ನವದೆಹಲಿ: 2008ರಲ್ಲಿನ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಬುಧವಾರ (ಅಕ್ಟೋಬರ್ 18) ಲೂಟಿ ಹಾಗೂ ಮೋಕಾ ಕಾಯ್ದೆಯಡಿ ಐವರನ್ನು ದೋಷಿ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ:Mysore: 140 ಕೋಟಿ ವೆಚ್ಚದಲ್ಲಿ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜು ದುರಸ್ತಿ
ಪ್ರಕರಣದಲ್ಲಿ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲ್ಲಿಕ್ ಮತ್ತು ಅಕ್ಷಯ್ ಕುಮಾರ್ ಕೊಲೆ ಮತ್ತು ಲೂಟಿಯಲ್ಲಿ ಶಾಮೀಲಾಗಿದ್ದು ದೋಷಿ ಎಂದು ಕೋರ್ಟ್ ತಿಳಿಸಿದ್ದು, ಇವರಿಗೆ ನೆರವು ನೀಡಿದ 5ನೇ ಆರೋಪಿ ಅಜಯ್ ಸೇಥಿ ಕೂಡಾ ಆರೋಪಿ ಎಂದು ಹೇಳಿದೆ.
2008ರ ಸೆಪ್ಟೆಂಬರ್ 30ರಂದು ಹೆಡ್ ಲೈನ್ಸ್ ಟುಡೇ ಪತ್ರಕರ್ತೆ ಸೌಮ್ಯ (25ವರ್ಷ) ಅವರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದೆಹಲಿಯ ವಸಂತ್ ವಿಹಾರ್ ಬಳಿ ಹಣೆಗೆ ಗುಂಡಿಟ್ಟು ಕೊಲೆಗೈಯಲಾಗಿತ್ತು.
ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ. ಆದರೆ ಆರೋಪಿಗಳಿಗೆ ಶಿಕ್ಷೆಯಾಗುವ ಮೂಲಕ ಇತರರಿಗೆ ಪಾಠವಾಗಬೇಕು. ಆರೋಪಿತರಿಗೆ ಜೀವಾವಧಿ ಶಿಕ್ಷೆಯಾಗಬೇಕೆಂದು ಸೌಮ್ಯ ತಾಯಿ ತೀರ್ಪು ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸೌಮ್ಯ ಕೊಲೆ ನಡೆದ ಒಂದು ತಿಂಗಳ ನಂತರ ಫರಿದಾಬಾದ್ ನಲ್ಲಿ ಐಟಿ ಎಕ್ಸಿಕ್ಯೂಟಿವ್ ಜಿಗಿಶಾ ಘೋಷ್ ಶವ ಪತ್ತೆಯಾಗಿತ್ತು. ಈ ಕೊಲೆಯ ತನಿಖೆ ಕೈಗೊಂಡಾಗ ಪೊಲೀಸರು ಕಪೂರ್, ಶುಕ್ಲಾ ಹಾಗೂ ಮಲಿಕ್ ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ವಸಂತ್ ವಿಹಾರ್ ಕೊಲೆಗೂ ಸಂಬಂಧ ಇರುವುದನ್ನು ಪತ್ತೆ ಹಚ್ಚಿದ್ದರು. ನಂತರ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.