ನವದೆಹಲಿ: ಮೊದಲ ಐದು ಹಂತದಲ್ಲಿ ನಡೆದ ಎಲ್ಲ ಲೋಕಸಭಾ ಕ್ಷೇತ್ರಗಳ ಕ್ಷೇತ್ರವಾರು ಮತದಾನ ಮಾಹಿತಿಯನ್ನು ಚುನಾವಣಾ ಆಯೋಗ ಶನಿವಾರ ಬಿಡುಗಡೆ ಮಾಡಿದೆ.
ಚುನಾವಣಾ ಪ್ರಕ್ರಿಯೆಯನ್ನು ಹಾಳು ಮಾಡುವುದಕ್ಕಾಗಿ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ ಎಂದು ಆಯೋಗ ಹೇಳಿದೆ. ಅಲ್ಲದೇ, ಚಲಾವಣೆಯಾದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದೆ.
ಮತದಾನವಾದ ಒಟ್ಟು ಮತಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡುವುದು ಅಸಾಧ್ಯ ಎಂದು ಆಯೋಗವು ಹೇಳಿದೆ. ಪ್ರತಿ ಕ್ಷೇತ್ರದಲ್ಲಿ ಮತದಾರರ ಸಂಪೂರ್ಣ ಸಂಖ್ಯೆಯನ್ನು ಸೇರಿಸಲು ಮತದಾನದ ದತ್ತಾಂಶದ ಸ್ವರೂಪವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಆಯೋಗವು ಹೇಳಿದೆ.
ವೋಟರ್ ಟರ್ನ್ ಔಟ್ ಆ್ಯಪ್‌ನಲ್ಲಿ ಒಟ್ಟು ಮತದಾನದ ಮಾಹಿತಿ ಲಭ್ಯವಾಗಿರುತ್ತದೆ. ಎನ್‌ಜಿಒಂದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಮತದಾನ ನಡೆದ 48 ಗಂಟೆಯಲ್ಲಿ ವೋಟಿಂಗ್ ಮಾಹಿತಿ ಬಹಿರಂಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಬೆನ್ನಲ್ಲೇ ಆಯೋಗವು ಮಾಹಿತಿಯನ್ನು ಬಹಿರಂಗ ಮಾಡಿದೆ.
ಯಾವ ಹಂತದಲ್ಲಿ ಎಷ್ಟು ಮತ?
1ನೇ ಹಂತ ಶೇ.66.14
2ನೇ ಹಂತ ಶೇ.66.71
3ನೇ ಹಂತ ಶೇ.65.68
4ನೇ ಹಂತ ಶೇ.69.16
5ನೇ ಹಂತ ಶೇ.62.20