ಲಕ್ನೋ: ಈ ಬಾರಿ ದೀಪಾವಳಿಯಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭರ್ಜರಿ ದೀಪೋತ್ಸವ ಆಚರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ರಾಮಜನ್ಮಭೂಮಿ ಪ್ರದೇಶದಲ್ಲಿ ದೀಪಾವಳಿಯಂದು ಐದು ಲಕ್ಷ ದೀಪಗಳ ಹಣತೆಗಳನ್ನು ಹಚ್ಚುವ ಮೂಲಕ ಭರ್ಜರಿ ದೀಪೋತ್ಸವ ಆಚರಿಸಲಾಗುವುದು ಎಂದು ಉತ್ತರಪ್ರದೇಶದ ಪ್ರವಾಸೋದ್ಯಮ ಸಚಿವ ನೀಲ್ ಕಾಂತ್ ತಿವಾರಿ ತಿಳಿಸಿದ್ದಾರೆ.
ಈ ಪವಿತ್ರ ಭೂಮಿಯಲ್ಲಿ ಕಳೆದ ಐದು ನೂರು ವರ್ಷಗಳ ಕಾಲದಿಂದ ದೀಪ ಬೆಳಗದೇ ಕತ್ತಲೆಯಲ್ಲಿತ್ತು. ಹೀಗಾಗಿ ರಾಮಜನ್ಮಭೂಮಿಯಲ್ಲಿ ಮತ್ತೆ ದೀಪ ಬೆಳಗಿಸುವ ಕನಸು ಉತ್ತರಪ್ರದೇಶದ ಹಾಗೂ ಕೋಟ್ಯಂತರ ಭಕ್ತರ ಕನಸಾಗಿದೆ ಎಂದು ಹೇಳಿದರು.
ಸುಮಾರು ಐನೂರು ವರ್ಷಗಳ ಹೋರಾಟದ ನಂತರ ಸುಪ್ರೀಂಕೋರ್ಟ್ ಅಂತಿಮವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದೆ. ಒಂದು ವೇಳೆ ಕೋವಿಡ್ 19 ಸೋಂಕಿನ ಪರಿಸ್ಥಿತಿ ಇಲ್ಲದಿದ್ದರೆ ದೀಪಗಳ ಸಂಖ್ಯೆ ಕೋಟಿಗಳ ಲೆಕ್ಕ ದಾಟುತ್ತಿತ್ತು. ಆದರೂ ಜನರು ಈ ದೀಪೋತ್ಸವವನ್ನು ಡಿಜಿಟಲ್ ನಲ್ಲಿ ವೀಕ್ಷಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಶಿರಾದಲ್ಲಿ ಬಿಜೆಪಿ ಖಾತೆ ತೆರೆಯುತ್ತಾ? ಉಪಚುನಾವಣೆ-ಸೀ ವೋಟರ್ ಚುನಾವಣೋತ್ತರ ಸಮೀಕ್ಷೆ ಪ್ರಕಟ