Advertisement

Bihar: ನಕಲಿ ಮದ್ಯ ಸೇವಿಸಿ 5 ಮಂದಿ ಮೃತ್ಯು; 12 ಜನರು ಗಂಭೀರ  

11:48 AM Apr 15, 2023 | Team Udayavani |

ಪಾಟ್ನಾ: ಬಿಹಾರದಲ್ಲಿ ನಕಲಿ ಮದ್ಯದ ಹಾವಳಿ ಮತ್ತೆ ಶುರುವಾಗಿದೆ. ನಕಲಿ ಮದ್ಯವನ್ನು ಸೇವಿಸಿದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಮೋತಿಹಾರಿ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದಲ್ಲಿ ಈ ದುರಂತ ಸಂಭವಿದೆ. ನಕಲಿ ಮದ್ಯವನ್ನು ಗ್ರಾಮದ ಅನೇಕ ಜನ ಸೇವಿಸಿದ್ದಾರೆ. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅಸ್ವಸ್ಥಗೊಂಡವರಲ್ಲಿ ಐವರು ಮೃತಪಟ್ಟಿದ್ದಾರೆ. ಇನ್ನೂ 12 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

ಏಪ್ರಿಲ್ 2016 ರಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿತ್ತು. ಈ ನಿರ್ಧಾರ ಅನೇಕ ಮಹಿಳಾ ಮತದಾರರ ಗಮನ ಸೆಳೆದಿತ್ತು.

ಇದನ್ನೂ ಓದಿ: Stolen: ಕಂಪೆನಿಯವರ ಸೋಗಿನಲ್ಲಿ ಬಂದು ಮೊಬೈಲ್‌ ಟವರನ್ನೇ ಕಳ್ಳತನ ಮಾಡಿಕೊಂಡು ಹೋದ ಗ್ಯಾಂಗ್!

ಆದರೆ ಆ ಬಳಿಕ ನಿಧಾನವಾಗಿ ಕಾಳಸಂತೆಯಲ್ಲಿ ನಕಲಿ ಮದ್ಯ ಮಾರಾಟ ದಂಧೆ ಶುರುವಾಗಿತ್ತು. 2023 ರ ಜನವರಿಯಲ್ಲಿ  ಬಿಹಾರದ ಸಿವಾನ್‌ನಲ್ಲಿ ನಕಲಿ ಮದ್ಯ ಸೇವಿಸಿದ ಬಳಿಕ ನಾಲ್ವರು ಮೃತಪಟ್ಟಿದ್ದರು. ಈ ಸಂಬಂಧ ಪೊಲೀಸರು 16 ಜನರನ್ನು ಬಂಧಿಸಿದ್ದಾರೆ.

Advertisement

ಕಳೆದ ವರ್ಷ (2022) ಡಿಸೆಂಬರ್‌ನಲ್ಲಿ ಛಪ್ರಾದಲ್ಲಿ ನಕಲಿ ಮದ್ಯ ಸೇವಿಸಿ 80 ಮಂದಿ ಸಾವನ್ನಪ್ಪಿದ್ದರು. ಕಾಳಸಂತೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next