ನವದೆಹಲಿ/ಮಹಾರಾಷ್ಟ್ರ: ದೇಶದ ಹಲವೆಡೆ ಬಿಸಿಲ ತಾಪಕ್ಕೆ ಜನ ತತ್ತರಿಸಿ ಹೋಗುತ್ತಿದ್ದರೆ, ಮತ್ತೊಂದೆಡೆ ಬಿಸಿಲ ಬೇಗೆಗೆ ಐವರು
(ಸುಡುತಿದೆ ಭೂಮಿ, ಮಾರ್ಚ್ ಅಂತ್ಯಕ್ಕೆ 45 ಡಿಗ್ರಿ) ಸಾವನ್ನಪ್ಪರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ ಬಿಸಿಲ ತಾಪ ಶೇ.40 ಡಿಗ್ರಿ ಸೆಲ್ಸಿಯಸ್ ದಾಟಿರುವುದಾಗಿ ವರದಿ ತಿಳಿಸಿದೆ.
ಮಧ್ಯ ಮಹಾರಾಷ್ಟ್ರ ಮತ್ತು ಉತ್ತರ ಭಾಗದಲ್ಲಿ ಬಿಸಿಲ ತಾಪ ವಿಪರೀತವಾಗಿರುವುದಾಗಿ ವರದಿ ವಿವರಿಸಿದೆ. ರಾಯ್ ಗಢ್ ಜಿಲ್ಲೆಯ ಭಿರಾ ಗ್ರಾಮದಲ್ಲಿ ಬಿಸಿಲ ತಾಪ 46.5 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ. ಆದರೆ ಭಾರೀ ಪ್ರಮಾಣದ ಬಿಸಿಲ ತಾಪ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ತಂಡವನ್ನು ಕಳುಹಿಸುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಅಕೋಲಾದಲ್ಲಿ 44.1 ಡಿಗ್ರಿ ಸೆಲ್ಸಿಯಸ್, ವಾರ್ದಾ, ನಾಗ್ಪುರ್ ಹಾಗೂ ಚಂದ್ರಾಪುರ್ ಗಳಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ರಾಜಸ್ತಾನದ ಬಾರ್ಮೆರ್ ನಲ್ಲಿ 43.4 ಡಿಗ್ರಿ ಸೆಲ್ಸಿಯಸ್, ಹರ್ಯಾಣದ ನಾರ್ನೌಲ್ ನಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪಂಜಾಬ್ ನ ಲೂಧಿಯಾನಾದಲ್ಲಿ ಕನಿಷ್ಠ ತಾಪಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿರುವುದಾಗಿ ಹೇಳಿದೆ.
ಉತ್ತರಪ್ರದೇಶದ ವಾರಣಾಸಿ, ಅಲಹಾಬಾದ್, ಹಾಮಿರ್ ಪುರ್ ಮತ್ತು ಆಗ್ರಾದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅಲ್ಲದೇ ಉತ್ತರಾಖಂಡ್ ನ ಡೆಹ್ರಾಡೂನ್, ಶ್ರೀನಗರ್ ನಲ್ಲಿ ಕೂಡಾ ವಿಪರೀತ ತಾಪಮಾನ ದಾಖಲಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿಯೂ ಬಿಸಿಲ ತಾಪದ ಬಿಸಿ ಜೋರಾಗಿ ತಟ್ಟಿದೆ.