Advertisement
ವಿಜಯಪುರ ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 43,533 ವಿವಿಧ ರೀತಿಯ ಅಂಗವಿಕಲರಿದ್ದು ಇದರಲ್ಲಿ 24,038 ಪುರುಷ ಹಾಗೂ 19,495 ಮಹಿಳೆಯರು ಸೇರಿದ್ದಾರೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತವೆ. ಜನಗಣತಿಗೆ ದಶಕ ಕಳೆದಿದ್ದು ಈ ಹಂತದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಈ ಸಂಖ್ಯೆ 50 ಸಾವಿರ ಮೀರಿದೆ ಎಂಬುದು ವಿಕಲಚೇತನ-ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಭಿಮತ.
Related Articles
Advertisement
ಸರ್ಕಾರ ಕಳೆದ 25 ವರ್ಷಗಳಿಂದ ಅಂಗವಿಕಲರಿಗೆ ನೀಡಿದ ರಿಯಾಯ್ತಿ ದರ ಹಾಗೂ ಕಲ್ಯಾಣ ಯೋಜನೆಗಳ ಸಾಲ ನೀಡಿಕೆಯಲ್ಲಿ ಶೇ. 90ಕ್ಕಿಂತಹೆಚ್ಚು ಪ್ರಕರಣಗಳಲ್ಲಿ ಸಾಲ ಮರು ಪಾವತಿ ಆಗಿಲ್ಲ. ಫಲಾನುಭವಿಗಳು ಸಾಲ ಮರು ಪಾವತಿಗೆ ಆಸಕ್ತಿ ತೋರಿಲ್ಲ. ಯೋಜನೆ ರೂಪಿಸಿದ ಸರ್ಕಾರಗಳೂ ಇದರ ಸದ್ಬಳಕೆ ಏನಾಯಿತು, ಫಲಾನುಭವಿಹೊಣೆಗಾರಿಕೆ ನಿಭಾಯಿಸಿದನೆ ಎಂದು ಪರಿಶೀಲನೆ, ಪರಾಮರ್ಶೆಗೂ ಹೋಗಿಲ್ಲ. ಹೀಗಾಗಿ ಬ್ಯಾಂಕರ್‌ಗಳು ಇಂಥ ಯೋಜನೆಗಳಿಗೆ ಸಾಲ ನೀಡಲು ಆಸಕ್ತಿತೋರುತ್ತಿಲ್ಲ. ಪರಿಣಾಮ ಹಿಂದಿನವರು ಮಾಡಿದ ತಪ್ಪಿಗೆ ಇಂದಿನವರು ಶಿಕ್ಷೆ ಅನುಭವಿಸುವಂತಾಗಿದ್ದು ಶೇ. 5 ಮೀಸಲು ಕಾಯ್ದೆ ಇದ್ದರೂ ಸಮಸ್ಯೆಗೆ ಪರಿಹಾರಕಂಡುಕೊಳ್ಳುವ ಪ್ರಾಮಾಣಿಕ ಕೆಲಸವಾಗಿಲ್ಲ. ಇದರ ಹೊರತಾಗಿಯೂ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಅಂಗವಿಕಲರಿಗೆ ಇಂಧನ ಆಧಾರಿತ ತ್ರಿಚಕ್ರವಾಹನ ನೀಡಿದ್ದು, ಅದರಲ್ಲಿ ಹಲವು ಫಲಾನುಭವಿಗಳು ಬೈಕ್ ಮಾರಿಕೊಂಡಿರುವ ದೂರುಗಳೂ ಇವೆ.ಹೀಗೆ ಸರ್ಕಾರದ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾದ ಬಳಿಕ ಅದರ ಸ್ಥಿತಿಗತಿ ಅರಿಯಲು ಮುಂದಾಗಿಲ್ಲ. ಇದಲ್ಲದೇ ಸರ್ಕಾರ ಬಹುತೇಕಯೋಜನೆಗಳ ಕುರಿತು ಅಂಗವಿಕಲರು ಹಾಗೂ ಅವರಅವಲಂಬಿತ-ಪಾಲಕರಿಗೆ ಮಾಹಿತಿಯೇ ಇರುವುದಿಲ್ಲ. ಜಾಗೃತಿಯ ಕೊರತೆಯಿಂದಾಗಿ ಕೆಲವೇ ಕೆಲವರಿಗೆ ಯೋಜನೆ ತಲುಪುತ್ತಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಇಂಥ ಲೋಪಗಳ ಕುರಿತು ಸರ್ಕಾರ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ವಿಶೇಷ ಕಾಳಜಿವಹಿಸಬೇಕದೆ. ಅಂಗವಿಕಲರ ಸಬಲೀಕರಣಕ್ಕೆ ಸರ್ಕಾರ ರೂಪಿಸಿರುವ ಯೋಜನೆಗಳು ಅರ್ಹರನ್ನುತಲುಪುವಲ್ಲಿ ವಿಫಲವಾಗಿವೆ. ಯೋಜನೆಗಳು ಜಾರಿಯಾಗಿ, ಕೋಟಿ ಕೋಟಿ ರೂ. ಅನುದಾನ ಬಿಡುಗಡೆ ಆದರೂ ಮೇಲುಸ್ತವಾರಿ ವೈಫಲ್ಯದಿಂದಾಗಿ ಯೋಜನೆಗಳು ಕಾಯ್ದೆ-ಕಡತದಲ್ಲೇ ನಿಂತಿದೆ. ಇನ್ನಾದರೂ ಅರ್ಹ ಅಸಹಾಯಕರನ್ನು ತಲುಪುವಲ್ಲಿ ಸರ್ಕಾರದ ಯೋಜನೆಗಳು ಶ್ರಮಿಸಲಿ ಎಂಬ ಆಗ್ರಹ ಕೇಳಿ ಬಂದಿದೆ.
ಸರ್ಕಾರ ರೂಪಿಸಿರುವ ಯೋಜನೆಗಳ ಅನುಷ್ಠಾನದಲ್ಲಿ ವಿಕಲಚೇತನರ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಸಿಬ್ಬಂದಿ ಕೊರತೆ ಮಧ್ಯೆಯೂ ಅವರ ಹಕ್ಕುಗಳನ್ನು ಕಲ್ಪಿಸಲುಶ್ರಮಿಸುತ್ತಿದೆ. ವಿಕಲಚೇತನರು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ಮಧ್ಯವರ್ತಿಗಳನ್ನು ಅವಲಂಬಿಸದೇ ನೇರವಾಗಿ ನನ್ನನ್ನು ಮೊ. 9900960233 ಸಂಪರ್ಕಿಸಲಿ. – ವಿ.ಜಿ. ಉಪಾಧ್ಯೆ, ಜಿಲ್ಲಾ ಅಧಿಕಾರಿ, ವಿಕಚೇತನರು-ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಜಯಪುರ
ಸರ್ಕಾರದ ವಿಕಲಚೇತನರ ಹಕ್ಕುಗಳ ರಕ್ಷಣೆಗೆ ಹಲವು ಕಾಯ್ದೆ ಜಾರಿಗೆ ತಂದು, ವಿವಿಧ ಹಂತದಲ್ಲಿ ಅನುಷ್ಠಾನ ಅಧಿಕಾರಿಗಳನ್ನು ನೇಮಿಸಿದ್ದರೂಜಾಗೃತಿ ಮೂಡಿಲ್ಲ. ಸರ್ಕಾರ ತನಗಾಗಿ ರೂಪಿಸಿರುವಕಾನೂನುಗಳ ಅರಿವು ಇಲ್ಲದ ವಿಕಲಚೇತನರು ಸ್ವಾವಲಂಬಿ ಬದುಕಿಗಾಗಿ ಪರದಾಡುತ್ತಿದ್ದಾರೆ. ತಳಮಟ್ಟದಲ್ಲಿ ಜಾಗೃತಿ ಅಗತ್ಯವಿದೆ. ಸ್ಥಳೀಯ ಸಂಸ್ಥೆಯಶೇ. 5 ಅನುದಾನ ಬಳಕೆ ಆದಲ್ಲಿ ಬಹುತೇಕ ಸಮಸ್ಯೆ ಪರಿಹಾರ ಸಿಗಲಿದೆ. – ಈರಣ್ಣ ಬಿರಾದಾರ, ರಮೇಶ ಮಾನೆ, ಶಿಕ್ಷಣ ಸಂಯೋಜಕರು, ಎಪಿಡಿ ಸಂಸ್ಥೆ, ವಿಜಯಪುರ
-ಜಿ.ಎಸ್. ಕಮತರ