Advertisement

ಕೊಹ್ಲಿ ಶತಕಕ್ಕೆ ಒಲಿದ ಸರಣಿ; ಭಾರತಕ್ಕೆ 8 ವಿಕೆಟ್‌ ಗೆಲುವು

03:20 AM Jul 08, 2017 | |

ಕಿಂಗ್‌ಸ್ಟನ್‌ (ಜಮೈಕಾ): ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿದ ಭಾರತ ಏಕದಿನ ಸರಣಿಯನ್ನು 3-1ರಿಂದ ತನ್ನದಾಗಿಸಿಕೊಂಡಿದೆ. 

Advertisement

ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರ “ಚೇಸಿಂಗ್‌ ದಾಖಲೆ’ ಶತಕ, ಮೊಹಮ್ಮದ್‌ ಶಮಿ-ಉಮೇಶ್‌ ಯಾದವ್‌ ಜೋಡಿಯ ಘಾತಕ ಬೌಲಿಂಗ್‌ ಟೀಮ್‌ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

ಗುರುವಾರ “ಸಬೀನಾ ಪಾರ್ಕ್‌’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸಿಗೆ ಗಳಿಸಲು ಸಾಧ್ಯವಾದದ್ದು 9ಕ್ಕೆ 205 ರನ್‌ ಮಾತ್ರ. ಭಾರತ 36.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 206 ರನ್‌ ಬಾರಿಸಿತು. ಶತಕವೀರ ಕೊಹ್ಲಿ ಪಂದ್ಯಶ್ರೇಷ್ಠ, ಒಟ್ಟು 336 ರನ್‌ ಬಾರಿಸಿದ ಅಜಿಂಕ್ಯ ರಹಾನೆ ಸರಣಿಸ್ರೇಷ್ಠ ಗೌರವಕ್ಕೆ ಪಾತ್ರರಾದರು.

ಪೋರ್ಟ್‌ ಆಫ್ ಸ್ಪೇನ್‌ನಲ್ಲಿ ನಡೆದ ಮೊದಲ ಪಂದ್ಯ ಭಾರೀ ಮಳೆಯಿಂದ ರದ್ದುಗೊಂಡಿತ್ತು. ಇಲ್ಲೇ ನಡೆದ 2ನೇ ಪಂದ್ಯವನ್ನು 103 ರನ್ನುಗಳಿಂದ, ನಾರ್ತ್‌ ಸೌಂಡ್‌ನ‌ 3ನೇ ಮುಖಾಮುಖೀಯನ್ನು 93 ರನ್ನುಗಳಿಂದ ಗೆದ್ದ ಟೀಮ್‌ ಇಂಡಿಯಾ 2-0 ಮುನ್ನಡೆ ಸಾಧಿಸಿತು. ಆದರೆ 4ನೇ ಪಂದ್ಯದಲ್ಲಿ 11 ರನ್ನುಗಳ ನಂಬಲಾಗದ ಸೋಲುಂಡಿತು. ಇತ್ತಂಡಗಳಿನ್ನು ರವಿವಾರ ಕಿಂಗ್‌ಸ್ಟನ್‌ನಲ್ಲೇ ಏಕೈಕ ಟಿ-20 ಪಂದ್ಯದಲ್ಲಿ ಮುಖಾಮುಖೀಯಾಗಲಿವೆ.

ಕೊಹ್ಲಿ-ಕಾರ್ತಿಕ್‌ ಶತಕದ ಜತೆಯಾಟ
206 ರನ್ನುಗಳ ಸಣ್ಣ ಸವಾಲು ಪಡೆದಾಗಲೇ ಭಾರತದ ಗೆಲುವು ಖಾತ್ರಿಯಾಗಿತ್ತು. ಆದರೆ 4ನೇ ಪಂದ್ಯದಲ್ಲಿ 190 ರನ್‌ ಗಳಿಸಲಾಗದೆ ಪರದಾಡಿ ಸೋತ ದುಃಸ್ವಪ್ನವಿನ್ನೂ ಮಾಸಿರಲಿಲ್ಲ. ಕಿಂಗ್‌ಸ್ಟನ್‌ನಲ್ಲಿ ಇಂಥ ಯಾವುದೇ ತಾಪತ್ರಯ ಎದುರಾಗಲಿಲ್ಲ. ಸ್ವತಃ ನಾಯಕ ಕೊಹ್ಲಿಯೇ ಮುಂಚೂಣಿಯಲ್ಲಿ ನಿಂತು ತಂಡವನ್ನು ಸುರಕ್ಷಿತವಾಗಿ ದಡ ಸೇರಿಸಿದರು. ಆಗ ಅವರು 111ರಲ್ಲಿ ಅಜೇಯರಾಗಿದ್ದರು. 108 ಎಸೆತಗಳಲ್ಲಿ 28ನೇ ಶತಕ ಪೂರ್ತಿಗೊಳಿಸಿದ ಕೊಹ್ಲಿ, 115 ಎಸೆತಗಳಿಂದ ತಮ್ಮ ಅಜೇಯ ಇನ್ನಿಂಗ್ಸ್‌ ಕಟ್ಟಿದರು. ಈ ಪಂದ್ಯಶ್ರೇಷ್ಠ ಆಟದಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ ಒಳಗೊಂಡಿತ್ತು.ಕ್ಯಾಪ್ಟನ್‌ ಕೊಹ್ಲಿ ಜತೆ ಔಟಾಗದೆ ಉಳಿದವರು ದಿನೇಶ್‌ ಕಾರ್ತಿಕ್‌. ಇವರದು 50 ರನ್ನುಗಳ ಕೊಡುಗೆ (52 ಎಸೆತ, 5 ಬೌಂಡರಿ). ಕೊಹ್ಲಿ-ಕಾರ್ತಿಕ್‌ ಮುರಿಯದ 3ನೇ ವಿಕೆಟಿಗೆ 122 ರನ್‌ ಪೇರಿಸಿದರು.

Advertisement

39 ರನ್‌ ಹೊಡೆದ ಆರಂಭಕಾರ ಅಜಿಂಕ್ಯ ರಹಾನೆ ಭಾರತದ ಮತ್ತೂಬ್ಬ ಪ್ರಮುಖ ಸ್ಕೋರರ್‌. 51 ಎಸೆತ ಎದುರಿಸಿದ ರಹಾನೆ 5 ಬೌಂಡರಿ ಹೊಡೆದರು. ರಹಾನೆ-ಕೊಹ್ಲಿ ಜೋಡಿಯ 2ನೇ ವಿಕೆಟ್‌ ಜೆಯಾಟದಲ್ಲಿ 17.5 ಓವರ್‌ಗಳಿಂದ 79 ರನ್‌ ಹರಿದು ಬಂತು. ಸ್ಕೋರ್‌ 5 ರನ್‌ ಆಗಿದ್ದಾಗ ಶಿಖರ್‌ ಧವನ್‌ (4) ವಿಕೆಟ್‌ ಉರುಳಿತ್ತು.

ಸ್ಕೋರ್‌ಪಟ್ಟಿ
ವೆಸ್ಟ್‌ ಇಂಡೀಸ್‌

ಎವಿನ್‌ ಲೆವಿಸ್‌    ಸಿ ಕೊಹ್ಲಿ ಬಿ ಪಾಂಡ್ಯ    9
ಕೈಲ್‌ ಹೋಪ್‌    ಸಿ ಧವನ್‌ ಬಿ ಯಾದವ್‌    46
ಶೈ ಹೋಪ್‌    ಸಿ ರಹಾನೆ ಬಿ ಶಮಿ    51
ರೋಸ್ಟನ್‌ ಚೇಸ್‌    ಎಲ್‌ಬಿಡಬ್ಲ್ಯು ಯಾದವ್‌    0
ಜಾಸನ್‌ ಮೊಹಮ್ಮದ್‌    ಸಿ ಮತ್ತು ಬಿ ಜಾಧವ್‌    16
ಜಾಸನ್‌ ಹೋಲ್ಡರ್‌    ಸಿ ಧವನ್‌ ಬಿ ಶಮಿ    36
ರೋವ¾ನ್‌ ಪೊವೆಲ್‌    ಸಿ ಧೋನಿ ಬಿ ಯಾದವ್‌    31
ಆ್ಯಶೆÉ ನರ್ಸ್‌    ಸಿ ಕುಲದೀಪ್‌ ಬಿ ಶಮಿ    0
ದೇವೇಂದ್ರ ಬಿಶೂ    ಸಿ ಧೋನಿ ಬಿ ಶಮಿ    6
ಅಲ್ಜಾರಿ ಜೋಸೆಫ್    ಔಟಾಗದೆ    3
ಕೆಸ್ರಿಕ್‌ ವಿಲಿಯಮ್ಸ್‌    ಔಟಾಗದೆ    0
ಇತರ        7
ಒಟ್ಟು  (50 ಓವರ್‌ಗಳಲ್ಲಿ 9 ವಿಕೆಟಿಗೆ)        205
ವಿಕೆಟ್‌ ಪತನ: 1-39, 2-76, 3-76, 4-115, 5-163, 6-168, 7-171, 8-182, 9-205.
ಬೌಲಿಂಗ್‌:
ಮೊಹಮ್ಮದ್‌ ಶಮಿ        10-0-48-4
ಉಮೇಶ್‌ ಯಾದವ್‌        10-1-53-3
ಹಾರ್ದಿಕ್‌ ಪಾಂಡ್ಯ        6-0-27-1
ರವೀಂದ್ರ ಜಡೇಜ        10-1-27-0
ಕುಲದೀಪ್‌ ಯಾದವ್‌        10-0-36-0
ಕೇದಾರ್‌ ಜಾಧವ್‌        4-0-13-1

ಭಾರತ
ಅಜಿಂಕ್ಯ ರಹಾನೆ    ಎಲ್‌ಬಿಡಬ್ಲ್ಯು ಬಿಶೂ    39
ಶಿಖರ್‌ ಧವನ್‌    ಸಿ ಲೆವಿಸ್‌ ಬಿ ಜೋಸೆಫ್    4
ವಿರಾಟ್‌ ಕೊಹ್ಲಿ    ಔಟಾಗದೆ    111
ದಿನೇಶ್‌ ಕಾರ್ತಿಕ್‌    ಔಟಾಗದೆ    50
ಇತರ        2
ಒಟ್ಟು  (36.5 ಓವರ್‌ಗಳಲ್ಲಿ 2 ವಿಕೆಟಿಗೆ)        206
ವಿಕೆಟ್‌ ಪತನ: 1-5, 2-84.
ಬೌಲಿಂಗ್‌:
ಅಲ್ಜಾರಿ ಜೋಸೆಫ್        7-0-39-1
ಜಾಸನ್‌ ಹೋಲ್ಡರ್‌        8-1-35-0
ದೇವೇಂದ್ರ ಬಿಶೂ        8-0-42-1
ಕೆಸ್ರಿಕ್‌ ವಿಲಿಯಮ್ಸ್‌        8-0-40-0
ಆ್ಯಶೆÉ ನರ್ಸ್‌        4-0-34-0
ರೋವ¾ನ್‌ ಪೊವೆಲ್‌        1-0-6-0
ರೋಸ್ಟನ್‌ ಚೇಸ್‌        0.5-0-9-0

ಸರಣಿಶ್ರೇಷ್ಠ: ಅಜಿಂಕ್ಯ ರಹಾನೆ

ಎಕ್ಸ್‌ಟ್ರಾ ಇನ್ನಿಂಗ್ಸ್‌
* ವೆಸ್ಟ್‌ ಇಂಡೀಸ್‌ ನೆಲದಲ್ಲಿ ಭಾರತ ಸತತ 3ನೇ ಏಕದಿನ ಸರಣಿ ಜಯಿಸಿತು. 2009ರಲ್ಲಿ 2-1ರಿಂದ, 2011ರಲ್ಲಿ 3-2ರಿಂದ ಸರಣಿ ಗೆದ್ದಿತ್ತು. ಒಟ್ಟಾರೆಯಾಗಿ ಇದು ವಿಂಡೀಸ್‌ ವಿರುದ್ಧ ಭಾರತ ದಾಖಲಿಸಿದ ಸತತ 7ನೇ ಸರಣಿ ಗೆಲುವು.
* ಜಾಸನ್‌ ಹೋಲ್ಡರ್‌ ಸರಣಿ/ಕೂಟವೊಂದರ ಎಲ್ಲ 5 ಪಂದ್ಯಗಳಲ್ಲೂ ಟಾಸ್‌ ಗೆದ್ದ ವೆಸ್ಟ್‌ ಇಂಡೀಸಿನ 2ನೇ ನಾಯಕ. 1993-94ರ “ಹೀರೋ ಕಪ್‌’ ಪಂದ್ಯಾವಳಿಯ ವೇಳೆ ರಿಚಿ ರಿಚರ್ಡ್‌ಸನ್‌ ಕೂಡ ಐದೂ ಪಂದ್ಯಗಳಲ್ಲಿ ಟಾಸ್‌ ಗೆದ್ದಿದ್ದರು.
* ಶೈ ಹೋಪ್‌ ಸರಣಿಯೊಂದರಲ್ಲಿ ಮೊದಲ ಸಲ ಎರಡು “50 ಪ್ಲಸ್‌’ ರನ್‌ ದಾಖಲಿಸಿದರು. ಅವರು ಈ ಸರಣಿಯಲ್ಲಿ ಅರ್ಧ ಶತಕ ಹೊಡೆದ ವಿಂಡೀಸಿನ ಏಕೈಕ ಆಟಗಾರ.
* ಮೊಹಮ್ಮದ್‌ ಶಮಿ 6ನೇ ಸಲ, ವಿಂಡೀಸ್‌ ವಿರುದ್ಧ 3ನೇ ಸಲ ಪಂದ್ಯವೊಂದರಲ್ಲಿ 4 ವಿಕೆಟ್‌ ಕಿತ್ತರು.
* ದಿನೇಶ್‌ ಕಾರ್ತಿಕ್‌ 8ನೇ, ವಿಂಡೀಸ್‌ ವಿರುದ್ಧ 4ನೇ ಅರ್ಧ ಶತಕ ಹೊಡೆದರು. ಅವರು ಅರ್ಧ ಶತಕ ದಾಖಲಿಸಿದ ಎಲ್ಲ ಪಂದ್ಯಗಳಲ್ಲೂ ಭಾರತ ಜಯಿಸಿದೆ.
* ಅಜಿಂಕ್ಯ ರಹಾನೆ ವಿಂಡೀಸ್‌ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಅತ್ಯಧಿಕ ರನ್‌ ಬಾರಿಸಿದ ಭಾರತದ ಬ್ಯಾಟ್ಸ್‌ಮನ್‌ ಎನಿಸಿದರು (336).
* ರಹಾನೆ 5 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ 2ನೇ ಅತ್ಯಧಿಕ ರನ್‌ ಬಾರಿಸಿದ ಭಾರತದ ಆರಂಭಿಕನೆನಿಸಿದರು (336). 2015-16ರ ಆಸ್ಟ್ರೇಲಿಯ ಎದುರಿನ ಸರಣಿಯಲ್ಲಿ ರೋಹಿತ್‌ ಶರ್ಮ 441 ರನ್‌ ಬಾರಿಸಿದ್ದು ದಾಖಲೆ.
* ರಹಾನೆ ವಿದೇಶದ ದ್ವಿಪಕ್ಷೀಯ ಸರಣಿಯಲ್ಲಿ 300 ಪ್ಲಸ್‌ ರನ್‌ ಬಾರಿಸಿದ ಭಾರತದ 3ನೇ ಆರಂಭಕಾರ. ಆಸ್ಟ್ರೇಲಿಯದಲ್ಲಿ ಆಡಲಾದ 2015-16ರ ಸರಣಿಯಲ್ಲಿ ರೋಹಿತ್‌ ಶರ್ಮ 441 ರನ್‌, ಇಂಗ್ಲೆಂಡ್‌ನ‌ಲ್ಲಿ ಆಡಲಾದ 2007ರ ಸರಣಿಯಲ್ಲಿ ಸಚಿನ್‌ ತೆಂಡುಲ್ಕರ್‌ 374 ರನ್‌ ಬಾರಿಸಿ ಮೊದಲೆರಡು ಸ್ಥಾನ ಅಲಂಕರಿಸಿದ್ದಾರೆ.
* ಈ ಸರಣಿಯ ಕೊನೆಯ 10 ಓವರ್‌ಗಳಲ್ಲಿ (41-50) ವೆಸ್ಟ್‌ ಇಂಡೀಸ್‌ 138 ಎಸೆತ ನಿಭಾಯಿಸಿ ಕೇವಲ 3 ಬೌಂಡರಿ ಹೊಡೆಯಿತು. ಡೆತ್‌ ಓವರ್‌ಗಳಲ್ಲಿ ಬಂದದ್ದು ಕೇವಲ 87 ರನ್‌. ಸರಾಸರಿ 3.78.

Advertisement

Udayavani is now on Telegram. Click here to join our channel and stay updated with the latest news.

Next