Advertisement
ಅವರು ಗುರುವಾರ ಮೈಸೂರಿನ ಶಕ್ತಿಧಾಮದಲ್ಲಿ ಇನ್‍ಫೋಸಿಸ್ ಪ್ರತಿಷ್ಠಾನ ವತಿಯಿಂದ ನಿರ್ಮಿಸಿರುವ ಇನ್‍ಫೋಸಿಸ್ ಬ್ಲಾಕ್ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಮಾತನಾಡುತ್ತಿದ್ದರು.
Related Articles
Advertisement
ಆಶ್ರಯದಾತ ಸಂಸ್ಥೆತಾಯಿ ಕರುಳನ್ನು ತೋರಿದ ಪೋಲಿಸ್ ಅಧಿಕಾರಿ ಕೆಂಪಯ್ಯ ಸಮಾಜದಲ್ಲಿ ಶೋಷಿತ ಹೆಣ್ಣು ಮಕ್ಕಳಿಗೆ ದಾರಿ ತೋರಲು ಡಾ: ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರಲ್ಲಿ ತಿಳಿಸಿದರು. ಶೋಷಿತ ವರ್ಗದ ಹೆಣ್ಣುಮಕ್ಕಳಿಗೆ ಆಶ್ರಯ, ಬದುಕು ನೀಡಬೇಕು ಎಂದು ಆಶ್ರಯದಾತ ಸಂಸ್ಥೆಯಾಗಿ ಶಕ್ತಿಧಾಮವನ್ನು ಡಾ: ರಾಜ್ ಕುಮಾರ್ ಅವರ ಕುಟುಂಬದವರು ಬೆಳೆಸಿದ್ದಾರೆ. ಸರ್ಕಾರ ಮತ್ತು ಸಮಾಜ ಮಾಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಪುನೀತ್ ರಾಜ್ ಕುಮಾರ್ ಅವರಿಗೂ ತಾಯಿ ಕರುಳಿತ್ತು. ಅವರು ಇದ್ದಲ್ಲಿಂದಲೇ ಸಂಸ್ಥೆಗೆ ಶಕ್ತಿ ತುಂಬುತ್ತಿದ್ದಾರೆ. ಸಮಾಜದಲ್ಲಿ ಶೋಷಿತ, ಪೀಡಿತ ದುರ್ಬಲ ವರ್ಗದವರಿಗೆ ಸಮಾಜ ಸರ್ಕಾರ ಕೈ ಹಿಡಿದು ಎತ್ತಿ ನಡೆಸಬೇಕು. ಮಾತುಗಳಲ್ಲಿ ಸಾಮಾಜಿಕ ನ್ಯಾಯ ಆಗುವುದಿಲ್ಲ. ಅವಕಾಶಗಳು ಸಿಕ್ಕಾಗ ಅವರ ಪರವಾಗಿ ಕೆಲಸ ಮಾಡಬೇಕು. ಸಮಾಜದ ನೋವುಗಳಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಎಲ್ಲರೂ ಮಾಡಬೇಕು. ಈ ಬಗ್ಗೆ ಎಲ್ಲರೂ ಚಿಂತನೆ ಮಾಡಿ, ಸಮಾಜಕ್ಕೆ ಮರಳಿ ನೀಡಿದಾಗ ಬದುಕಿನ ಬ್ಯಾಲೆನ್ಸ್ ಶೀಟ್‍ನಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು ಎಂದರು. ದೇವರ ಮಕ್ಕಳು:
ಇನ್‍ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಹಾಗೂ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು ಶಕ್ತಿಧಾಮಕ್ಕೆ ದೊಡ್ಡ ಮಟ್ಟದಲ್ಲಿ ಸಹಕರಿಸಿದ್ದಾರೆ ಎಂದು ಧನ್ಯವಾದಗಳನ್ನು ಅರ್ಪಿಸಿದರು. ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿ, ಕ್ರಿಯಾಶೀಲರನ್ನಾಗಿಸಿ, ಹಲವಾರು ರಂಗಗಳಲ್ಲಿ ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸವನ್ನು ತುಂಬುತ್ತಿದೆ ಎಂದರು.
ಮಕ್ಕಳಲ್ಲಿ ದೇವರಿದ್ದಾರೆ. ಮಕ್ಕಳನ್ನು ಯಾರೂ ಅನಾಥರು ಎಂದು ಕರೆಯಬಾರದು. ಅವರು ದೇವರ ಮಕ್ಕಳು ಎಂದರು. ಇದನ್ನೂ ಓದಿ : ಬಲಮುರಿ ದೇವಾಲಯದ ಹುಂಡಿ ಮತ್ತೆ ಕಳ್ಳತನ : ಮೂರು ತಿಂಗಳ ಹಿಂದಷ್ಟೇ ಕಳ್ಳತನವಾಗಿತ್ತು… ಅಂತ:ಕರಣವಿರುವ ಬಜೆಟ್:
ಬೆಂಗಳೂರಿನ ನಂತರ ದಕ್ಷಿಣದಲ್ಲಿ ಮೈಸೂರು ಉತ್ತರದಲ್ಲಿ ಹುಬ್ಬಳ್ಳಿ –ಧಾರವಾಡ ಇವು ಭವಿಷ್ಯದ ನಗರಗಳು. ಇವುಗಳನ್ನು ಅಭಿವೃದ್ಧಿಪಡಿಸಲು ನಾವು ಕಂಕಣಬದ್ಧರಾಗಿದ್ದೇವೆ. ನಮ್ಮ ಬಜೆಟ್ ಬಹಳ ಅಂತ:ಕರಣದಿಂದ ಸೂಕ್ಷ್ಮತೆಯಿಂದ ಕೂಡಿರುವ ಬಜೆಟ್. ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೋವು ಕಡಿಮೆ ಮಾಡುವ ನಿಟ್ಟಿನಲ್ಲಿ ರೂಪಿಸಿದ ಕಾರ್ಯಕ್ರಮಗಳಿವೆ. ಮಕ್ಕಳಗೆ ಪೌಷಿಕತೆ, ಶಿಕ್ಷಣ, ಆರೋಗ್ಯಕ್ಕಾಗಿ 40, 944 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಪೌಷ್ಟಿಕತೆ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು 500 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದರು. ಮೈಸೂರಿನ ಕೆ.ಆರ್.ಆಸ್ಪತ್ರೆಗೆ 100 ವರ್ಷವಾಗಿರುವ ಹಿನ್ನೆಲೆಯಲ್ಲಿ 85 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು, ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ 185 ಕೋಟಿ ರೂ.ಗಳ ವೆಚ್ಚದಲ್ಲಿ ಭೂಸ್ವಾಧೀನ ಕೆಲಸವನ್ನು ಇದೇ ವರ್ಷದಲ್ಲಿ ಮಾಡಲು ಅನುದಾನ ಮೀಸಲಿರಿಸಿದೆ. ಎಲ್ಲಾ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ಜೊತೆಗೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ನಾಗೇಂದ್ರ, ನಿರಂಜನ್ ಕುಮಾರ್, ನಟ ಶಿವರಾಜಕುಮಾರ್, ಶಕ್ತಿ ಧಾಮದ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್ ,ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಷಾಜಿ ಮ್ಯಾಥ್ಯೂ ಉಪಸ್ಥಿತರಿದ್ದರು.