ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಮೃತರಲ್ಲಿ ಒಬ್ಬ ಉಗ್ರ, ಪಾಕ್ ಬೆಂಬಲಿತ ದಿ ರೆಸಿಸ್ಟಂಟ್ ಫ್ರಂಟ್(ಟಿಆರ್‌ಎಫ್)ನ ಕಮಾಂಡರ್ ಅಫ್ತಾಕ್ ಸಿಕಂದರ್ ಎಂದು ಗುರುತಿಸಲಾಗಿದೆ.
ಪೊಂಬಾಯ್ ಮತ್ತು ಗೋಪಾಲ್‌ಪೊರ ಪ್ರದೇಶದಲ್ಲಿ ಸೇನೆಯ ಯೋಧರು ಎನ್‌ಕೌಂಟರ್ ನಡೆಸಿದ್ದಾರೆ. ಅದರಲ್ಲಿ ಶಾಕಿರ್ ಅಲಿಯಾಸ್ ಅಮರ್, ಹೈದರ್ ಅಲಿಯಾಸ್ ಅಸ್ಲಾಮ್ ಟೈಗರ್ ಮತ್ತು ಇಬ್ರಾಹಿಂ ಎಂಬುವವರು ಸಾವನ್ನಪ್ಪಿದ್ದಾರೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ.
ಇದನ್ನೂ ಓದಿ:ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ
ಈ ಕಾರ್ಯಾಚರಣೆಗೂ ಮೊದಲು ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿದ್ದ ಇಬ್ಬರು ಉಗ್ರರನ್ನು ಪುಲ್ವಾಮಾ ಜಿಲ್ಲೆಯಲ್ಲಿ ಬಂಧಿಸಿದ್ದಾಗಿ ಕಾಶ್ಮೀರದ ಐಜಿ ವಿಜಯ್ ಕುಮಾರ್ ತಿಳಿಸಿದ್ದಾರೆ.