Advertisement
ಶನಿವಾರ ನಗರದ ತಾಲೂಕು ಕಚೇರಿ ಆವರಣದಲ್ಲಿ ಜಿ.ಪಂ., ತಾ.ಪಂ., ನಗರಸಭೆ, ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾಲೂಕಿನ 53 ದಿವ್ಯಾಂಗರಿಗೆ ಉಚಿತವಾಗಿ ಮೋಟರ್ ಸೈಕಲ್ ವಿತರಿಸಿ ಮಾತನಾಡಿದರು. ಅಂಗವೈಕಲ್ಯತೆ ಎನ್ನುವುದು ಬದುಕಿಗೆ ಅಡ್ಡಿಯಾಗಬಾರದು. ಬಹುತೇಕ ಅಂಗವಿಕಲರು ತಮ್ಮ ಆತ್ಮವಿಶ್ವಾಸ ಬಲದಿಂದ ಬಹುದೊಡ್ಡ ಸಾಧನೆತೋರಿದ್ದರೆ. ಅವರ ಜೀವನ ಕ್ರಮಗಳು ಆದರ್ಶ ಪ್ರೇರಣೆಯಾಗಬೇಕು ಎಂದರು.
Related Articles
Advertisement
ಜಿ.ಪಂ.ಉಪಾಧ್ಯಕ್ಷ ಸೋಮಶೇಖರಪ್ಪ ಮಾತನಾಡಿ, ಜಿ.ಪಂ.ನಲ್ಲಿ ಪ್ರತಿ ಸದಸ್ಯರಿಗೂ ಫಲಾನುಭವಿಗಳನ್ನು ಗುರುತಿಸಿ ಒಂದು ಮೋಟಾರ್‌ವಾಹನ ವಿತರಿಸಲು ಅವಕಾಶವಿದೆ. ಮುಂದಿನದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಜಿ.ಪಂ.ನಲ್ಲಿಮೊದಲ ಹಂತದಲ್ಲಿ 28 ಮೋಟರ್ ಸೈಕಲ್ ವಿತರಿಸಲಾಗಿದ್ದು, ಸ್ಥಳೀಯ ಶಾಸಕರು ಸುಮಾರು 180ಕ್ಕೂ ಹೆಚ್ಚು ಮೋಟರ್ ವಾಹನಗಳನ್ನು ವಿತರಿಸಿದ್ದಾರೆ ಎಂದರು.
ಜಿ.ಪಂ.ಸದಸ್ಯೆ ಜಸಿಂತಾ ಅನಿಲ್‌ಕುಮಾರ್ ಮಾತನಾಡಿ, ದಿವ್ಯಾಂಗರ ಅನುಕೂಲಕ್ಕೆ ನೀಡಿರುವ ವಾಹನವನ್ನು ಕುಟುಂಬದವರು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಅವರ ಸ್ವಾವಲಂಬಿ ಬದುಕಿಗಾಗಿ ವಾಹನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದಿವ್ಯಾಂಗರಿಗೆ ನೀಡಲಾಗುವುದು ಎಂದರು. ಜಿ.ಪಂ. ಸದಸ್ಯ, ರವೀಂದ್ರಬೆಳವಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಮುಖಂಡರಾದ ವರಸಿದ್ದಿ ವೇಣುಗೋಪಾಲ್, ತಾ.ಪಂ. ಮಾಜಿ ಅಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್, ನೆಟ್ಟಿಕೆರೆಹಳ್ಳಿ ಜಯಣ್ಣ ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಎ.ಪಿ.ಎಂ.ಸಿ. ಅಧ್ಯಕ್ಷ ಶಿವಕುಮಾರ್, ವಿಕಲಚೇತನಾ ಧಿಕಾರಿ ವೀರೇಶ್ ಉಪಸ್ಥಿತರಿದ್ದರು.