Advertisement

ಸಂಚಾರ ನಿಯಮ ಉಲ್ಲಂಘನೆ ಜಿಲ್ಲೆಯಲ್ಲಿ 5 ಲಕ್ಷ ದಂಡ ಸಂಗ್ರಹ

09:32 PM Sep 13, 2019 | Lakshmi GovindaRaju |

ದೇವನಹಳ್ಳಿ: ಸೆ. ರಿಂದ ಜಾರಿಗೆ ಬಂದಿರುವನೂತನ ಮೋಟರ್‌ ವಾಹನ ಕಾಯ್ದೆ ತಿದ್ದುಪಡಿಯಿಂದ ಜಿಲ್ಲೆಯಲ್ಲಿ ಉಲ್ಲಂಘನೆಯಾದ ಸಂಚಾರ ನಿಯಮ 1,892 ಪ್ರಕರಣಗಳಿಗೆ ಸುಮಾರು 5 ಲಕ್ಷ ದಂಡ ವಿಧಿಸಲಾಗಿದೆ.

Advertisement

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯರಂಭ ಮಾಡಿದ ನಂತರ ಬೆಂಗಳುರು ನಗರ, ದೇವನಹಳ್ಳಿ ಪಟ್ಟಣ ಮತ್ತು ಸುತ್ತ ಮುತ್ತಲಿನ ಹಳ್ಳಿ ಸೇರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಚಾರಿ ಪೋಲೀಸ್‌ ಠಾಣೆಯಾಗಿ ಮಾರ್ಪಾಡಾಗಿದ್ದು, ಈ ವರ್ಷ 55,517 ಪ್ರಕರಣಗಳಲ್ಲಿ 81,94, 300 ರೂ. ದಂಡ ವಿಧಿಸಲಾಗಿದ್ದು, ಸೆ.5ರಿಂದ 1100 ಮದ್ಯಪಾನ ಪ್ರಕರಣಗಳು ಸೇರಿ 120 ಪ್ರಕರಣಗಳಲ್ಲಿ 2 ಲಕ್ಷ 12 ಸಾವಿರ ದಂಡ ಸಂಗ್ರಹಿಸಲಾಗಿದೆ.

ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಎರಡೂ ತಾಲೂಕಿಗಳಿಗೆ ಒಂದೇ ಪ್ರಾದೇಶೀಕ ಕಚೇರಿ ಇದ್ದು, ಕಚೇರಿ ವ್ಯಾಪ್ತಿಯಲ್ಲಿ 72,476 ದ್ವಿಚಕ್ರ ವಾಹನ, 1257 ತ್ರಿಚಕ್ರ ವಾಹನ, 516 ಗೂಡ್ಸ್‌ ವಾಹನ, 10,832 4 ಚಕ್ರಗಳ ವಾಹನ , 333 ಜೀಪ್‌, 5436 ಹೋಮಿನಿ ಬಸ್‌ ,4347 ಟ್ರ್ಯಾಕ್ಟರ್‌, 324 ಶಾಲಾ ವಾಹನ , 223 ಪ್ರಯಾಣಿಕರ ವಾಹನ ,2519 ಬಾರಿ ವಾಹನ ಸೇರಿ ಒಟ್ಟು ದೊಡ್ಡಬಳ್ಳಾಪುರ 2 ಲಕ್ಷ 5 ಸಾವಿರ 787 ವಾಹನಗಳಿವೆ.

ಆರ್‌ಟಿಒ ಮತ್ತು ವಿಮೆ ಕಚೇರಿಗಳಿಗೆ ಹೆಚ್ಚಾದ ಬೇಡಿಕೆ: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದಂಡದ ಮೊತ್ತ ಹೆಚ್ಚಾಗಿರುವ ಹಿನ್ನಲೆಯಲ್ಲ ವಾಹನ ಸವಾರರು ವಿಮೆ, ಮಾಲಿನ್ಯ ತಪಾಸಣಾ ಪ್ರಮಾಣ ಪತ್ರ, ಚಾಲನ ಪರವಾನಿಗೆ ನವೀಕಣಕ್ಕಾಗಿ ಆರ್‌ಟಿಒ ಮತ್ತು ವಿಮೆ ಕಚೇರಿಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದೆ.

ಬೆಂಗಳೂರಿಗೆ ಹೊಂದಿಕೊಂಡಿರುವ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಹೆಲ್ಮೆಟ್‌ ಇಲ್ಲದೆ ಅಡ್ಡ ದಿಡ್ಡಿಯಲ್ಲಿ ವಾಹನ ಚಲಿಸುವುದರ ಜೊತೆಗೆ ಸಂಚಾರಿ ಉಲ್ಲಂ ಸುವವರಿಗೆ ಮೊದಲು ಅರಿವು ಮೂಡಿಸಿ ನಂತರ ದಂಡಾಸ್ತ್ರ ಪ್ರಯೋಗಿಸಲು ಜಿಲ್ಲಾ ಪೋಲೀಸ್‌ ಇಲಾಖೆ ಮುಂದಾಗಿದ್ದರೆ, ದಂಡ ವಿಧಿಸುವುವ ಮುನ್ನಾ ರಸ್ತೆ ಗುಂಡಿಗಳನ್ನು ಸರಿ ಪಡಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Advertisement

ದಂಡದ ವಿವಿರ: ಹೆಲ್ಮೆಟ್‌ ರಹಿತ ಚಾಲನೆಗೆ 1,000 ರೂ. ಅತಿ ವೇಗ ಚಾಲನೆ ಮೊದಲ ಅಪರಾಧಕ್ಕೆ 1000 ರೂ. 2ನೇ ಅಪರಾಧಕ್ಕೆ 2000 ರೂ. ವಾಹನ ಚಾಲನೆಯಲ್ಲಿ ಮೊಬೈಲ್‌ ಬಳಸಿದರೆ ಮೊದಲ ಅಪರಾಧಕ್ಕೆ 1000 ರೂ. 2ನೇ ಅಪರಾಧಕ್ಕೆ 2000 ರೂ. ನೋಂದಣಿಯಾಗದ ವಾಹನ ಚಲಾಯಿಸಿದರೆ 5000 ರೂ. ನಿಷೇಧಿತ ಸ್ಥಳಗಳಲ್ಲಿ ವಾಹನ ನಿಲ್ಲಿಸಿದರೆ 1000 ರೂ. ಮದ್ಯಪಾನ ಮಾಡಿ ವಾಹನ ಚಾಲಾಯಿಸಿದರೆ 10 ಸಾವಿರ ರೂ. ದಂಡ.

ಹೊಸ ಕಾಯ್ದೆ ಅನ್ವಯ ದಂಡ ವಿಧಿಸುವದಕ್ಕೂ ಮುನ್ನಾ ಗ್ರಾಮೀಣ ಪ್ರದೇಶದ ಜನರಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆರ್‌ಟಿಒ ಅಧಿಕಾರಿಗಳ ಸಹಕಾರದಿಂದ ಚಾಲನ ಪರವಣಿಗೆ ಇಲ್ಲದ ವಾಹನ ಚಾಲಕರಿಗಾಗಿ ಡಿಎಲ್‌ ಕ್ಯಾಂಪ್‌ ಆಯೋಜಿಸಿ ಸ್ಥಳದಲ್ಲಿಯೇ ಚಾಲನಾ ಪರವಣಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಪೊಲೀಸ್‌ ಇಲಾಖೆಯಿಂದ ಸಂಚಾರ ನಿಯಮಗಳ ¸ಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ಸೆಮಿನಾರ್‌ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು.
-ರವಿ ಡಿ ಚೆನ್ನಣ್ಣನವರ್‌, ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ

ನೋಟ್‌ ಬ್ಯಾನ್‌ ಮತ್ತು ಜಿಎಸ್‌ಟಿಯಿಂದ ಈಗಾಗಲೇ ಜನ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸಿರುವುದು ವಾಹನ ಸವಾರರಿಗೆ ಸಾಕಷ್ಟು ಹೊರೆಯಾಗುತ್ತಿದ್ದು, ದಂಡ ಮೊತ್ತವನು ಕೂಡಲೇ ಕೇಂದ್ರ ಸರ್ಕಾರ ಪರಿಷ್ಕರಿಸಬೇಕು.
-ನರಸಪ್ಪ ಕಾರ್‌ ಚಾಲಕ, ಅತ್ತಿಬೆಲೆ

ಹೆಲ್ಮೆಟ್‌ ರಹಿತ ಚಾಲನೆಯಿಂದ ಯ ಕಾರಣ ಅಪಘಾತಗಳಲ್ಲಿ ಸವಾರರು ಮೃತ ಪಟ್ಟಿರುವುದು ಕಂಡು ಬರುತ್ತಿದೆ. ಪ್ರತಿಯೊಬ್ಬರಲ್ಲೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಆಗಬೇಕು. ಸೆ.5 ರಿಂದ ಮೋಟಾರ್‌ ಕಾಯ್ದೆ ತಿದ್ದುಪಡಿಯಾಗಿದ್ದು, ಇವರೆಗೆ 4 ಮದ್ಯಪಾನ ಪ್ರಕರಣ ಸೇರಿ 120 ಪ್ರಕರಣಗಳಲ್ಲಿ 2 ಲಕ್ಷ 12 ಸಾವಿರ ದಂಡ ವಿಧಿಸಲಾಗಿದೆ. ಸಂಚಾರಿ ನಿಯಮಗಳ ಕುರಿತು ಕಿರುತೆರೆ ಕಲಾವಿದರಿಂದ ಬೀದಿ ನಾಟಕ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು.
-ವೈ. ಎಸ್‌. ಚಂದ್ರಶೇಖರ್‌, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೋಲೀಸ್‌ ಠಾಣೆ

* ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next