Advertisement

ತಿಂಗಳಲ್ಲಿ 57 ಲಕ್ಷ ರೂ. ದಂಡ ಸಂಗ್ರಹ!

05:40 AM Jul 03, 2020 | Lakshmi GovindaRaj |

ಬೆಂಗಳೂರು: ಮಾಸ್ಕ್‌ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿದವರ ವಿರುದ್ಧ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದೇ ದಿನದಲ್ಲಿ 2,900 ಪ್ರಕರಣ ದಾಖ ಲಿಸಿ, 5.80 ಲಕ್ಷ  ರೂ. ದಂಡ ಸಂಗ್ರಹಿಸಿದ್ದಾರೆ.

Advertisement

ಪೂರ್ವ ವಿಭಾಗದ 13 ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು, ಮಾರ್ಷಲ್‌ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಜೂ.  9ರಿಂದ 30ರವರೆಗೆ ಪಾಲಿಕೆ ಮಾರ್ಷಲ್‌ಗ‌ಳು ಮತ್ತು ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ, 28,688 ಜನರಿಂದ 57.39 ಲಕ್ಷ ರೂ. ದಂಡ ವಸೂಲು ಮಾಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸುವ  ವ್ಯಕ್ತಿಗಳಿಗೆ ದಂಡ ವಿಧಿಸ ಲಾಗುತ್ತಿದೆ. ಅದರಂತೆ ಜೂನ್‌ನಲ್ಲಿ ಧರಿಸ ದ 27,421 ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 1,267 ಮಂದಿಗೆ ದಂಡ ಹಾಕಲಾಗಿದೆ ಎಂದು ಪಾಲಿಕೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next