ನವದೆಹಲಿ: 5 ಜಿ ತರಂಗಾಂತರ ಹರಾಜು ಪ್ರಕ್ರಿಯೆಗೆ ಅನುಕೂಲ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಬುಧವಾರ (ಜೂನ್ 15) ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ಕೊನೆಗೂ ಭಾರತದಲ್ಲಿ ಶೀಘ್ರದಲ್ಲಿಯೇ 5 ಜಿ ಸೇವೆ ಲಭ್ಯವಾಗುವ ಹಾದಿ ಸುಗಮವಾದಂತಾಗಿದೆ.
ಇದನ್ನೂ ಓದಿ:ಅನಾರೋಗ್ಯ ಪೀಡಿತ ಪ್ರಾಣಿ ಪರೀಕ್ಷೆಗೆಂದು ಕರೆಸಿ ಪಶುವೈದ್ಯರನ್ನೇ ಅಪಹರಿಸಿ ಮದುವೆ ಮಾಡಿಸಿದರು
ಪ್ರಸ್ತುತ ದೇಶದಲ್ಲಿ ಚಾಲ್ತಿಯಲ್ಲಿರುವ 4 ಜಿ ಸೇವೆಗಿಂತ 5 ಜಿ ನೆಟ್ವರ್ಕ್ ಹತ್ತು ಪಟ್ಟು ವೇಗ ಮತ್ತು ಉತ್ತಮ ಸಾಮರ್ಥ್ಯ ಹೊಂದಿರುವುದಾಗಿ ಕ್ಯಾಬಿನೆಟ್ ಹೇಳಿದೆ. ಒಟ್ಟು 72097.85 ಗಿಗಾಹರ್ಟ್ಸ್ ತರಂಗಾಂತರವನ್ನು 20 ವರ್ಷಗಳ ಅವಧಿಗೆ ಹರಾಜು ಹಾಕಲಾಗುತ್ತಿದೆ. ಜುಲೈ ಅಂತ್ಯದ ವೇಳೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ವರದಿ ವಿವರಿಸಿದೆ.
ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಇಂದು ಘೋಷಿಸಲಾದ ಸ್ಪ್ರೆಕ್ಟ್ರಂ ಹರಾಜು “ ಭಾರತ್ ಕಾ5ಜಿ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದ್ದಾರೆ.