ನವದೆಹಲಿ: “ಈ ಹಿಂದಿನ ಎಲ್ಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತ್ರಿವರ್ಣ ಧ್ವಜಗಳ ಬೇಡಿಕೆ ಬರೋಬ್ಬರಿ 50 ಪಟ್ಟು ಹೆಚ್ಚಾಗಿದೆ.
ಜನರ ಬೇಡಿಕೆಯನ್ನು ಪೂರೈಸಲಾಗದೆ ಪರದಾಡುವಂತಾಗಿದೆ’ -ಇದು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಧ್ವಜ ತಯಾರಿ ಮತ್ತು ಮಾರಾಟ ಮಾಡುವವರ ಮಾತು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಅವರು ಜು.22ರಂದು “ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕರೆ ಕೊಡುತ್ತಿದ್ದಂತೆಯೇ ಧ್ವಜಗಳಿಗೆ ಬೇಡಿಕೆ ಹೆಚ್ಚಾಗಿದೆ.
“ನಾವು ದಿನಕ್ಕೆ ಕನಿಷ್ಠ 15 ಲಕ್ಷ ಧ್ವಜಗಳನ್ನು ತಯಾರಿಸುತ್ತಿದ್ದೇವೆ. ಆದರೂ ಅದು ಎತ್ತಲೂ ಸಾಕಾಗುತ್ತಿಲ್ಲ. ಅಮೆರಿಕದಲ್ಲಿದ್ದ ನನಗೆ ಇದ್ದಕ್ಕಿದ್ದಂತೆ ಧ್ವಜಕ್ಕಾಗಿ ಕರೆಗಳು ಬರಲಾರಂಭಿಸಿದವು. ಈಗಲೂ ನಿಮಿಷವೂ ಬಿಡದಂತೆ ಕರೆಗಳು ಬರುತ್ತಲೇ ಇವೆ.
ಇದನ್ನೂ ಓದಿ:ಆರ್ ಜೆಡಿ ಜತೆ ಸಖ್ಯ- ನಿತೀಶ್ ಬಿಹಾರದ ಜನತೆಗೆ ದ್ರೋಹ ಎಸಗಿದ್ದಾರೆ: ಬಿಜೆಪಿ ಆಕ್ರೋಶ
ಕೋಟ್ಯಂತರ ಧ್ವಜಗಳ ಬೇಡಿಕೆಯಿದೆ’ ಎಂದಿದ್ದಾರೆ ದೆಹಲಿಯಲ್ಲಿ ಕಳೆದ 50 ವರ್ಷಗಳಿಂದ ಧ್ವಜಗಳ ಹೋಲ್‌ಸೇಲ್ ವ್ಯಾಪಾರ ಮಾಡುತ್ತಿರುವ ಗುಲ್ಶನ್ ಖುರಾನಾ(63).
ಎಲ್ಲ ಗಾತ್ರದ ಎಲ್ಲ ರೀತಿಯ ಧ್ವಜಗಳ ಬೇಡಿಕೆ ಏರಿದೆ. ಅದರಲ್ಲೂ ಸ್ಯಾಟಿನ್‌ನಿಂದ ನಿರ್ಮಿಸಲಾಗಿರುವ ಮಧ್ಯಮ ಗಾತ್ರದ ಧ್ವಜಗಳಿಗೆ ಭಾರೀ ಬೇಡಿಕೆಯದೆ ಎನ್ನುವುದು ಗುಲ್ಶನ್ ಅವರ ಮಾತು.