ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರವನ್ನು ಸುನಂದ ಮುರಳಿ ಮನೋಹರ್, ಕಲೈ ಹಾಗೂ ಸೂರಿ ನಿರ್ಮಿಸಿದ್ದಾರೆ. ಚಿರಂಜೀವಿ ಸಜಾì ನಾಯಕರಾಗಿ ಅಭಿನಯಿಸಿದ್ದಾರೆ. ಅವರಿಗೆ ಶರ್ಮಿಳಾ ಮಾಂಡ್ರೆ ನಾಯಕಿ. ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಅಚ್ಯುತ ಕುಮಾರ್, ಬಾಲಾಜಿ ಮನೋಹರ್, ಅಮಾನ್, ಸ್ನೇಹ ಆಚಾರ್ಯ, ಜಾವೇದ್ ಖಾನ್, ಹಫೀಜ್‌ಖಾನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನವಿದೆ. ಇಯಾನ್ ಹಾವ್ಸ್ ಹಾಗೂ ಮಲ್ಹಾರ್ ಭಟ್ ಜೋಶಿ ಅವರು ಕ್ಯಾಮೆರಾ ಹಿಡಿದಿದ್ದಾರೆ. ಪೀಟ್ ಪೆಡ್ರಾರೊ ಸಾಹಸವಿದೆ. ರೋಹಿತ್ ಪದಕಿ ಹಾಡು ಹಾಗೂ ಸಂಭಾಷಣೆ ಬರೆದಿದ್ದಾರೆ.
Advertisement
ಸಂಜೆಯಲ್ಲಿ ಅರಳಿದ ಹೂವುಎಂ.ಡಿ. ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆ ಇದೆ. ವಿದ್ವಾನ್ ಆರ್.ಕೆ. ಪದ್ಮನಾಭನ್ ಇದೇ ಮೊದಲ ಸಲ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇದು ಮಾಲತಿ ಶೆಟ್ಟಿ ಅವರ ಕಾದಂಬರಿ ಆಧಾರಿತ ಚಿತ್ರ. ನಾಗೇಶ್ವರ ರಾವ್ ಅವರ ನಿರ್ಮಾಣವಿದೆ. ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ದೊಡ್ಡರಂಗೇಗೌಡ ಹಾಗೂ ಎಂ.ಡಿ. ಕೌಶಿಕ್ ಗೀತೆಗಳನ್ನು ರಚಿಸಿದ್ದಾರೆ. ಸ್ಟಾರ್‌ಗಿರಿ ನೃತ್ಯವಿದೆ. ಎಸ್.ಕೆ. ಜಾರ್ಜ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಜಯಶ್ರೀ ರಾಜ್, ನಾರಾಯಣಸ್ವಾಮಿ, ಯೋಗೀಶ್, ಮಾಲತಿ ಸರ್‌ದೇಶಪಾಂಡೆ, ಮೇಘನಾ, ಶೀಲಾ, ಮಂಜುನಾಥ್, ಬೇಬಿ ಸುಪ್ರೀತ ಇದ್ದಾರೆ. ಮಾರುತಿ ಮೀರಜRರ್ ಸಂಗೀತವಿದೆ. ಗೌರಿ ವೆಂಕಟೇಶ್ ಅವರ ಛಾಯಾಗ್ರಹಣವಿದೆ.
ಶ್ರೀನಿವಾಸ ಹಾಗೂ ರಘುರಾಜ್ ಹಾಸನ ಸೇರಿ ನಿರ್ಮಿಸಿರುವ “ನಮ್ಮೂರ ಹೈಕ್ಳು’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಪ್ರಸನ್ನ ಶೆಟ್ಟಿ ನಿರ್ದೇಶಿಸಿದ್ದಾರೆ. ಅವರೇ ಬರೆದ “ಊರ ಉಸಾಬರಿ’ ಎಂಬ ಕಾದಂಬರಿಯನ್ನಾಧರಿಸಿ ಈ ಸಿನಿಮಾ ಮಾಡಿದ್ದು, ಊರಿನ ಸ್ವತ್ಛತೆಯ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ. ಚಿತ್ರದ ಬಹುತೇಕ ಚಿತ್ರೀಕರಣ ಹಾಸನ ಬಳಿಯ ಹಳ್ಳಿಯೊಂದರಲ್ಲಿ ನಡೆದಿದೆ. ಚಿತ್ರದಲ್ಲಿ ಮಮತಾ ರಾವತ್, ರಚಿತಾ, ದೀಪ್ತಿ, ರಘುರಾಜ್, ಪವನ್, ಸುನೀಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಶಕೀಲ್ ಅಹಮದ್, ಹರೀಶ್ ಸಂಕಲನ ಚಿತ್ರಕ್ಕಿದೆ. ನಾನೊಬ್ನೆ ಒಳ್ಳೇವ್ನು
ಟಿ.ಎಂ.ಬಸವರಾಜ್ ನಿರ್ಮಾಣದ ಈ ಚಿತ್ರವನ್ನು ವಿಜಯ್ ಮಹೇಶ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ನಾಯಕರಾಗಿಯೂ ಅವರು ನಟಿಸಿದ್ದಾರೆ. ಸುಧೀರ್ ಶಾಸಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ರಾಮು ನೃತ್ಯ ನಿರ್ದೇಶಿಸಿದ್ದಾರೆ. ಕೌರವ ವೆಂಕಟೇಶ್ ಸಾಹಸವಿದೆ. ಚಿತ್ರದಲ್ಲಿ ರವಿತೇಜ, ಸೋನು, ಸೌಜನ್ಯ, ಅನಿಪ್ರಿನ್ಸ್, ಜೋಗಿ ಪುಂಗ, ಜ್ಯೋತಿ, ಮೂರ್ತಿ ಮುಂತಾದವರಿದ್ದಾರೆ.