ದುಶಾಂಬೆ: ಪೂರ್ವ ತಜಕಿಸ್ತಾನದಲ್ಲಿ ಗುರುವಾರ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಸ್ಥಳೀಯ ಕಾಲಮಾನ ಮುಂಜಾನೆ 5:37ರ ಸುಮಾರಿಗೆ ಸುಮಾರು 20.5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಭೂಕಂಪದ ಕೇಂದ್ರಬಿಂದುವು ಅಫ್ಘಾನಿಸ್ತಾನ ಮತ್ತು ಚೀನಾದ ಗಡಿಯಲ್ಲಿರುವ ಅರೆ ಸ್ವಾಯತ್ತ ಪೂರ್ವ ಪ್ರದೇಶವಾದ ಗೊರ್ನೊ-ಬದಕ್ಷನ್ ಪ್ರದೇಶದ ಸಮೀಪದಲ್ಲಿದೆ. ಈ ಪ್ರದೇಶವು ವಿರಳ ಜನಸಂಖ್ಯೆಯನ್ನು ಹೊಂದಿದೆ ಮತ್ತು ಎತ್ತರದ ಪಾಮಿರ್ ಪರ್ವತಗಳಿಂದ ಆವೃತವಾಗಿದೆ.
ಇದನ್ನೂ ಓದಿ:ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ 25,000 ಕಿ.ಲೀ ಡೀಸೆಲ್ ಹೆಚ್ಚುವರಿ ವಿತರಣೆಗೆ ಆದೇಶ
ಯುಎಸ್ ಜಿಎಸ್ ಮಾಹಿತಿಯ ಪ್ರಕಾರ, ಹೆಚ್ಚಿನ ಜನರು ಈ ಭೂಕಂಪದ ಪರಿಣಾಮಕ್ಕೆ ಒಳಗಾಗಿಲ್ಲ.
ಮೊದಲ ಭೂಕಂಪನ ನಡೆದ 20 ನಿಮಿಷಗಳ ಬಳಿಕ ಇದೇ ಪ್ರದೇಶದಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಅದರ ತೀವ್ರತೆ 5.0 ರಷ್ಟಿತ್ತು.