Advertisement

4th Test; ಭಾರತ ಕುಸಿದ ರಾತ್ರಿ ಧ್ರುವ ಜುರೆಲ್‌ ನಿದ್ರಿಸಿರಲಿಲ್ಲ !

12:02 AM Feb 29, 2024 | Team Udayavani |

ರಾಂಚಿ: ಇಲ್ಲಿ ನಡೆದ ಇಂಗ್ಲೆಂಡ್‌ ಎದುರಿನ 4ನೇ ಟೆಸ್ಟ್‌ ನಲ್ಲಿ ಧ್ರುವ ಜುರೆಲ್‌ ಭಾರತವನ್ನು ಕಾಪಾಡಿ ಇಂಗ್ಲೆಂಡ್‌ ವಿರುದ್ಧ ಸರಣಿ ಗೆಲ್ಲಲು ಕಾರಣರಾಗಿದ್ದರು. ಪಂದ್ಯದ 2ನೇ ದಿನವಾದ ಶನಿವಾರ ಭಾರತ ಮೊದಲ ಇನಿಂಗ್ಸ್‌ನಲ್ಲಿ 219ಕ್ಕೆ 7 ವಿಕೆಟ್‌ ಕಳೆದು ಕೊಂಡಿತ್ತು. ಆ ರಾತ್ರಿ ಅಜೇಯ 30 ರನ್‌ ಗಳಿಸಿದ್ದ ಧ್ರುವ ಜುರೆಲ್‌ ನಿದ್ರಿಸಿರಲಿಲ್ಲವಂತೆ. ತಂಡ ವನ್ನು ಕಾಪಾಡುವುದು ಹೇಗೆಂದು ಚಿಂತಿಸುತ್ತ ಇಡೀ ರಾತ್ರಿ ನಿದ್ರೆಯಿಲ್ಲದೇ ಕಳೆದಿದ್ದೆ ಎಂದು ಹೇಳಿದ್ದಾರೆ.

Advertisement

ಆದರೆ ಮುಂದಿನದ್ದೆಲ್ಲ ಕನಸಿನಂತೆ ನಡೆದು ಹೋಯಿತು. ಟೆಸ್ಟ್‌ ಪಂದ್ಯದ ಒತ್ತಡ ಹೇಗಿರು ತ್ತದೆ ಎಂಬುದನ್ನು ಅರ್ಥೈಸಿ ಕೊಂಡ ಜುರೆಲ್‌ ಶತಕ ದಂಚಿನ ತನಕ ಸಾಗುವ ಮೂಲಕ ಆಪತಾºಂಧವ ರಾಗಿ ಪರಿಣಮಿಸಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next