Advertisement
ಇದರ ಜತೆಗೆ ಕಂಪೆನಿಗೆ ಠೇವಣಿ ಮೊತ್ತ ಹಿಂದಿರುಗಿಸುವಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಪೀಠ ಆದೇಶಿಸಿ, ಡಿ. 6ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಹಿಮಾಚಲ ಪ್ರದೇಶ ಸರಕಾರಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂಬ ವರದಿಗಳ ನಡುವೆಯೇ ಈ ತೀರ್ಪು ಬಂದಿದೆ.
ಹಿಮಾಚಲ ಪ್ರದೇಶದ ಲಾಹುಲ್ ಮತ್ತು ಸ್ಪಿಟಿ ಜಿಲ್ಲೆಯ ಚೆನಾಬ್ ನದಿಯಲ್ಲಿ 320 ಮೆ.ವ್ಯಾ. ಸಾಮರ್ಥ್ಯದ ಜಲವಿದ್ಯುತ್ ಯೋಜನೆ ಸ್ಥಾಪಿಸಲು 2009ರಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಸರಕಾರ ತೀರ್ಮಾನಿಸಿತ್ತು. ಅದಕ್ಕಾಗಿ ಸೆಲಿ ಹೈಡ್ರೋಪವರ್ ಇಲೆಕ್ಟ್ರಿಕಲ್ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಒಪ್ಪಂದದ ಅನ್ವಯ ರಾಜ್ಯ ಸರಕಾರ ಮೂಲ ಸೌಕರ್ಯಗಳನ್ನು ನೀಡಬೇಕಾಗಿತ್ತು.
Related Articles
Advertisement
2017ರ ಸೆಪ್ಟಂಬರ್ನಲ್ಲಿ ಕಂಪೆನಿಯು ಯೋಜನೆ ಅನುಷ್ಠಾನ ಮಾಡಿಲ್ಲ ಎಂಬ ಕಾರಣ ನೀಡಿ ಹಿಮಾಚಲ ಪ್ರದೇಶ ಸರಕಾರ ಒಪ್ಪಂದ ರದ್ದು ಮಾಡಿತ್ತು. ಅದರ ವಿರುದ್ಧ ಕಂಪೆನಿ ಮಧ್ಯಸ್ಥಿಕೆದಾರ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ 64 ಕೋಟಿ ರೂ. ಠೇವಣಿ ವಾಪಸ್ ಮಾಡುವಂತೆ ಒತ್ತಾಯಿಸಿತ್ತು. ಆ ಕೋರ್ಟ್ ಕಂಪೆನಿಯ ಪರವಾಗಿ ತೀರ್ಪು ನೀಡಿದ್ದರೂ ರಾಜ್ಯ ಸರಕಾರ ಮೊತ್ತ ವಾಪಸ್ ಮಾಡುವಲ್ಲಿ ವಿಫಲವಾಗಿತ್ತು.
ಹೀಗಾಗಿ ರಾಜ್ಯ ಸರಕಾರದ ವಿರುದ್ಧ ಕಂಪೆನಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. 2023ರ ಜನವರಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಬಡ್ಡಿ ಸಹಿತ ಠೇವಣಿ ಮೊತ್ತ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಆದೇಶಿಸಿತ್ತು. ಅಂತಿಮವಾಗಿ ರಾಜ್ಯ ಸರಕಾರದ ವಿರುದ್ಧ ಆದೇಶ ನೀಡಿದ ಹೈಕೋರ್ಟ್ ಹೊಸದಿಲ್ಲಿಯಲ್ಲಿ ಇರುವ ಹಿಮಾಚಲ ಪ್ರದೇಶ ಭವನವನ್ನು ಹರಾಜು ಹಾಕಿ ಕಂಪೆನಿಗೆ 150 ಕೋಟಿ ರೂ. ಮೊತ್ತ ನೀಡಬೇಕು ಎಂದು ಆದೇಶಿಸಿದೆ.