Advertisement

567 ಕಾಲುಸಂಕಗಳಿಗೆ ಬೇಕಿದೆ ಶೀಘ್ರ ಕಾಯಕಲ್ಪ; 5 ಸಾವಿರ ಮಕ್ಕಳು ನಿತ್ಯ ಜೀವಭಯದಲ್ಲಿ ಸಂಚಾರ

12:59 AM Aug 14, 2022 | Team Udayavani |

ಉಡುಪಿ: ಸುಮಾರು 8 ಸಾವಿರಕ್ಕೂ ಅಧಿಕ ಕುಟುಂಬ, ಐದು ಸಾವಿರಕ್ಕೂ ಅಧಿಕ ಮಕ್ಕಳು ನಿತ್ಯವೂ ದುಃಸ್ಥಿತಿಯಲ್ಲಿರುವ ಕಾಲು ಸಂಕಗಳ ಮೂಲಕ ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ಉಡುಪಿ ಜಿಲ್ಲೆಯಲ್ಲಿದೆ.
ಮಳೆಗಾಲದಲ್ಲಿ ಕಾಲು ಸಂಕಗಳು ಅಪಾಯಕಾರಿ. ಅದರಲ್ಲೂ ಮರದ ದಿಮ್ಮಿಗಳಿಂದ ಮಾಡಿದ ಕಾಲುಸಂಕ ದಲ್ಲಿ ಸಂಚಾರ ಇನ್ನಷ್ಟು ಕಷ್ಟ. ಜಿಲ್ಲೆಯ 567 ಕಡೆ ಕಾಲುಸಂಕಗಳನ್ನು ತುರ್ತಾಗಿ ಸರಿಪಡಿಸಬೇಕಿದೆ.

Advertisement

ಕೆಲವು ಹೆಚ್ಚು ಅಪಾಯಕಾರಿಯಾಗಿವೆ. ಇನ್ನು ಕೆಲವೆಡೆ ಸೂಕ್ತ ತಳಪಾಯ ಇಲ್ಲದೇ ಅಪಾಯವನ್ನು ಆಹ್ವಾನಿಸುತ್ತಿವೆ. ಜಿಲ್ಲೆಯ 155 ಗ್ರಾ.ಪಂ.ಗಳಲ್ಲಿ 103 ಗ್ರಾ.ಪಂ.ಗಳಿಗೆ ಸುಸ ಜ್ಜಿತ ಕಾಲುಸಂಕ ತುರ್ತಾಗಿ ಆಗಬೇಕಿದೆ. ಉಳಿದೆಡೆ ಪರಿಸ್ಥಿತಿ ಸಮಾಧಾನಕರ. ಉಡುಪಿ ತಾಲೂಕಿನ 638 ಕುಟುಂಬಗಳ ಸದ ಸ್ಯರು ಮತ್ತು 292 ಮಕ್ಕಳು, ಕಾಪು ತಾಲೂಕಿನ 700 ಕುಟುಂಬದ ಸದಸ್ಯರು, 383 ಮಕ್ಕಳು, ಕಾರ್ಕಳ ತಾಲೂಕಿನ 2,998 ಮಂದಿ, 2,015 ಮಕ್ಕಳು, ಕುಂದಾಪುರ ತಾಲೂಕಿನ 1,392 ಮಂದಿ, 847 ಮಕ್ಕಳು, ಬ್ರಹ್ಮಾವರ ತಾಲೂಕಿನ 462 ಮಂದಿ, 329 ಮಕ್ಕಳು, ಬೈಂದೂರು ತಾಲೂಕಿನ 1,648 ಮಂದಿ, 983 ಮಕ್ಕಳು, ಹೆಬ್ರಿ ತಾಲೂಕಿನ 382 ಮಂದಿ, 259 ಮಕ್ಕಳು ಸೇರಿ ದಂತೆ ಒಟ್ಟು 8,220 ಕುಟುಂಬದ ಸದ ಸ್ಯರು ಮತ್ತು 5,108 ಮಕ್ಕಳು ನಿತ್ಯವೂ ಭಯದಲ್ಲಿ ಅಪಾಯಕಾರಿ ಕಾಲು ಸಂಕ ವನ್ನು ಆಶ್ರಯಿಸಿದ್ದಾರೆ.

ನರೇಗಾದಡಿ ಕಾಮಗಾರಿ
ಕಾಲುಸಂಕ ಅಭಿವೃದ್ಧಿ ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹೀಗೆ ವಿವಿಧ ಇಲಾಖೆಯ ಅಧೀನದಲ್ಲಿ ಬರುವ ಜತೆಗೆ ಖಾಸಗಿ ಜಮೀನಿನಲ್ಲಿ ಇರುವುದರಿಂದ ಅಭಿವೃದ್ಧಿಗೆ ಸಾಕಷ್ಟು ತೊಡಕಿದೆ. ಇದನ್ನೆಲ್ಲವನ್ನು ನಿವಾರಿಸಿಕೊಂಡು ನರೇಗಾ ಅಡಿ ಯಲ್ಲಿ ಸುಮಾರು 4.50 ಲಕ್ಷದ ವರೆಗೂ ವೆಚ್ಚ ಮಾಡಿ, ಸುಸಜ್ಜಿತ ಕಾಲುಸಂಕ ನಿರ್ಮಿಸಲು ಅವಕಾಶ ಇದೆ. ಅದನ್ನು ಸಮರ್ಪಕವಾಗಿ ಬಳಸಿ ಪಿಡಿಒಗಳ ಮೂಲಕ ಮಾಹಿತಿ ಪಡೆದು ಕೂಡಲೇ ಕಾಮಗಾರಿ ಆರಂಭಿಸಲಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೇಗಿರಲಿದೆ ಕಾಲುಸಂಕ ?
ಕನಿಷ್ಠ 3 ಅಡಿ ಅಗಲ ಹಾಗೂ 30 ಮೀ. ಉದ್ದದವರೆಗೂ ಕಾಲುಸಂಕ ನಿರ್ಮಿಸಿ ಎರಡೂ ಬದಿಗಳಲ್ಲಿ ತಡೆ ಮತ್ತು ಹಿಡಿಯಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಆದರೆ ನರೇಗಾದಡಿ ಪರಿಕರಗಳಿಗೆ ಅನುದಾನ ಬೇಗ ಬರುವುದಿಲ್ಲ ಎಂಬ ಆರೋಪವೂ ಇದೆ.

ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲೂ ಸಮೀಕ್ಷೆ ನಡೆಸಿ ಮಾಹಿತಿ ಪಡೆಯ ಲಾಗಿದೆ. ನರೇಗಾದಡಿ
ಶೀಘ್ರವೇ ಕಾಲುಸಂಕಗಳ ಕಾಮಗಾರಿ ಆರಂಭ ವಾಗಲಿದೆ. ಸ್ಥಳೀಯರು ಬಳಸುತ್ತಿರುವ ಖಾಸಗಿ ಜಮೀನಿನಲ್ಲಿರುವ ಕಾಲುಸಂಕ ಗಳನ್ನು ಆಯಾ ಜಮೀನು ಮಾಲಕರ ಮನವೊಲಿಸಿ ಸುಸ್ಥಿತಿಗೆ ತರಲಾಗುವುದು.
– ಪ್ರಸನ್ನ ಎಚ್‌., ಸಿಇಒ, ಜಿ.ಪಂ. ಉಡುಪಿ

Advertisement

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next