ಯಾದಗಿರಿ: ದೇಶಾದ್ಯಂತ ಕೋವಿಡ್ ವಾರಿಯರ್ಗೆ ಮೊದಲ ಹಂತದಲ್ಲಿ ಕೋವಿಶೀಲ್ಡ್/ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಗಡಿ ಜಿಲ್ಲೆ ಯಾದಗಿರಿಯಲ್ಲಿಯೂ ಲಸಿಕೆ ನೀಡುವ ಕಾರ್ಯಕ್ಕೆ ಶನಿವಾರ ಚಾಲನೆ ದೊರೆತಿದೆ. ಮೊದಲ ಹಂತದ ಮೊದಲ ದಿನ ಲಸಿಕಾಕರಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, 247 ವಾರಿಯರ್ಸ್ ಗಳು ಲಸಿಕೆ ಪಡೆದಿದ್ದಾರೆ.
ಈಗಾಗಲೇ ಲಸಿಕೆ ನೀಡಲು ಗುರುತಿಸಿದವರಲ್ಲಿ ರಕ್ತದೊತ್ತಡ, ಮಧುಮೇಹ, ಇನ್ನಿತರ ಗಂಭೀರ ಕಾಯಿಲೆ ಇರುವವರಿಗೆ ಲಸಿಕೆ ನೀಡಲಾಗಿಲ್ಲ. ಆರಂಭದಲ್ಲಿ ಜಿಲ್ಲಾಸ್ಪತ್ರೆಯ ಡಿ ದರ್ಜೆ ನೌಕರ ಅಶೋಕ ಮತ್ತು ಅಭಿಷೇಕ್‌ಗೆ ಮೊದಲ ಲಸಿಕೆ ನೀಡಲಾಯಿತು. ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ 80 ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗಿದೆ. ಪ್ರಥಮ ಹಂತದಲ್ಲಿ ಲಸಿಕೆ ನೀಡಲು 6438 ಕೋವಿಡ್ ವಾರಿಯರ್ಸ್ ಗುರುತಿಸಲಾಗಿದೆ. ಜ.16ರಂದು ಒಟ್ಟು 445 ವಾರಿಯರ್ಸ್‌ಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಸಂಜೆ 5ಗಂಟೆ ವೇಳೆ 247 ವಾರಿಯರ್ಸ್‌ಗಳು ಲಸಿಕೆ ಪಡೆದರು.
ಬೆಳಿಗ್ಗೆ 11:30ಕ್ಕೆ ಲಸಿಕಾಕರಣಕ್ಕೆ ಆರಂಭವಾಗಿದ್ದು, ಮಧ್ಯಾಹ್ನ 2ಗಂಟೆ ವೇಳೆ ಕೇವಲ ಜಿಲ್ಲಾಸ್ಪತ್ರೆಯಲ್ಲಿ 15, ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರ 24, ಶಹಾಪುರ ತಾಲೂಕು ಆಸ್ಪತ್ರೆ 50, ಸುರಪುರ ತಾಲೂಕು ಆಸ್ಪತ್ರೆ 26 ಹಾಗೂ ಸುರಪುರ ನಗರ ಆಸ್ಪತ್ರೆಯಲ್ಲಿ 21 ಜನರು ಸೇರಿದಂತೆ ಒಟ್ಟು 136 ಜನರು ಲಸಿಕೆ ಪಡೆದಿದ್ದರು.
ಇದನ್ನೂ ಓದಿ:ಎಸ್‌ಟಿ ಹೋರಾಟಕ್ಕೆ ಸಿದ್ದರಾಮಯ್ಯ ಬರುವುದಾದರೆ ಬರಲಿ, ಗೊಂದಲ ಸೃಷ್ಟಿ ಬೇಡ: ಈಶ್ವರಪ್ಪ
ಇನ್ನು ಮಧ್ಯಾಹ್ನ 3ಗಂಟೆಗೆ ಒಟ್ಟು 206 ವಾರಿಯರ್ಸ್ ಲಸಿಕೆ ಪಡೆದಿದ್ದರೆ, ನಾಲ್ಕು ಗಂಟೆ ವೇಳೆಗೆ ನಿಗದಿತ ಕೇಂದ್ರಗಳಲ್ಲಿ ಕೇವಲ 206 ಜನ ಮಾತ್ರ ಲಸಿಕೆ ಪಡೆದಿದ್ದರು. ಇನ್ನು ಸಂಜೆ 5ಗಂಟೆ ವೇಳೆಗೆ ಒಟ್ಟು ಲಸಿಕೆ ಪಡೆದ ವಾರಿಯರ್ಗಳ ಸಂಖ್ಯೆ 247ಕ್ಕೆ ತಲುಪಿತ್ತು.