Advertisement

Investment: ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ

08:07 PM Aug 20, 2023 | Team Udayavani |

ನವದೆಹಲಿ: 2022-23ರಲ್ಲಿ ದೇಶಾದ್ಯಂತ ಆಗಿರುವ ಒಟ್ಟಾರೆ ಬಂಡವಾಳ ಹೂಡಿಕೆ ಪ್ರಸ್ತಾಪ(ಬ್ಯಾಂಕ್‌ ನೆರವಿನ ಹೂಡಿಕೆ)ಗಳ ಪೈಕಿ ಅರ್ಧಕ್ಕೂ ಹೆಚ್ಚು ಪಾಲನ್ನು ಕರ್ನಾಟಕ ಸೇರಿದಂತೆ 5 ರಾಜ್ಯಗಳು ಹಂಚಿಕೊಂಡಿವೆ.

Advertisement

ಈ ಅವಧಿಯಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಬಡ್ಡಿ ದರ ಹೆಚ್ಚಳವಾಗಿದ್ದರೂ, ಒಟ್ಟಾರೆ ಹೂಡಿಕೆ ಪ್ರಸ್ತಾಪಗಳ ಪ್ರಮಾಣ ಶೇ.79.50ರಷ್ಟು ಏರಿಕೆಯಾಗಿವೆ. 2014-15ರ ನಂತರದಲ್ಲಿ ಆಗಿರುವ ಅತಿ ಹೆಚ್ಚಿನ ಹೂಡಿಕೆ ಪ್ರಸ್ತಾಪ ಇದಾಗಿದ್ದು, ದಾಖಲೆಯ ಬರೋಬ್ಬರಿ 3,52,624 ಕೋಟಿ ರೂ.ಗಳ ಪ್ರಸ್ತಾಪಗಳು ಬಂದಿವೆ. ಈ ಪೈಕಿ ಉತ್ತರಪ್ರದೇಶ, ಗುಜರಾತ್‌, ಒಡಿಶಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಪಾಲೇ 2,01,700 ಕೋಟಿ ರೂ. ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

2022-23ರಲ್ಲಿ ಸುಮಾರು 547 ಯೋಜನೆಗಳಿಗೆ(2,66,547 ಕೋಟಿ ರೂ. ವೆಚ್ಚ) ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆತಿದ್ದರೆ, 2021-22ರಲ್ಲಿ 401 ಯೋಜನೆಗಳಿಗೆ(1,41,976 ಕೋಟಿ ರೂ. ವೆಚ್ಚ) ಬ್ಯಾಂಕುಗಳಿಂದ ಹಣಕಾಸು ಸಹಾಯ ದೊರೆತಿದೆ. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಮೊತ್ತದಲ್ಲಿ ಶೇ.87.7ರಷ್ಟು ಏರಿಕೆ ಕಂಡುಬಂದಿದೆ ಎಂದೂ ಆರ್‌ಬಿಐ ಹೇಳಿದೆ.

ಟಾಪ್‌ 5 ರಾಜ್ಯಗಳು ಮತ್ತು ಹೂಡಿಕೆ ಪ್ರಮಾಣ

  1. ಉತ್ತರಪ್ರದೇಶ – ಶೇ.16.2
  2. ಗುಜರಾತ್‌- ಶೇ.14
  3. ಒಡಿಶಾ – ಶೇ.11.8
  4. ಮಹಾರಾಷ್ಟ್ರ- ಶೇ.7.9
  5. ಕರ್ನಾಟಕ -ಶೇ.7.3

ಅತಿ ಕಡಿಮೆ ಹೂಡಿಕೆ ಪಡೆದ ರಾಜ್ಯಗಳು

  1. ಕೇರಳ – ಶೇ.0.9
  2. ಗೋವಾ – ಶೇ. 0.8
  3. ಅಸ್ಸಾಂ- ಶೇ.0.7
Advertisement

– 2022-23ರ ಬಂಡವಾಳ ವೆಚ್ಚ 8 ವರ್ಷಗಳಲ್ಲೇ ಅತ್ಯಧಿಕ

– ಹೊಸ ಹೂಡಿಕೆ ಯೋಜನೆಗಳಲ್ಲಿ ಶೇ.80ರಷ್ಟು ಹೆಚ್ಚಳ

– ಈ ಪೈಕಿ 5 ರಾಜ್ಯಗಳ ಪಾಲು ಶೇ.57

 

Advertisement

Udayavani is now on Telegram. Click here to join our channel and stay updated with the latest news.

Next