Advertisement
ಹೌದು, ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನು ಮುಂದೆ ಯಾವುದೇ ಭಯೋತ್ಪಾದಕ ದಾಳಿ ಅಥವಾ ಆತ್ಮಾಹುತಿ ದಾಳಿಗಳನ್ನು ಎದುರಿಸಲೆಂದೇ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ 50 ಕಮಾಂಡೋಗಳನ್ನು ಆಯ್ಕೆ ಮಾಡಲಾಗಿದೆ.
ಹಲವು ವರ್ಷಗಳ ಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿರುವ, ಪ್ರಮುಖ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ ಹಿರಿಯ ಅಧಿಕಾರಿಗಳೇ ಈ ಕಮಾಂಡೋಗಳಿಗೆ ತರಬೇತಿ ನೀಡಿದ್ದಾರೆ. ಸುಧಾರಿತ ಸ್ಫೋಟಕಗಳ ಪತ್ತೆ ಹಾಗೂ ನಿರ್ವಹಣೆ ಕುರಿತೂ ಟ್ರೈನಿಂಗ್ ನೀಡಲಾಗಿದೆ. ಇದಲ್ಲದೇ, ಜನಜಂಗುಳಿಯಿರುವ ಪ್ರದೇಶ ಅಂದರೆ ನಗರ ಪ್ರದೇಶಗಳಲ್ಲಿ. ಗೋಚರತೆ ಕಡಿಮೆ ಇರುವಾಗ(ಅಂದರೆ ರಾತ್ರಿ ಹೊತ್ತಲ್ಲಿ) ಹಾಗೂ ಗಗನಚುಂಬಿ ಕಟ್ಟಡಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಒಂದು ತಿಂಗಳ ತರಬೇತಿಯನ್ನೂ ಕಮಾಂಡೋಗಳು ಪಡೆದಿದ್ದಾರೆ.
Related Articles
Advertisement
ಏನೇನು ಶಸ್ತ್ರಾಸ್ತ್ರಗಳಿರಲಿವೆ?ಎಂಪಿ-5 ಸಬ್‌ಮಷೀನ್ ಗನ್‌ಗಳು, ರೈಫಲ್‌ಗಳು, ಲಘು ಮಷೀನ್ ಗನ್‌ಗಳು, ಎಕೆ-47ಗಳು, ಕಾರ್ನರ್ ಶಾಟ್, ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳು ಇತ್ಯಾದಿಗಳನ್ನು ಕಮಾಂಡೋಗಳು ಹೊಂದಿರಲಿದ್ದಾರೆ. ಇದಲ್ಲದೇ, ಕತ್ತಲಲ್ಲಿ ಸ್ಪಷ್ಟವಾಗಿ ಗೋಚರಿಸಲು ಕನ್ನಡಕಗಳು, ರೇಡಾರ್‌ಗಳು, ಇನ್-ವಾಲ್ ಸ್ಕ್ಯಾನರ್‌ಗಳು, ಶಸ್ತ್ರಾಸ್ತ್ರಗಳನ್ನು ಅಳವಡಿಸಿರುವ ರೊಬೋಟ್‌ಗಳನ್ನೂ ಒದಗಿಸಲಾಗಿದೆ. ಉಗ್ರರ ಸಮೂಹವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಪ್ರತಿ ಕಮಾಂಡೋಗೆ ಇರುವಂತೆ ಸಜ್ಜುಗೊಳಿಸಲಾಗಿದೆ. ಮೊದಲ ಬಾರಿಗೆ ನಿಯೋಜನೆ
ಜ.26ರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಮೊದಲ ಬಾರಿಗೆ ಈ ತಂಡವನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಯಾವುದೇ ದಾಳಿ ನಡೆದರೂ ಕ್ಷಣಮಾತ್ರದಲ್ಲಿ ಆ ಪ್ರದೇಶಕ್ಕೆ ತಲುಪುವಂತೆ, ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲೇ ಸದಾಕಾಲ ಈ ಕಮಾಂಡೋಗಳು ಇರಲಿದ್ದಾರೆ.ಏ