ಮುಂಬಯಿ: ಹೆಚ್ಚುತ್ತಿರುವ ವಾಯು ಮಾಲಿನ್ಯದ ಮಟ್ಟವನ್ನು ನಿಖರವಾಗಿ ತಿಳಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಬೃಹನ್ಮುಂಬಯಿ ಮಹಾ ನಗರ ಪಾಲಿಕೆಯು (ಬಿಎಂಸಿ) ನಗರದಐದು ಸ್ಥಳಗಳಲ್ಲಿ ನಿರಂತರ ವಾಯು ಮಾಪನ ಕೇಂದ್ರ (ಸಿಎಎಕ್ಯುಎಂಎಸ್)ಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.
ಚೆಂಬೂರಿನ ಮಾಹುಲ್ ವಿಲೇಜ್, ದೇವ ನಾರ್‌ನ ಶಿವಾಜಿ ನಗರ, ಘಾಟ್ಕೊಪರ್‌ನ ಪಂತ್ ನಗರ, ಕಾಂದಿವಲಿಯ ಚಾರ್ಕೋಪ್ ಮತ್ತು ಬೈಕುಲಾ ಮೃಗಾಲಯದಲ್ಲಿ ಈ ಐದು ಸಿಎಎಕ್ಯುಎಂಎಸ್ ಕೇಂದ್ರ ಗಳು ತಲೆ ಎತ್ತಲಿವೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕೇಂದ್ರಗಳು 24 ಗಂಟೆಗಳ ಕಾಲದ ವಾಯು ಗುಣಮಟ್ಟ ಮತ್ತು ಹವಾಮಾನದ ಮಾಹಿತಿಯೊದಿಗೆ ವಾಯು ಗುಣಮಟ್ಟದ ಸೂಚ್ಯಂಕವನ್ನು (ಎಕ್ಯುಐ) ತೋರಿಸುವ ಪ್ರದರ್ಶನ ಫಲಕಗಳನ್ನು ಕೂಡ ಹೊಂದಿ ರಲಿವೆ. ಸುಮಾರು 10 ಕೋಟಿ ರೂ. ವೆಚ್ಚದಈ ಯೋಜನೆಗೆ ಏಜೆನ್ಸಿಗಳನ್ನು ನೇಮಿಸಲು ಬಿಎಂಸಿ ಟೆಂಡರ್‌ಗಳನ್ನು ಆಹ್ವಾನಿಸಿದೆ.
ಈ ಕೇಂದ್ರಗಳು ಪಿಎಂ 2.5 ಮತ್ತು ಪಿಎಂ 10, ಸಲ#ರ್ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಹೈಡ್ರೋಕಾರ್ಬನ್, ಕಾರ್ಬನ್ ಮೊನಾಕ್ಸೈಡ್, ಓಝೋನ್ ಮತ್ತು ಅಮೋ ನಿ ಯ ಮಟ್ಟವನ್ನು ದಾಖಲಿಸಲಿವೆ. ಪ್ರದೇಶ- ನಿರ್ದಿಷ್ಟ ವಾಯು ಗುಣಮಟ್ಟದ ದತ್ತಾಂಶ ಇದ್ದಾಗ ಮಾತ್ರ ವಾಯು ಮಾಲಿನ್ಯವನ್ನು ಎದುರಿಸಲು ಉತ್ತಮ ಯೋಜನೆ ಯನ್ನು ರೂಪಿಸಲು ಸಾಧ್ಯ. ಇದೇ ಉದ್ದೇಶ ದೊಂದಿಗೆ ಈ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇವು ಎಂಪಿಸಿಬಿ ಮತ್ತು ಸಿಪಿಸಿಬಿಗೆ ಆನ್ ಲೈನ್ ಮೂಲಕ ದತ್ತಾಂಶವನ್ನು ವರ್ಗಾಯಿಸಲಿವೆ. ಬಿಎಂಸಿ ಈ ಕಾಮಗಾರಿಗೆ ಗುತ್ತಿಗೆದಾರರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:ಸ್ನೇಹ, ಒಡನಾಟಕ್ಕೆ ಎಂದೂ ಸಾವಿಲ್ಲ: ಶ್ರೀದೇವಿ ಸಿ. ರಾವ್
ಮನಪಾದಿಂದ ನೇಮಕಗೊಂಡ ಏಜೆನ್ಸಿಯು ಈ ಕೇಂದ್ರಗಳನ್ನು ಐದು ವರ್ಷಗಳವರೆಗೆ ನೋಡಿಕೊಳ್ಳಲಿದೆ. ಮುಂಬಯಿಯಲ್ಲಿ ಸಫಾರ್ (ವಾಯು ಗುಣ ಮಟ್ಟ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ವ್ಯವಸ್ಥೆ) ಮತ್ತು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಎಂಪಿಸಿಬಿ) ಸ್ಥಾಪಿಸಿದ 25 ನಿರಂತರ ವಾಯು ಮಾಪನ ಕೇಂದ್ರಗಳಿವೆ. ಬಿಎಂಸಿ ಎರಡನೇ ಹಂತದಲ್ಲಿ ಇಂತಹ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಿದೆ. ಕೇಂದ್ರ ಪರಿಸರ ಸಚಿವಾಲಯವು 2019ರಲ್ಲಿ ಪ್ರಾರಂಭಿ ಸಿದ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ ಈ ಕೇಂದ್ರ ಗಳನ್ನು ಸ್ಥಾಪಿಸಲಾಗುತ್ತಿದೆ. ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ ಮಾಲಿನ್ಯ ಮಟ್ಟವನ್ನು ಶೇ. 20ಕ್ಕಿಂತ ಕಡಿಮೆ ಮಾಡಲು ಉದ್ದೇಶಿಸಿದೆ.