Advertisement
ಜಾಥಾದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ವಿಧಾನ ಸೌಧದ ಸ್ತಂಭಗಳಿಗೆ ಕಲ್ಲುಗಳನ್ನು ಕೊಟ್ಟ ಕೊಯಿರಾ ಬೆಟ್ಟ ಮತ್ತು ಅದರ ಸುತ್ತಲೂ ನಡೆಯುತ್ತಿರುವ ಅಕ್ರಮ ಮತ್ತು ಅವೈಜಾnನಿಕ ಗಣಿಗಾರಿಕೆಯಿಂದಾಗಿ ಸುತ್ತಲಿನ ಜನರ ಜೀವನ ನರಕವಾಗಿದೆ. ಈ ಅಕ್ರಮ ಚಟುವಟಿಕೆಗಳನ್ನು ಸರ್ಕಾರ ಈ ಕೂಡಲೇ ನಿಲ್ಲಿಸಲೇ ಬೇಕು.
Related Articles
Advertisement
ಯುವಜನರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು. ನಾಗಾರ್ಜುನ ಕಾಲೇಜಿನ ಉಪನ್ಯಾಸಕ ಪ್ರತಾಪ ಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ನಂದಿಬೆಟ್ಟ, ಚನ್ನಗಿರಿ ಹಾಗೂ ಬ್ರಹ್ಮಗಿರಿ ಬೆಟ್ಟಗಳ ನಡುವೆ ಸಂಚರಿಸುವ ಮೂಲಕ ಇಲ್ಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಬೆಟ್ಟದ ತಪ್ಪಲಿನಲ್ಲಿ ಕೆಲವು ಕಡೆ ಅರಣ್ಯ ಒತ್ತುವರಿ ಮತ್ತು ಕೆರೆ ಕಾಲುವೆಗಳ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸೂಕ್ತ ರೀತಿಯಲ್ಲಿ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಬೇಕಾಗಿದೆ ಎಂದರು.
ಜೊತೆಗೆ ಇಡೀ ಬೆಟ್ಟಗಳಲ್ಲಿ ಯಥೇತ್ಛವಾಗಿರುವನೀಲಗಿರಿಯನ್ನು ತೆಗೆದು ವನ್ಯ ಪ್ರಾಣಿಗಳಿಗೆ ಆಹಾರ ನೀಡುವ ಸ್ಥಳೀಯ ಜಾತಿಯ ಮರಗಳ ಅರಣ್ಯೀಕರಣ ಮತ್ತು ವನ್ಯ ಜೀವಿಗಳಿಗೆ ನೀರು ಸಿಗಲು ಸಾಧ್ಯವಾಗುವಂತೆ ಜಲಸಂರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾಲೇಜಿನ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.
ಯುವ ಸಂಚಲನ ಬಳಗದ ಚಿದಾನಂದಮೂರ್ತಿ ಮಾತನಾಡಿ, ನಂದಿಗಿರಿ ಶ್ರೇಣಿಯ ಚನ್ನಗಿರಿಬೆಟ್ಟದಲ್ಲಿ ಹಿಂದೆ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ನಿಂತುಹೋಗಿ ಬೆಟ್ಟ ರಕ್ಷಣೆಯಾದ ಪರಿಣಾಮ ಕೇವಲ 10 ವರ್ಷಗಳಲ್ಲೇ ಚನ್ನಗಿರಿ ಬೆಟ್ಟದಲ್ಲಿ ಮಳೆಗಾಲದ ಸಮಯದಲ್ಲಿ ನಮಗೆ ಇಲ್ಲೆ ಮಲೆನಾಡಿನಂತಾ ಸೊಬಗನ್ನು ನೋಡಲು ಸಾಧ್ಯವಾಗಿದೆ.
ಇಲ್ಲಿಗೆ ಪ್ರಕೃತಿ ಪ್ರೇಮಿಗಳು ಬರುವುದರ ಜೊತೆಗೆ ಇಲ್ಲಿನ ಪರಿಸರ ಹಾಳು ಮಾಡುವ ಕುಡುಕರ ಹಾವಳಿಯು ಹೆಚ್ಚಾಗಿದೆ. ಇದಕ್ಕೆ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬೆಟ್ಟವನ್ನು ಉಳಿಸಬೇಕೆಂದರು. ಪರಿಸರ ಉಳಿಸುವ ಜವಾಬ್ದಾರಿ ಬರೀ ಯುವಜನರ ಮೇಲಿದೆ ಅಂತ ಮಾತನಾಡುವ ಹಿರಿಯರೇ ಪರಿಸರವನ್ನು ಹಾಳು ಮಾಡಿದ್ದಾರೆ.
ಹಾಗಾಗಿ ಇದರ ಉಳಿಸುವ ಜವಾಬ್ದಾರಿಯೂ ಅವರ ಮೇಲೆಯೂ ಇದೆ. ಈ ಬೆಟ್ಟ, ಕಾಡುಗಳು ಉಳಿಯದಿದ್ದರೆ ಇತ್ತೀಚೆಗೆ ವಾಯು ಮಾಲಿನ್ಯದಿಂದಾಗಿ ದೆಹಲಿಯಲ್ಲಿ ವಾರಗಟ್ಟಲೇ ಶಾಲೆಗಳಿಗೆ ರಜಾ ಕೊಟ್ಟ ಹಾಗೇ ನಮ್ಮಲ್ಲೂ ಆಗುವ ಕಾಲ ದೂರವಿಲ್ಲ ಎಂದರು. ಅರ್ಕಾವತಿ ನದಿ ಪುನಶ್ಚೇತನ ಆಂದೋಲನದ ಕಾರ್ಯಕರ್ತರಾದ ಜಿ.ಮಂಜುನಾಥ, ಮಡಕುಹೊಸಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.