ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 221ಕ್ಕೆ ಏರಿಕೆಯಾಗಿದ್ದು, ಶನಿವಾರ 10ಜನ ಸೋಂಕು ಮುಕ್ತರಾಗಿದ್ದಾರೆ. ಶಿವಾಜಿನಗರದಲ್ಲಿ ರೋಗಿ ಸಂಖ್ಯೆ 653ರ ಸಂಪ ರ್ಕದಲ್ಲಿದ್ದ 29ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 112 ಜನರು ಗುಣಮುಖರಾಗಿ ದ್ದಾರೆ. ಈ ಮೂಲಕ ಗುಣಮುಖರ ಪ್ರತಿಶತ ಶೇ.51ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 21ದಿನಗಳಿಂದ ಕೊರೊನಾ ಸೋಂಕು ಕಾಣಿಸಿ ಕೊಳ್ಳದ ಪಶ್ಚಿಮ ವಲಯದ ಜಗಜೀವನರಾಂ ನಗರ ವಾರ್ಡ್ ಅನ್ನು ಕಂಟೈನ್ಮೆಂಟ್ ಮುಕ್ತ ಗೊಳಿಸಲಾಗಿದೆ. ಮಂಗಮ್ಮನಪಾಳ್ಯದಲ್ಲಿ ರ್‍ಯಾಂಡಮ್ ಪರೀಕ್ಷೆ ಮುಂದುವರಿದಿದೆ. ಶುಕ್ರ ವಾರ ಮತ್ತೆ ಇಬ್ಬರಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶನಿವಾರ 29 ಮಂದಿಯನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯಾಧಿಕಾರಿತಿಳಿಸಿದ್ದಾರೆ.
ಸರ್ಕಾರವು ಮೇ.17ರ ನಂತರದಲ್ಲಿ ನಗರದಲ್ಲಿ ಲಾಕ್‌ಡೌನ್ ಅನ್ನು ಮತ್ತಷ್ಟು ಸಡಿಲಗೊಳಿಸುವ ಸಾಧ್ಯತೆ ಇದೆ. ಇದಕ್ಕೆ ಬಿಬಿಎಂಪಿ ಸಿದವಾಗಿದ್ದು, ರಾಜ್ಯ ಸರ್ಕಾರ ಆದೇಶದ ನಂತರ ಈ ನಿಟ್ಟಿನಲ್ಲಿ ಬೇಕಾದ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು. ಮಾಹಿತಿ ನೀಡಲಾಗುವುದು.
-ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ