Advertisement
48 ಕೆ.ಜಿ ವಿಭಾಗದಲ್ಲಿ ನೀತು, 51 ಕೆ.ಜಿ ವಿಭಾಗದಲ್ಲಿ ಜ್ಯೋತಿ ಗುಲಿಯಾ, 54 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಚೌಧರಿ, 57 ಕೆ.ಜಿ ವಿಭಾಗದಲ್ಲಿ ಶಶಿ ಚೋಪ್ರಾ, 64 ಕೆ.ಜಿ. ವಿಭಾಗದಲ್ಲಿ ಅಂಕುಷಿತ ಬೋರೋ ಚಿನ್ನದ ಪದಕ ಗೆದ್ದಿದ್ದಾರೆ. ಉಳಿದಂತೆ ಭಾರತದ ನೆಹಾ ಯಾದವ್ ಪ್ಲಸ್ 81 ಕೆ.ಜಿ ವಿಭಾಗದಲ್ಲಿ ಮತ್ತು ಅನುಪಮಾ 81 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಕೂಟದ ಇತಿಹಾಸದಲ್ಲಿಯೇ ಭಾರತದ ಶ್ರೇಷ್ಠ ಪ್ರದರ್ಶನ ಇದಾಗಿದೆ. 2011ರಲ್ಲಿ ನಡೆದ ಈ ಹಿಂದಿನ ಕೂಟದಲ್ಲಿ ಭಾರತ ಒಂದು ಕಂಚಿನ ಪದಕವನ್ನು ಮಾತ್ರ ಗೆದ್ದಿತ್ತು. 48 ಕೆ.ಜಿ ವಿಭಾಗದಲ್ಲಿ ನೀತು ಕಜಕೀಸ್ಥಾನ್‌ನ ಜಾಜಿರ್ ಉರಕ್ಬಾಯೆವ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು.ಫೈನಲ್ ಸುತ್ತಿನ ಈ ಹೋರಾಟದಲ್ಲಿ ಭಾರತೀಯ ಆಟಗಾರ್ತಿ ಎದುರಾಳಿಗೆ ಭಾರೀ ಪಂಚ್ ನೀಡಿದರು. 51 ಕೆ.ಜಿ ವಿಭಾಗದಲ್ಲಿ ಜ್ಯೋತಿ ರಷ್ಯಾದ ಎಕತೆರೆನಾ ಮಲ್‌ಚನೋವಾ ವಿರುದ್ಧ ಸುಲಭ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದರು. 54 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಇಂಗ್ಲೆಂಡ್‌ನ ಇವಿ ಜಾನೆ ಸ್ಮಿತ್ ವಿರುದ್ಧ 3-2 ರಿಂದ ಗೆಲುವು ಪಡೆದರು. ಭಾರತದ ಮತ್ತೂಬ್ಬ ಬಾಕ್ಸರ್ ಶಶಿ ಚೋಪ್ರಾ 57 ಕೆ.ಜಿ ವಿಭಾಗದಲ್ಲಿ ವಿಯೇಟ್ನಾಂನ ನೊಕೊ ಡೊ ಹಾಂಗ್ ವಿರುದ್ಧ 3-2 ರಿಂದ ಗೆಲುವು ಪಡೆದರು.