Advertisement
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರಮಾತನಾಡಿದ ಅವರು, ಕ್ರೈಸ್ತ ಸಮುದಾಯದ ಯುವಕ-ಯುವತಿಯರಿಗೆ ಐಎಎಸ್, ಕೆಎಎಸ್‌ನಂತಹ ತರಬೇತಿ ನೀಡುವ ನಿಟ್ಟಿನಲ್ಲಿ ಈ ಕೇಂದ್ರಗಳನ್ನು ತೆರೆಯುವ ಯೋಜನೆಯಿದೆ. ಆದರೆ ಯಾವ ಜಿಲ್ಲೆಗಳಲ್ಲಿ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದರು.
ಮಹಿಳೆಯರಿಗೆ ಶೇ. 50ರಷ್ಟು ಸಹಾಯಧನ ಸೇರಿ 40,000 ರೂ.ಗಳ ಘಟಕ ವೆಚ್ಚದಲ್ಲಿ ಸಹಾಯ ನೀಡಲಾಗುತ್ತದೆ. ಇನ್ನೂ ಅನೇಕ ಯೋಜನೆಗಳನ್ನು ಸಮು
ದಾಯಕ್ಕಾಗಿಯೇ ಮೀಸಲಿಡಲಾಗಿದೆ. ಮಾಹಿತಿ ಕೊರತೆಯಿಂದ ಯೋಜನೆಗಳು ಹಾಗೇ ಬಾಕಿ ಆಗುತ್ತಿವೆ ಎಂದರು.ಸಿಇಟಿ ಸೆಲ್‌ನಲ್ಲಿ 20 ಕೋ. ರೂ.ಸಿಇಟಿ ಸೆಲ್‌ನಲ್ಲಿ 20 ಕೋಟಿ ರೂ.ಠೇವಣಿ ಮಾಡಲಾಗಿದ್ದು, ಸಿಇಟಿ ಬರೆದು ಸರಕಾರಿ ಕಾಲೇಜುಗಳಲ್ಲಿ ಎಂಜಿನಿ ಯರಿಂಗ್, ಮೆಡಿಕಲ್ ಓದುವ ಕ್ರೈಸ್ತ ವಿದ್ಯಾರ್ಥಿಗಳ ಶುಲ್ಕವನ್ನು ಇದರಿಂದಲೇ ಭರಿಸಲಾಗುತ್ತದೆ ಎಂದರು.
Related Articles
ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಕ್ರೈಸ್ತ ಅಭಿವೃದ್ಧಿ ನಿಗಮ ಎಂದು ನಾಮಕರಣ ಮಾಡಬೇಕು ಎಂದು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಐವನ್ ಡಿ’ಸೋಜಾ ಇದೇ ವೇಳೆ ತಿಳಿಸಿದರು. ಕಳೆದ ಸಾಲಿನಲ್ಲಿ ಕ್ರೈಸ್ತರ ಕಾಲನಿ ಅಭಿವೃದ್ಧಿಗೆ 100 ಕೋಟಿ ರೂ. ನೀಡಿದ್ದರೆ, ಈ ಬಾರಿಯ ಬಜೆಟ್‌ನಲ್ಲಿ ಅದನ್ನು 800 ಕೋಟಿ ರೂ.ಗಳಿಗೆ ಏರಿಸಲಾಗಿದೆ. ಅಲ್ಪಸಂಖ್ಯಾಕರ ಅಭಿವೃದ್ಧಿಗಾಗಿ 2016-17ನೇ ಸಾಲಿನಲ್ಲಿ 3750 ಕೋಟಿ ರೂ.ಗಳನ್ನು ಸರಕಾರ ಮೀಸಲಿಟ್ಟಿದೆ ಎಂದು ವಿವರಿಸಿದರು.
Advertisement
ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ ವತಿಯಿಂದ ಕ್ರೈಸ್ತ ಸಮುದಾಯಕ್ಕೆ ನೀಡಲಾಗುವ ವಿವಿಧ ಯೋಜನೆಗಳು ಮತ್ತು ಫಲಾನುಭವಿಗಳಾಗಲು ಬೇಕಾಗುವ ಅರ್ಹತೆಗಳ ಬಗ್ಗೆ ಐವನ್ ಡಿ’ಸೋಜಾ ಅವರು ತಯಾರಿಸಿದ ಬ್ರೋಷರನ್ನು ಆ್ಯಂಜಲೂರು ಚರ್ಚ್‌ನ ಧರ್ಮಗುರು ಫಾ| ಮ್ಯಾಥ್ಯೂ ವಾಸ್ ಅವರು ಬಿಡುಗಡೆಗೊಳಿಸಿದರು.
ಫಾ| ಐಸನ್ ಪಾಲನ್, ಮಾಜಿ ಮೇಯರ್ ಅಶ್ರಫ್, ಮಾರ್ಸೆಲ್ ಮೊಂತೆರೊ, ಅನಿಲ್ ಲೋಬೊ, ಕಾರ್ಪೋರೇಟರ್ ನವೀನ್ ಡಿ’ಸೋಜಾ, ಸ್ಟೀಫನ್ ಮರೋಳಿ ಮೊದಲಾದವರು ಉಪಸ್ಥಿತರಿದ್ದರು.
ಆಧಾರ್ ನೋಂದಣಿ: ಕಾಲಾವಕಾಶಕ್ಕೆ ಆಗ್ರಹಪ್ರಸ್ತುತ ಸರಕಾರದ ಯಾವುದೇ ಯೋಜನೆಗಳ ಸದುಪಯೋಗ ಪಡೆಯಲು ಆಧಾರ್ ಕಡ್ಡಾಯ ಮಾಡಿ ಸರಕಾರ ನಿರ್ದೇಶಿಸಿದೆ. ಆದರೆ ಇನ್ನೂ ಕೂಡ ಹಲವು ಮಂದಿ ಆಧಾರ್ ಕಾರ್ಡ್ ಹೊಂದಿಲ್ಲ. ಆಧಾರ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಕನಿಷ್ಠ ಎರಡು ತಿಂಗಳ ಕಾಲಾವಕಾಶವನ್ನು ಜನಸಾಮಾನ್ಯರಿಗೆ ನೀಡಬೇಕು ಎಂದು ಐವನ್ ಡಿ’ಸೋಜಾ ಸರಕಾರವನ್ನು ಆಗ್ರಹಿಸಿದರು.