Advertisement
ಉಪ್ಪಿನಂಗಡಿ ಕಡೆಯಿಂದ ಬರುತ್ತಿ¨ಪುತ್ತೂರಿನ ಸಂಪ್ಯ ಮೂಲದ ಸ್ವಿಫ್ಟ್ ಕಾರು ಮತ್ತು ಕಡಬದಿಂದ ಉಪ್ಪಿನಂಗಡಿ ಕಡೆ ತೆರಳುತ್ತಿದ್ದ ನೂಜಿಬಾಳ್ತಿಲದ ಜೀಪು ಪರಸ್ಪರ ಢಿಕ್ಕಿ ಹೊಡೆದುಕೊಂಡಿವೆ. ಅಪಘಾತದ ತೀವ್ರತೆಗೆ ಜೀಪು ಮಗುಚಿ ಬಿದ್ದರೆ, ಕಾರಿನ ಮುಂಭಾಗ ಪೂರ್ತಿಯಾಗಿ ಜಖಂಗೊಂಡು ಚಕ್ರ ಕಳಚಿಕೊಂಡಿದೆ. ಕಾರಿನಲ್ಲಿದ್ದ ಸಂಪ್ಯ ನಿವಾಸಿಗಳಾದ ವೃದ್ಧ ಇಬ್ರಾಹಿಂ, ಹ್ಯಾರಿಸ್ ಹಾಗೂ ಅಶ್ರಫ್, ಜೀಪಿನಲ್ಲಿದ್ದ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪವನ್(24) ಹಾಗೂ ಜಯಂತ್ ಬರಮೇಲು(24) ಗಾಯಗೊಂಡವರು. ಗಾಯಾಳುಗಳ ಪೈಕಿ ಇಬ್ರಾಹಿಂ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು , ಕಾಲಿನ ಮೂಳೆ ಮುರಿದಿದೆ. ಗಾಯಾಳುಗಳು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊçಲ ಹಾಗೂ ರಾಮಕುಂಜ ಗ್ರಾ.ಪಂ.ಗಳ ಗಡಿಭಾಗವಾದ ಸದ್ರಿ ತಿರುವು ಅನೇಕ ಅಪಘಾತಗಳಿಗೆ ಸಾಕ್ಷಿಯಾಗಿದೆ. ಅಪಘಾತದಿಂದಾಗಿ ಪ್ರಾಣ ಹಾನಿ ಕೂಡಾ ಸಂಭವಿಸಿದೆ. ಮುಖ್ಯವಾಗಿ ಇಲ್ಲಿ ರಸ್ತೆ ಬದಿಯಲ್ಲಿ ಖಾಸಗಿಯವರು ನಿರ್ಮಾಣ ಮಾಡಿರುವ ಬೇಲಿಯಲ್ಲಿ ಬೆಳದ ಗಿಡಗಳಿಂದಾಗಿ ದೂರದಿಂದ ರಸ್ತೆಯ ತಿರುವಿನಲ್ಲಿ ಬರುವ ವಾಹನಗಳು ಎದುರಿನ ವಾಹನ ಚಾಲಕರಿಗೆ ಕಾಣದಿರುವುದೇ ಅಪಘಾತಗಳಿಗೆ ಪ್ರಮುಖ ಕಾರಣ ಎನ್ನುವುದು ಸ್ಥಳೀಯರ ದೂರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಅಪಾಯಕಾರಿ ಬೇಲಿ ಹಾಗೂ ಮರಗಳನ್ನು ತೆರವುಗೊಳಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.