Advertisement

ಟ್ರಕ್ ಗೆ ಟ್ರ್ಯಾಕ್ಟರ್ ಟ್ರಾಲಿ ಡಿಕ್ಕಿ: 5 ಮೃತ್ಯು, 12ಕ್ಕೂ ಹೆಚ್ಚು ಮಂದಿಗೆ ಗಾಯ

09:33 AM Aug 05, 2023 | Team Udayavani |

ಉತ್ತರ ಪ್ರದೇಶ: ಟ್ರಕ್ ಗೆ ಟ್ರಾಕ್ಟರ್ ಟ್ರಾಲಿ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು ಮತ್ತು 12 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಸಂತ್ರಸ್ತರು ಜಲೇಸರದಿಂದ ಗೋವರ್ಧನಕ್ಕೆ ಟ್ರಾಕ್ಟರ್ ನಲ್ಲಿ ಯಾತ್ರೆಗೆ ತೆರಳುತ್ತಿದ್ದ ವೇಳೆ ಸದಾಬಾದ್ ತಲುಪುತಿದ್ದಂತೆ ಎದುರಿನಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳಲ್ಲಿ ಕೆಲವರನ್ನು ಆಗ್ರಾ ಮತ್ತು ಅಲಿಗಢದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Chikkamagaluru: ಭಕ್ತರ ಗಮನಕ್ಕೆ; ದೇವೀರಮ್ಮ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ

Advertisement

Udayavani is now on Telegram. Click here to join our channel and stay updated with the latest news.

Next