Advertisement

4th List; ಅರುಣಾಚಲ ಪ್ರದೇಶದ ಸ್ಥಳಗಳ ಹೆಸರುಗಳನ್ನೇ ಬದಲಿಸಿದ ಚೀನ!

12:58 AM Apr 02, 2024 | Team Udayavani |

ಬೀಜಿಂಗ್‌: ಭಾರತದ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಮೊಂಡು ವಾದ ಮಾಡುವ ಚೀನ ರಾಜ್ಯದ ವಿವಿಧ ಭಾಗಗಳಿಗೆ ತನ್ನದೇ ಆಗಿರುವ ಹೊಸ ಹೆಸರುಗಳನ್ನು ಇರಿಸಿಕೊಂಡಿದೆ. ಈ ಬಗ್ಗೆ ಬೀಜಿಂಗ್‌ನಲ್ಲಿ ಚೀನ ಸರಕಾರ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಅಂದ ಹಾಗೆ ಚೀನ ದುಸ್ಸಾಹಸ ನಡೆಸುತ್ತಿರುವುದು ಇದು ಮೊದಲ ಬಾರಿ ಏನಲ್ಲ. 2017ರಲ್ಲಿ ಇದೇ ರೀತಿ ಅರುಣಾಚಲದ 6 ಪ್ರದೇಶಗಳಿಗೆ ಹೊಸ ಹೆಸರಿಟ್ಟು, ಆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅನಂತರದಲ್ಲೂ 2021ರಲ್ಲಿ 15 ಸ್ಥಳಗಳ, 2023ರಲ್ಲಿ 11 ಪ್ರದೇಶಗಳ ಹೆಸರುಗಳನ್ನು ಬದಲಾವಣೆ ಮಾಡುವ ಕುತ್ಸಿತ ಪ್ರಯತ್ನ ನಡೆಸಿತ್ತು.

ಹೊಸ ಪಟ್ಟಿಯಲ್ಲಿ ಮೇ 1ರಿಂದ ಅನ್ವಯವಾಗುವಂತೆ ಅರುಣಾಚಲ ಪ್ರದೇಶದ ಪೂರ್ವ ಭಾಗದ 30ಕ್ಕೂ ಹೆಚ್ಚು ಸ್ಥಳಗಳ ಹೆಸರುಗಳನ್ನು ಬದಲಾ ವಣೆ ಮಾಡುವುದಾಗಿ ಹೇಳಿಕೊಂಡಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಯವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಕ್ಷಣಾತ್ಮಕವಾಗಿ ಮತ್ತು ಭೌಗೋಳಿಕ ವಾಗಿ ಮಹತ್ವಪಡೆದಿರುವ ಸೈಲ್‌ ಬಹುಪಯೋಗಿ ಸುರಂಗ ಮಾರ್ಗ ಉದ್ಘಾಟಿಸಿದ್ದರು. ಆ ಕಾರ್ಯಕ್ರಮಕ್ಕೂ ಚೀನ ಸರಕಾರ ತಕರಾರು ತೆಗೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next