Advertisement

ಮೋದಿ ಸಮ್ಮುಖದಲ್ಲಿ 5 ರಫೇಲ್‌ ಶೀಘ್ರವೇ ಸೇನೆಗೆ ಸಮರ್ಪಣೆ

01:07 AM Aug 22, 2020 | mahesh |

ಹೊಸದಿಲ್ಲಿ: ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿದಿರುವ 5 ರಫೇಲ್‌ ಯುದ್ಧ ವಿಮಾನಗಳ ಸೇನಾ ಸಮರ್ಪಣಾ ಸಮಾರಂಭ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಶೀಘ್ರವೇ ನಡೆಯಲಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಫ್ರಾನ್ಸ್‌ ರಕ್ಷಣಾ ಸಚಿವ ಫ್ಲಾರೆನ್ಸ್‌ ಪಾರ್ಲಿ ಗಣ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಸಮಾರಂಭದ ನಿರ್ದಿಷ್ಟ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಆಗಸ್ಟ್‌ ಅಂತಿಮ ಅಥವಾ ಸೆಪ್ಪಂಬರ್‌ ಮೊದಲ ವಾರದಲ್ಲಿ ಐಎಎಫ್ನ ಗೋಲ್ಡನ್‌ ಆ್ಯರೋಸ್‌ ಸ್ಕ್ವಾಡ್ರನ್‌ಗೆ ರಫೇಲ್‌ ಫೈಟರ್‌ ಜೆಟ್‌ಗಳನ್ನು ಅಧಿಕೃತವಾಗಿ ಸೇರ್ಪಡೆಗೊ ಳಿಸಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಫೇಲ್‌ ಯುದ್ಧ ವಿಮಾನಗಳು ಹರಿಯಾಣದ ಅತ್ಯುನ್ನತ ಬೆಟ್ಟಗಳ ಮೇಲೆ ಈಗಾಗಲೇ ಹಾರಾಟ ತರಬೇತಿ ನಡೆಸುತ್ತಿವೆ. ಭಾರತೀಯ ನುರಿತ ಪೈಲಟ್‌ಗಳು ಯುದ್ಧ ವಿಮಾನದ ಶಸ್ತ್ರಾಸ್ತ್ರಗಳ ಮೂಲಕ ಗುಂಡು ಹಾರಿಸಿ, ಯಶಸ್ವಿ ಅಭ್ಯಾಸ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next