Advertisement
ಮೂರು ದಿನಗಳಿಂದ ಸತತವಾಗಿ ಸೂಚ್ಯಂಕ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಮೂರು ದಿನಗಳಲ್ಲಿ 5.50 ಲಕ್ಷ ಕೋಟಿ ರೂ. ನಷ್ಟವಾಗಿದೆ. ಇದರ ಜತೆಗೆ ಮೂರು ದಿನಗಳಲ್ಲಿ ಬಿಎಸ್‌ಇ ಸೂಚ್ಯಂಕ ಒಟ್ಟು 1,608.39 ಪಾಯಿಂಟ್ಸ್ ಕುಸಿತಗೊಂಡಿದೆ.
ಗಮನಾರ್ಹ ಅಂಶವೆಂದರೆ ಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 83.06 ರೂ.ಗೆ ಮುಕ್ತಾಯಗೊಂಡಿದೆ.
Related Articles
ಮುಂಬೈ: ಬಾಂಬೆ ಷೇರು ಪೇಟೆಯಲ್ಲಿ ವಾರಾಂತ್ಯವಾಗಿರುವ ಶುಕ್ರವಾರ ಕೂಡ ಸಂವೇದಿ ಸೂಚ್ಯಂಕ 570.60 ಪಾಯಿಂಟ್ಸ್ ಕುಸಿದಿದೆ. ಹೀಗಾಗಿ, ದಿನಾಂತ್ಯಕ್ಕೆ 66,230.24ರಲ್ಲಿ ಮುಕ್ತಾಯಗೊಂಡಿತು. ಮಧ್ಯಂತರದಲ್ಲಿ 672.13 ಪಾಯಿಂಟ್ಸ್ ಇಳಿಕೆಯಾಗಿ 66,128.71ರ ವರೆಗೆ ಕುಸಿತ ಕಂಡಿದೆ. ನಿಫ್ಟಿ ಸೂಚ್ಯಂಕ 159.05 ಪಾಯಿಂಟ್ಸ್ ಕುಸಿತವಾಗಿ 19, 742.35 ಪಾಯಿಂಟ್ಸ್‌ಗೆ ಕೊನೆಗೊಂಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡರೂ ಸೂಚ್ಯಂಕದಲ್ಲಿ ಏರಿಳಿಕೆ ಉಂಟಾಗಿದೆ.
Advertisement
ಬಿಎಸ್‌ಇನಲ್ಲಿ ಐಸಿಐಸಿಐ ಬ್ಯಾಂಕ್ ಷೇರಗಳು ಹೆಚ್ಚಿನ ನಷ್ಟ ಅನುಭವಿಸಿತು. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 83.06 ರೂ.ಗೆ ಮುಕ್ತಾಯಗೊಂಡಿದೆ.