Advertisement
ವಸಾಯಿ ಪೂರ್ವದ ಉಡುಪಿ ಹೊಟೇಲ್ ಗ್ರೌಂಡ್‌ನಲ್ಲಿ ಫೆ. 20ರಂದು ನಡೆದ ಶ್ರೀ ದೇವಿ ಯಕ್ಷಕಲಾ ನಿಲಯದ 5ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ವಸಾಯಿ ಪರಿಸರದಲ್ಲಿ ಶಾಲೆ ನಿರ್ಮಿಸುವ ಯೋಜನೆ ಕೈಗೊಳ್ಳಬೇಕು ಎಂದು ಸ್ಥಳೀಯರ ಪರವಾಗಿ ವಿನಂತಿಸುತ್ತಿದ್ದೇನೆ. ಇದಕ್ಕೆ ನಮ್ಮೆಲ್ಲರ ಪ್ರೋತ್ಸಾಹವಿದೆ. ಇಂದು ವೈವಾಹಿಕ ಜೀವನದ ಬೆಳ್ಳಿಹಬ್ಬದ ಸಂದರ್ಭ ಪರಿವಾರದೊಂದಿಗೆ ನನ್ನ ಮಾತೃಶ್ರೀಯವರ ಪಾದಪೂಜೆ ಮಾಡಿರುವೆ. ಎಳೆಯ ಪ್ರಾಯದÇÉೇ ನಾನು ತಂದೆಯನ್ನು ಅಗಲಿದ್ದು, ಭಾರೀ ಕಷ್ಟದಿಂದ ತಾಯಿ ನಮ್ಮನ್ನು ಸಾಕಿದ್ದಾರೆ. ನನ್ನ ಬೆಳವಣಿಗೆಗೆ ಕಾರಣಕರ್ತರಾದ ಮಾವನವರನ್ನು ಮರೆಯುವಂತಿಲ್ಲ. ಶ್ರೀದೇವಿ ಯಕ್ಷಕಲಾ ನಿಲಯದಲ್ಲಿ ಅನೇಕ ಮಕ್ಕಳಿಗೆ ವಿವಿಧ ಕಲೆಗಳನ್ನು ಕಲಿಯುವ ಅವಕಾಶ ನೀಡುತ್ತಿದ್ದು, ಇದಕ್ಕೆ ವಸಾಯಿ ಪರಿಸರದ ತುಳು, ಕನ್ನಡಿಗರ ಪ್ರೋತ್ಸಾಹ ವಿದೆ. ವಸಾಯಿ ತಾಲೂಕಿನಲ್ಲಿ ಯಕ್ಷ ಗಾ ನದ ಮೂರು ಸಂಸ್ಥೆಗಳನ್ನು ನಡೆಸಲು ಇಲ್ಲಿನ ಮಕ್ಕಳ ಪೋಷಕರ ಸಹಾಯವೂ ನಮಗಿದೆ ಎಂದರು.
Related Articles
Advertisement
ವಸಾಯಿ-ವಿರಾರ್ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಉಮೇಶ್ ಡಿ. ನಾಯ್ಕ… ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿ, ಬಂಟರ ಸಂಘ ಮುಂಬ ಯಿಯ ವಿವಿಧ ಪ್ರಾದೇಶಿಕ ಸಮಿತಿ ಹಾಗೂ ಸ್ಥಳೀಯ ತುಳು, ಕನ್ನಡಪರ, ವಿವಿಧ ಜಾತೀಯ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಶಶಿಧರ ಕೆ. ಶೆಟ್ಟಿ ಇನ್ನಂಜೆ, ಪತ್ನಿ ಶಶಿಕಲಾ, ಪುತ್ರಿ ಸೃಷ್ಟಿ ಅವರು ತಾಯಿ ಶಾರದಾ ಶೆಟ್ಟಿಯವರ ಪಾದಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನದ ಎಲ್ಲ ಗುರು ಗಳನ್ನು ಗೌರವಿಸಲಾಯಿತು. ಕಟೀಲು ಯಕ್ಷ ಕಲಾ ವೇದಿಕೆ ವಸಾಯಿ ಅಧ್ಯಕ್ಷ ದೇವೇಂದ್ರ ಬುನ್ನನ್ ಹಾಗೂ ಜೀವಧಾನಿ ಯಕ್ಷ ಕಲಾವೇದಿಕೆ ವಸಾಯಿ ಅಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ ಅವರನ್ನು ಸಮ್ಮಾನಿಸಲಾಯಿತು. ಶ್ರೀ ದೇವಿ ಯಕ್ಷಕಲಾ ನಿಲಯ ನಲಸೋಪರ- ವಿರಾರ್ ಇದರ ಬಾಲ ಕಲಾವಿದರಾದ ಸೃಷ್ಟಿ ಶಶಿಧರ ಶೆಟ್ಟಿ, ಸಮೀûಾ ಸುಭಾಷ್ ಶೆಟ್ಟಿ, ಶ್ರದ್ಧಾ ಶೆಟ್ಟಿ, ಕಿಶನ್ ಪೂಜಾರಿ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಲೀಲಾವತಿ ಆಳ್ವ ಮಾರ್ಗದರ್ಶನದಲ್ಲಿ ಮಕ್ಕಳ ಭಜನೆ ಬಳಿಕ ಸಂಸ್ಥೆಯ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಬಾಲ ಕಲಾವಿದರಿಂದ ಶ್ರೀ ದೇವಿ ಲಲಿತೋಪಖ್ಯಾನ ಕನ್ನಡ ಯಕ್ಷಗಾನ ಪ್ರದರ್ಶನ ಗೊಂಡಿತು. ಸ್ಮಿತಾ ನಾಯರ್ ನೇತೃತ್ವದಲ್ಲಿ ಭರತ ನಾಟ್ಯ, ಮಕ್ಕಳಿಂದ ನಾಟ್ಯ ವೈಭವ ಹಾಗೂ ಹಿರಿ ಯ ರಿಂದ ಮತ್ತು ಶಶಿಧರ ಶೆಟ್ಟಿ ದಂಪತಿಯ ಪರಿ ವಾರದ ಮಕ್ಕಳಿಂದ ನೃತ್ಯ ಪ್ರದರ್ಶನಗೊಂಡಿತು. ಶಶಿಕಲಾ ಶಶಿಧರ ಶೆಟ್ಟಿ, ಶ್ರೀದೇವಿ ಯಕ್ಷ ಕಲಾನಿಲ ಯದ ಗೌರವಾಧ್ಯಕ್ಷ ಶ್ರೀನಿವಾಸ ನಾಯ್ಡು ಉಪಸ್ಥಿತರಿದ್ದರು.ಶ್ರೀ ದೇವಿ ಯಕ್ಷಕಲಾ ನಿಲಯದ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಮತ್ತು ವಿಜಯ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ್ ಶೆಟ್ಟಿ ಕಣಂಜಾರು ವಂದಿಸಿದರು. ಕೋಶಾಧಿಕಾರಿ ಲ| ಕೃಷ್ಣಯ್ಯ ಹೆಗ್ಡೆ, ಜಗನ್ನಾಥ್ ಡಿ. ಶೆಟ್ಟಿ, ಸುಪ್ರಿತಾ ಶೆಟ್ಟಿ, ಬಾಬಾ ಪ್ರಸಾದ್ ಅರಸ, ಸುಭಾಷ್ ಜೆ. ಶೆಟ್ಟಿ, ಪರಿಸರದ ತುಳು, ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು ಹಾಗೂ ಬಾಲ ಕಲಾವಿದರಪಾಲಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶಶಿಧರ ಶೆಟ್ಟಿ ದಂಪತಿಯ ವೈವಾಹಿಕ ಜೀವನದ 25 ವರ್ಷಗಳ ಬದುಕು ಸಮಾಜಕ್ಕೆ ಆದರ್ಶವಾಗಿರುವುದು ಅಭಿನಂದನೀಯ. ಶಶಿಧರ ಶೆಟ್ಟಿ ಇಲ್ಲಿನ ತುಳು, ಕನ್ನಡಿಗರ ಎಲ್ಲ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತನ್ನ ಆದಾಯದ ಹೆಚ್ಚಿನ ಪಾಲನ್ನು ಸಮಾಜಕ್ಕೆ ನೀಡುತ್ತಿ¨ªಾರೆ. ಎಲ್ಲರ ಯಶಸ್ಸಿನ ಹಿಂದೆ ಬಾಳ ಸಂಗಾತಿ ಹಾಗೂ ತಾಯಿ-ತಂದೆಯ ಕೊಡುಗೆ ಅಪಾರ. ವೈವಾಹಿಕ ಜೀವನದ ಬೆಳ್ಳಿಹಬ್ಬದ ಸಂದರ್ಭ ತಾಯಿಯ ಪಾದಪೂಜೆ ನೆರವೇರಿಸಿ ಅವರ ಆಶೀರ್ವಾದ ಪಡೆಯುತ್ತಿರುವುದು ಮುಂದಿನ ಪೀಳಿಗೆಗೆ ಮಾದರಿಯಾಗಲಿ. ಇದು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯಕ್ರಮವಾಗಿದೆ.–ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ
ಶಶಿಧರ ಶೆಟ್ಟಿ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಬಂಟರ ಸಂಘ ಮುಂಬಯಿಯ ಬೊರಿವಲಿ ಶಿಕ್ಷಣ ಸಂಸ್ಥೆಯ ಯೋಜನೆಗೆ ಉತ್ತಮ ದೇಣಿಗೆ ಘೋಷಿಸಿ¨ªಾರೆ. ದಾಂಪತ್ಯ ಜೀವನದ ಬೆಳ್ಳಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಶಶಿಧರ ಶೆಟ್ಟಿ ದಂಪತಿಗೆ ಬಂಟರ ಸಂಘ ಮುಂಬಯಿಯ ಪರವಾಗಿ ಅಭಿನಂದನೆಗಳು.–ಚಂದ್ರಹಾಸ ಶೆಟ್ಟಿ ಅಧ್ಯಕ್ಷರು, ಬಂಟರ ಸಂಘ ಮುಂಬಯಿ
ಶ್ರೀ ದೇವಿ ಯಕ್ಷಕಲಾ ನಿಲಯ ಮತ್ತು ಶಶಿಧರ ಶೆಟ್ಟಿ ದಂಪತಿಯ ವೈವಾಹಿಕ ಜೀವನದ ಬೆಳ್ಳಿಹಬ್ಬ ಅರ್ಥಪೂರ್ಣ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿರುವುದು ಜನಸಾಮಾನ್ಯರಿಗೆ ಶಶಿಧರ ಶೆಟ್ಟಿಯವರ ಮೇಲಿರುವ ಪ್ರೀತಿಯನ್ನು ತೋರಿಸುತ್ತಿದೆ. ಈ ಸಂಸ್ಥೆಯ ಮೂಲಕ ನಾಡಿನ ಕಲೆ, ಭಾಷೆ, ಸಂಸ್ಕೃತಿಯನ್ನು ಈ ನೆಲದಲ್ಲಿ ಉಳಿಸಿ-ಬೆಳೆಸುವ ಕಾರ್ಯವನ್ನು ಶಶಿಧರ ಶೆಟ್ಟಿ ಮಾಡುತ್ತಿದ್ದು, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.–ಕರ್ನಿರೆ ವಿಶ್ವನಾಥ ಶೆಟ್ಟಿ ಉಪಾಧ್ಯಕ್ಷರು,ಜಾಗತಿಕ ಬಂಟರ ಸಂಘಗಳ ಒಕ್ಕೂಟ
ಚಿತ್ರ-ವರದಿ: ಈಶ್ವರ್ ಐಲ್