ನವದೆಹಲಿ: ಪಂಜಾಬ್ ಸಮೀಪದ ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಒಳನುಸುಳಲು ಯತ್ನಿಸಿದ್ದ ಐವರನ್ನು ಗಡಿ ಭದ್ರತಾ ಪಡೆ ಎನ್ ಕೌಂಟರ್ ಮೂಲಕ ಹೊಡೆದುರುಳಿಸಿರುವ ಘಟನೆ ಶನಿವಾರ (ಆಗಸ್ಟ್ 22, 2020) ಬೆಳಗ್ಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಗಡಿ ಭದ್ರತಾ ಪಡೆ(ಬಿಎಸ್ ಎಫ್) ಪಹರೆ ನಡೆಸುತ್ತಿದ್ದ ಸಂದರ್ಭದಲ್ಲಿ ತರನ್ ತಾರಾನ್ ಜಿಲ್ಲೆಯ ಖೇಮ್ಕಾರಾನ್ ಗಡಿ ಪ್ರದೇಶದ ಬಳಿ ಭಾರತದ ಪ್ರದೇಶದೊಳಕ್ಕೆ ನುಸುಳಲು ಯತ್ನಿಸಲು ಪ್ರಯತ್ನಿಸಿದ ವೇಳೆ ಗುಂಡಿನ ದಾಳಿ ನಡೆಸಲಾಗಿತ್ತು ಎಂದು ವರದಿ ಹೇಳಿದೆ.
ಭಾರತದೊಳಕ್ಕೆ ನುಸುಳಲು ಯತ್ನಿಸಿದ ನುಸುಳುಕೋರರನ್ನು ತಡೆಯಲು ಯತ್ನಿಸಿದ್ದಾಗ ಗುಂಡಿನ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ ತಮ್ಮ ರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಐವರು ನುಸುಳುಕೋರರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
Related Articles
ಈ ಘಟನೆ ನಡೆದಿದ್ದು ಶನಿವಾರ ಮುಂಜಾನೆ 4.45ರ ಹೊತ್ತಿಗೆ ಎಂದು ಬಿಎಸ್ ಎಫ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಗಡಿಯಲ್ಲಿ ಇತ್ತೀಚೆಗೆ ಉಗ್ರರ ದಾಳಿ ಹಾಗೂ ನುಸುಳುಕೋರರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಗಡಿ ಭದ್ರತಾ ಪಡೆ ತಕ್ಕ ತಿರುಗೇಟು ನೀಡುವ ಮೂಲಕ ಉಗ್ರರ ಮತ್ತು ನುಸುಳುಕೋರರ ಪ್ರಯತ್ನ ವಿಫಲಗೊಳಿಸುತ್ತಿರುವುದಾಗಿ ವರದಿ ತಿಳಿಸಿದೆ.