Advertisement

PKL 2024: ಬೆಂಗಳೂರು ಬುಲ್ಸ್‌ ಗೆ ಗೆಲುವಿನ ದಿನ

10:39 PM Oct 29, 2024 | Team Udayavani |

ಹೈದರಾಬಾದ್‌: ಹನ್ನೊಂದನೇ ಪ್ರೊ ಕಬಡ್ಡಿ ಕೂಟದ 5ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಗೆಲುವಿನ ಖಾತೆ ತೆರೆದಿದೆ. ಮಂಗಳವಾರ ದಬಾಂಗ್‌ ಡೆಲ್ಲಿ ವಿರುದ್ಧದ ಮುಖಾಮುಖೀಯನ್ನು ಏಕೈಕ ಅಂಕದಿಂದ ಜಯಿಸಿತು (34-33).

Advertisement

ವಿರಾಮದ ವೇಳೆ 14-22ರ ಹಿನ್ನಡೆಯಲ್ಲಿದ್ದ ಬುಲ್ಸ್‌ ದ್ವಿತೀಯಾರ್ಧದಲ್ಲಿ ಪ್ರಬಲ ಹೋರಾಟ ಸಂಘಟಿಸಿತು. ಕೊನೆಯ 2 ನಿಮಿಷಗಳಲ್ಲಿ ಡೆಲ್ಲಿಯನ್ನು ಓವರ್‌ಟೇಕ್‌ ಮಾಡುವಲ್ಲಿ ಯಶಸ್ವಿಯಾಯಿತು.

ರೈಡರ್‌ ಜೈ ಭಗವಾನ್‌ 11, ನಾಯಕ ಪರ್ದೀಪ್‌ ನರ್ವಾಲ್‌ 7, ನಿತಿನ್‌ ರಾವಲ್‌ 5 ಅಂಕ ಗಳಿಸಿ ಬುಲ್ಸ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಡೆಲ್ಲಿ ಪರ ನಾಯಕ ಆಶು ಮಲಿಕ್‌ 13 ಅಂಕ ಗಳಿಸಿ ಮಿಂಚಿದರು.

ಬೆಂಗಾಲ್‌-ಪುಣೇರಿ ಟೈ

ಬೆಂಗಾಲ್‌ ವಾರಿಯರ್-ಪುಣೇರಿ ಪಲ್ಟಾನ್‌ ನಡುವಿನ ಮೊದಲ ಪಂದ್ಯ 32-32 ಅಂಕಗಳಿಂದ ಟೈ ಆಯಿತು. ಬೆಂಗಾಲ್‌ ರೈಡರ್‌ ಸುಶೀಲ್‌ ಕಾಂಬ್ರೇಕರ್‌ 10, ನಿತಿನ್‌ ಧನ್ಕರ್‌ 6 ಅಂಕ ಗಳಿಸಿದರು. ಪುಣೇರಿ ಪರ ರೈಡರ್‌ಗಳಾದ ಆಕಾಶ್‌ ಶಿಂಧೆ ಮತ್ತು ಪಂಕಜ್‌ ಮೋಹಿತೆ ತಲಾ 8 ಅಂಕ ತಂದಿತ್ತರು. ಈ ಫ‌ಲಿತಾಂಶದ ಹೊರತಾಗಿಯೂ ಪುಣೇರಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ (19 ಅಂಕ).

Advertisement
Advertisement

Udayavani is now on Telegram. Click here to join our channel and stay updated with the latest news.

Next