Advertisement
ಜಯನಗರದಲ್ಲಿರುವ ಇನ್ಫೊಸಿಸ್ ಸೈನ್ಸ್ ಫೌಂಡೇಷನ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಇನ್ಫೊಸಿಸ್ ಪ್ರಶಸ್ತಿ 2024’ಕ್ಕೆ ಆಯ್ಕೆಯಾದವರ ಹೆಸರುಗಳನ್ನು ಐಎಸ್‌ಎಫ್ ನ ಟ್ರಸ್ಟಿಗಳಾದ ಕ್ರಿಸ್ ಗೋಪಾಲಕೃಷ್ಣನ್ (ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ), ನಾರಾಯಣ ಮೂರ್ತಿ, ಕೆ.ದಿನೇಶ್, ಡಾ. ಪ್ರತಿಮಾ ಮೂರ್ತಿ, ಮೋಹನದಾಸ್ ಪೈ ಮತ್ತು ಎಸ್.ಡಿ.ಶಿಬುಲಾಲ್ ಘೋಷಿಸಿದರು.
Related Articles
Advertisement
ಮಹಮೂದ್ ಕೂರಿಯಾ: ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಎಡಿನ್ಬರ್ಗ್ ವಿವಿಯ ಇತಿಹಾಸ, ಶಾಸ್ತ್ರೀಯ ಮತ್ತು ಪುರಾತತ್ವ ಸ್ಕೂಲ್‌ನ ಪ್ರಾಧ್ಯಾ ಪಕ ಮಹಮೂದ್ ಕೂರಿ ಯಾ ಅವರಿಗೆ ಪ್ರಶಸ್ತಿ ಘೋಷಿ ಸಲಾಗಿದೆ. ಜಾಗತಿಕ ದೃಷ್ಟಿಕೋ ನದಿಂದ ಇಸ್ಲಾಂ ಮತ್ತು ಸಾಗರ ಸಂಬಂಧಿ ವಿಷಯ, ಇನ್ನಿತರ ಸಂಶೋಧನೆ, ಕೊಡುಗೆ ಗುರುತಿಸಿ ಪ್ರಶಸಿ.
ಸಿದ್ಧೇಶ್ ಕಾಮತ್: ಜೀವ ವಿಜ್ಞಾನ ವಿಭಾಗದಲ್ಲಿ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಜೀವವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಸಿದ್ಧೇಶ್ ಕಾಮತ್‌ಗೆ ಪ್ರಶಸ್ತಿ ಸಂದಿದೆ. ಜೀವಿಗಳ ಮೇಲೆ ಪ್ರಭಾವ ಬೀರುವ ಕೊಬ್ಬಿನ ಅಂಶಗಳ ಬಗ್ಗೆ ಅವರು ನಡೆಸಿರುವ ಸಂಶೋಧನೆ ಗುರುತಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ.
ನೀನಾ ಗುಪ್ತಾ: ಗಣಿತ ವಿಜ್ಞಾನ ವರ್ಗದಲ್ಲಿ ಕೋಲ್ಕತ್ತದ ಭಾರತೀಯ ಸಾಂಖಿಕ ಸಂಸ್ಥೆಯ (ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್) ತಾತ್ವಿಕ ಸಂಖ್ಯಾಶಾಸ್ತ್ರ ಮತ್ತು ಗಣಿತ ವಿಭಾಗದ ಪ್ರಾಧ್ಯಾಪಕಿ ನೀನಾ ಗುಪ್ತಾಗೆ ಪ್ರಶಸ್ತಿ. ಆಸ್ಕರ್ ಜಾರಿಸ್ಕಿ 1949ರಲ್ಲಿ ಎತ್ತಿದ ಜಾರಿಸ್ಕಿ ಕ್ಯಾನ್ಸಲೇಷನ್ ಪ್ರಾಬ್ಲಿಮ್ ಸುತ್ತ ನಡೆಸಿರುವ ಕೆಲಸ ಗುರುತಿಸಿ ಈ ಪ್ರಶಸ್ತಿ.
ವೇದಿಕಾ ಖೇಮಾನಿ: ಭೌತ ವಿಜ್ಞಾನ ವಿಭಾಗದಲ್ಲಿ ಸ್ಟ್ಯಾನ್ಫೋರ್ಡ್ ವಿವಿಯಸಹ ಪ್ರಾಧ್ಯಾಪಕಿ ವೇದಿಕಾ ಖೇಮಾನಿ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಕ್ವಾಂಟಂ ಕಂಪ್ಯೂಟಿಂಗ್ ಹಾಗೂ ಇತರ ತತ್ರಜ್ಞಾನಗಳ ಭವಿಷ್ಯದ ಮೇಲೆ ಬಹುಮುಖ್ಯವಾದ ಪರಿಣಾಮ ಉಂಟು ಮಾಡ ಬಲ್ಲ ರೀತಿಯಲ್ಲಿ ಅವರ ಕೊಡುಗೆ ಗಮನಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ.