಿ ಆಗಲು ಕಾರಣವಾದದ್ದು ಜನಪ್ರಿಯ ಧಾರಾವಾಹಿಗಳು. ʼಕ್ಯೂಂಕಿ ಸಾಸ್ ಭೀ ಕಭಿ ಬಹು ಥಿʼ, ʼಕಸೌತಿ ಜಿಂದಗಿ ಕೇʼ, ʼಬಂದಿನಿʼ, ʼಅದಾಲತ್ʼ ನಂತಹ ಸೀರಿಯಲ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಕಿರುತೆರೆಯಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅವರಿಗೆ ಬಾಲಿವುಡ್ ಅವಕಾಶಗಳು ಬರಲು ಆರಂಭಿಸಿತ್ತು.

ʼಉಡಾನ್‌ʼ , ʼ2 ಸ್ಟೇಟ್ಸ್‌ʼ , ʼಕಾಬಿಲ್ʼ, ʼಲೈಗರ್‌ʼ,  ʼಸ್ಟೊಡೆಂಟ್ಸ್‌ ಆಫ್‌ ದಿ ಇಯರ್‌ʼ, ʼಶೂಟೌಟ್  ವಡಾಲಾʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನೆಗೆಟಿವ್‌ ಹಾಗೂ ಫವರ್‌ ಫುಲ್‌ ಕ್ಯಾರೆಕ್ಟರ್‌ ಪ್ಲೇ ಮಾಡುವ ರೋನಿತ್‌ ʼಕೆಹನೆ ಕೋ ಹಮ್ಸಾಫರ್ ಹೈʼ , ‌ʼಹೊಸ್ಟೇಜ್ʼ ಸೇರಿದಂತೆ ಹಲವು ವೆಬ್‌ ಸಿರೀಸ್‌ನಲ್ಲೂ ಅವರು ನಟಿಸಿದ್ದಾರೆ.

*ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next