Advertisement
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳನ್ನು ಮುಚ್ಚಲಾಗಿತ್ತು. ಈ ಅವಧಿಯಲ್ಲಿ ಸುರಿದ ಮಳೆಯಕಾರಣದಿಂದ ಅನೇಕ ಶಾಲೆಯ ಕೊಠಡಿಗಳು ಶಿಥಿಲ ವ್ಯವಸ್ಥೆಗೆ ತಲುಪಿ ನೆಲಕಚ್ಚಿದರೆ, ಇನ್ನು ಬಹುತೇಕ ಶಾಲೆಗಳಕೊಠಡಿಗಳ ಚಾವಣಿ ಮಳೆಯ ಕಾರಣದಿಂದ ಸುರಿ ಯುತ್ತಿರುವ ದೂರುಗಳು ಸಹ ಕೇಳಿಬಂದಿದೆ. ಶಾಲೆಗಳಸ್ಥಿತಿಗತಿ ಸುಧಾರಿಸುವ ಸಲುವಾಗಿ ಶಿಕ್ಷಣ ಇಲಾಖೆಯಅಧಿಕಾರಿಗಳು ಜಿಲ್ಲೆಯಲ್ಲಿ ಇರುವ ಸರ್ಕಾರಿ ಶಾಲೆಗಳುಮತ್ತು ಆ ಶಾಲೆಗಳಲ್ಲಿ ಶಿಥಿಲ ಮತ್ತು ನೆಲಕಚ್ಚಿರುವಕೊಠಡಿಗಳ ಸಂಖ್ಯೆಯನ್ನು ಪಟ್ಟಿ ಮಾಡಿದ್ದಾರೆ.ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಭರ್ಜರಿಯಾಗಿಮಳೆಯಾಗಿದ್ದು ಪ್ರಸಕ್ತ ಸಾಲಿನಲ್ಲೂ ಮಳೆಪ್ರಾರಂಭವಾಗಿದೆ. ಇದರಿಂದ ಎಚ್ಚೆತ್ತಿಕೊಂಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಾಗಲೇ ಸಿದ್ಧಪಡಿಸಿರುವ ಪಟ್ಟಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
Related Articles
Advertisement
ಗೌರಿಬಿದನೂರು ತಾಲೂಕಿನಲ್ಲಿ 286 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 136 ಮಳೆ, ಇತರಕಾರಣದಿಂದ ಹಾನಿಯಾಗಿವೆ. 314 ಶಾಲೆ ಕೊಠಡಿದುರಸ್ತಿಯಾಗಬೇಕಿದೆ. ಒಟ್ಟು 23 ಸರ್ಕಾರಿಪ್ರೌಢಶಾಲೆಗಳಿದ್ದು, ಅದರಲ್ಲಿ 5 ಶಾಲೆ ಮಳೆಯಿಂದ,20 ಪ್ರೌಢಶಾಲಾ ಕೊಠಡಿಗಳು ಹಾನಿಯಾಗಿವೆ. ಒಟ್ಟು 309 ಶಾಲೆಗಳಲ್ಲಿ 141ಶಾಲೆಗಳು ಮತ್ತು 334ಕೊಠಡಿಗಳು ಮಳೆಯಿಂದ ಹಾನಿಯಾಗಿವೆ.
ಬಾಗೇಪಲ್ಲಿ ತಾಲೂಕಿನಲ್ಲಿ 255 ಪ್ರಾಥಮಿಕಶಾಲೆಗಳಿದ್ದು, 44 ಮಳೆ, ಇತರ ಕಾರಣದಿಂದಹಾನಿಯಾಗಿವೆ. 102 ಶಾಲೆ ದುರಸ್ತಿಯಾಗಬೇಕಿದೆ. ಒಟ್ಟು 21 ಪ್ರೌಢಶಾಲೆಗಳಿದ್ದು, ಅದರಲ್ಲಿ 3 ಶಾಲೆ ಮಳೆಯಿಂದ ಹಾಗೂ 9 ಪ್ರೌಢಶಾಲಾ ಕೊಠಡಿಗಳು ಹಾನಿಯಾಗಿವೆ. ಒಟ್ಟು 276 ಶಾಲೆಗಳಲ್ಲಿ 47 ಶಾಲೆಗಳು
ಹಾಗೂ 111 ಕೊಠಡಿಗಳು ಹಾನಿಗೆ ಒಳಗಾಗಿವೆ.ಶಿಡ್ಲಘಟ್ಟ ದಲ್ಲಿ 251 ಪ್ರಾಥಮಿಕ ಶಾಲೆಗಳಿದ್ದು, 70ಮಳೆ, ಇತರ ಕಾರಣದಿಂದ ಹಾನಿಯಾಗಿವೆ. 176ಶಾಲೆ ದುರಸ್ತಿಯಾಗಬೇಕಿದೆ. ಒಟ್ಟು 17 ಸರ್ಕಾರಿಪ್ರೌಢಶಾಲೆಗಳಿದ್ದು, 4 ಶಾಲೆ ಮಳೆಯಿಂದ ಹಾಗೂ 19 ಪ್ರೌಢಶಾಲಾ ಕೊಠಡಿಗಳು ಹಾನಿಯಾಗಿವೆ. ಒಟ್ಟು268 ಶಾಲೆಗಳಲ್ಲಿ 74ಶಾಲೆಗಳು ಮತ್ತು 195 ಕೊಠಡಿಗಳು ಮಳೆಯಿಂದ ಹಾನಿಯಾಗಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 1449 ಪ್ರಾಥಮಿಕ ಶಾಲೆಗಳಿದ್ದು ಸುಮಾರು 490 ಪ್ರಾಥಮಿಕ ಶಾಲೆಗಳ 1050 ಕೊಠಡಿಗಳು ಅಧಿಕ ಮಳೆಯಿಂದ ಹಾನಿಗೊಳಗಾಗಿರುತ್ತದೆ ಅದರಂತೆ ಒಟ್ಟು 111 ಸರ್ಕಾರಿಪ್ರೌಢಶಾಲೆಗಳಿದ್ದು 16 ಶಾಲೆಗಳ ಸುಮಾರು 64 ಕೊಠಡಿಗಳು ಮಳೆಯಿಂದ ಹಾನಿಗೊಳಗಾಗಿರುತ್ತದೆ. ಮಳೆಯಿಂದ ಹಾನಿಗೊಳಗಾದ ಶಾಲಾ ಕೊಠಡಿಗಳುಶಿಥಿಲಗೊಂಡಿದ್ದು, ಗೋಡೆಗಳು ಬಿರುಕು ಬಿಟ್ಟಿವೆ, ಶಾಲೆ ಸೋರುತ್ತಿದ್ದು ಕುಸಿದು ಬೀಳವ ಸ್ಥಿತಿ ತಲುಪಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಆರಂಭವಾಗಿದೆ ಇತ್ತೀಚೆಗೆಸುರಿಯುತ್ತಿರುವ ಮಳೆಯಿಂದ ಈಗಾಗಲೇ ಹಾನಿಯಾಗಿರುವ ಶಾಲೆಗಳು ಮತ್ತುಕೊಠಡಿಗಳ ಪಟ್ಟಿಯನ್ನು ಸಿದ್ಧಪಡಿಸಿ ಹಿರಿಯ ಅಧಿಕಾರಿಗಳ ಮೂಲಕ ದುರಸ್ತಿಗೊಳಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಅನುದಾನ ಬಂದ ತಕ್ಷಣ ಹಾನಿಗೊಳಗಾಗಿರುವ ಶಾಲಾಕೊಠಡಿಗಳನ್ನು ದುರಸ್ತಿ ಮಾಡುವ ಕಾರ್ಯವನ್ನು ನಡೆಸಲಾಗುವುದು. – ಜಯರಾಮರೆಡ್ಡಿ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ
– ಎಂ.ಎ.ತಮೀಮ್ ಪಾಷ