Advertisement
ಇದನ್ನೂ ಓದಿ:ಉಳ್ಳಾಲ: ಮದುವೆಯಾದ 15 ದಿನದಲ್ಲೇ ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ
Related Articles
Advertisement
ಪೊಲೀಸರ ಮಾಹಿತಿ ಮೇರೆಗೆ, ಅನಿಲ್ ಇತ್ತೀಚೆಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ. ಈತ ಉತ್ತರಪ್ರದೇಶಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ. ಅನಿಲ್ ಈಶಾನ್ಯ ರಾಜ್ಯಗಳಲ್ಲಿ ನಿಷೇಧಿತ ಬಂಡುಕೋರ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ ಎಂದು ತಿಳಿಸಿದೆ.
ಅನಿಲ್ ದೆಹಲಿಯ ಖಾನ್ಪುರ್ ಪ್ರದೇಶದಲ್ಲಿ ವಾಸವಾಗಿದ್ದಾಗ ಆಟೋ ರಿಕ್ಷಾ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಬಳಿಕ 1995ರಲ್ಲಿ ಈತ ಕಾರು ಕಳ್ಳತನ ಮಾಡಲು ಪ್ರಾರಂಭಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
90ರ ದಶಕದಲ್ಲಿ ಅನಿಲ್ ಹೆಚ್ಚಾಗಿ ಮಾರುತಿ 800 ಕಾರುಗಳನ್ನು ಕಳವು ಮಾಡುತ್ತಿದ್ದ. ದೇಶದ ವಿವಿಧ ಭಾಗಗಳಲ್ಲಿ ಅನಿಲ್ ಚೌಹಾಣ್ ಕಾರುಗಳನ್ನು ಕದಿಯುತ್ತಿದ್ದ, ನಂತರ ಅವುಗಳನ್ನು ನೇಪಾಳ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ. ಕಳವು ವೇಳೆ ಅನಿಲ್ ಕೆಲವು ಟ್ಯಾಕ್ಸಿ ಡ್ರೈವರ್ ಗಳನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲವು ವರ್ಷಗಳ ನಂತರ ಅನಿಲ್ ಚೌಹಾಣ್ ಅಸ್ಸಾಂಗೆ ಸ್ಥಳಾಂತರಗೊಂಡಿದ್ದ. ತನ್ನಲ್ಲಿದ್ದ ಅಪಾರ ಹಣದಿಂದ ದೆಹಲಿ, ಮುಂಬೈ, ಈಶಾನ್ಯ ರಾಜ್ಯಗಳಲ್ಲಿ ಆಸ್ತಿಗಳನ್ನು ಖರೀದಿಸಿದ್ದ. 2015ರಲ್ಲಿಯೂ ಅನಿಲ್ ನನ್ನು ಬಂಧಿಸಲಾಗಿತ್ತು, ನಂತರ 2020ರಲ್ಲಿ ಬಿಡುಗಡೆಗೊಂಡಿದ್ದ ಎಂದು ವರದಿ ತಿಳಿಸಿದೆ.
ಅನಿಲ್ ಚೌಹಾಣ್ ವಿರುದ್ಧ 180 ಪ್ರಕರಣಗಳು ದಾಖಲಾಗಿವೆ. ಈತನಿಗೆ ಮೂವರು ಪತ್ನಿಯಂದಿರು ಹಾಗೂ ಏಳು ಮಕ್ಕಳಿರುವುದಾಗಿ ವರದಿ ತಿಳಿಸಿದೆ. ಜಾರಿ ನಿರ್ದೇಶನಾಲಯ ಕೂಡಾ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.