Advertisement

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ವಜಾ?

11:13 PM Apr 03, 2022 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ 954 ಶಿಕ್ಷಕರಿಗೆ ಸರಕಾರದಿಂದ ನೋಟಿಸ್‌ ಜಾರಿಗೊಳಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

Advertisement

2001ರ ಜ. 26ರ ಅನಂತರ ಶಾಲಾ ಶಿಕ್ಷಣ ಸೇವೆಗೆ ಸೇರ್ಪಡೆಗೊಂಡ ಸಿಬಂದಿ ಯು ಕಡ್ಡಾಯವಾಗಿ ಎರಡು ಮಕ್ಕಳನ್ನು ಮಾತ್ರ ಹೊಂದತಕ್ಕದ್ದು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಂಡಲ್ಲಿ ಸರ ಕಾರಿ ಸೇವೆಯಿಂದ ಅವರನ್ನು ಬಿಡುಗಡೆ ಮಾಡ ಲಾಗುತ್ತದೆ  ಎಂದು 2000ರಲ್ಲಿ ಮಧ್ಯ ಪ್ರದೇಶ ಸರ ಕಾರ ಆದೇಶ ಹೊರಡಿಸಿತ್ತು. 2001ರ ಜ. 26ರ ಅನಂತರ ಶಾಲಾ ಶಿಕ್ಷಣ ಇಲಾಖೆಗೆ ಸೇರ್ಪಡೆಗೊಂಡಿರುವ ಎಲ್ಲ ಸಿಬಂದಿಯ ನೇಮಕಾತಿ ಆದೇಶದಲ್ಲಿ ಈ ವಿಚಾರವನ್ನು ಉಲ್ಲೇಖೀಸಲಾಗಿದೆ. ಅದರ ನ್ವಯ, ಸದ್ಯಕ್ಕೆ ವಿದಿಶಾ ಜಿಲ್ಲೆಯ 954 ಶಿಕ್ಷಕರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಶಿಕ್ಷಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಅತುಲ್‌ ಮುದುಗಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next