ನವದೆಹಲಿ: ಭಾರತದಲ್ಲಿ ಕೋವಿಡ್-19 ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 505 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಪ್ರಮಾಣ 3,500ರ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸಮಾಧಾನಕರ ಸಂಗತಿಯೆಂದರೆ ಸೋಂಕಿತರಲ್ಲಿ 272 ಜನರು ಗುಣಮುಖರಾಗಿದ್ದಾರೆ. ಕಳೆದೆ ಶುಕ್ರವಾರ ಭಾರತದಲ್ಲಿ 601 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಮಾತ್ರವಲ್ಲದೆ ಒಂದೇ ದಿನ 12 ಜನರು ಬಲಿಯಾಗಿದ್ದರು. ಇದು ಭಾರತದಲ್ಲಿ ಒಂದು ದಿನದಲ್ಲಿ ದಾಖಲಾದ ಅತೀ ದೊಡ್ಡ ಮೊತ್ತವಾಗಿದೆ.
ಪ್ರಧಾನಿ ಮೋದಿ, ಭಾನುವಾರ ರಾತ್ರಿ ದೀಪ ಬೆಳಗುವ ಕರೆಗೆ ದೇಶಾದ್ಯಂತ ಅಭೂತಪಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಕರ್ನಾಟಕ ಸೇರಿದಂತೆ ದೇಶಾದ್ಯಂತ ಜನರು ದೀಪಗಳನ್ನು ಬೆಳಗಿಸುವ ಮೂಲಕ ಕೋವಿಡ್ ಅಂಧಕಾರವನ್ನು ಹೊಡೆದೋಡಿಸುವ ಪಣತೊಟ್ಟಿದ್ದರು.
ಕೋವಿಡ್ 19 ಮಹಾಮಾರಿಗೆ ಜಗತ್ತಿನಾದ್ಯಂತ 69,456 ಜನರು ಪ್ರಾಣತೆತ್ತಿದ್ದು, 12,73,709 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಅಮೆರಿಕಾದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು ಸಾವಿನ ಪ್ರಮಾಣ, ಇಟಲಿ ಮತ್ತು ಸ್ಪೇನ್ ನಲ್ಲಿ ಹೆಚ್ಚಾಗಿದೆ.