Advertisement

4N6 Movie Review: ಕೊಲೆಯ ಜಾಡು ಹಿಡಿದು…

06:22 PM May 11, 2024 | Team Udayavani |

ನಿಗೂಢವಾಗಿ ನಡೆಯುವ ಕೊಲೆಗಳು, ಅದರ ಜಾಡು ಹಿಡಿದು ಹೊರಡುವ ಪೊಲೀಸ್‌, ಪೋರೆನ್ಸಿಕ್‌ ಡಿಟೆಕ್ಟಿವ್‌, ಈ ನಡುವೆಯೇ ತೆರೆದುಕೊಳ್ಳುವ ಹೊಸ ಆಯಾಮ.. ಮತ್ತೆ ಕುತೂಹಲ.. ಇದು ಈ ವಾರ ತೆರೆಗೆ ಬಂದಿರುವ “4ಎನ್‌6′ ಸಿನಿಮಾದ ಒನ್‌ಲೈನ್‌.

Advertisement

ಹೆಸರಿಗೆ ತಕ್ಕಂತೆ ಇದು ಮರ್ಡರ್‌ ಮಿಸ್ಟರಿ ಸಿನಿಮಾ. ಒಂದರ ಹಿಂದೊಂದರಂತೆ ನಡೆಯುವ ಕೊಲೆಗಳು, ಆ ಕೊಲೆಯ ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸುವ ಮಂದಿ, ಆದರೆ, ತನ್ನ ಚಾಣಾಕ್ಷತನದಿಂದ ರಹಸ್ಯ ಬಯಲಿಗೆಳೆಯಲು ಮುಂದಾಗುವ ಅಧಿಕಾರಿ.. ಇಂತಹ ಅಂಶದೊಂದಿಗೆ ಸಾಗುವ ಸಿನಿಮಾ ಒಂದು ಪ್ರಯತ್ನವಾಗಿ ಇಷ್ಟವಾಗುತ್ತದೆ. ಚಿತ್ರದಲ್ಲಿ ಅಲ್ಲಲ್ಲಿ ಟ್ವಿಸ್ಟ್‌-ಟರ್ನ್ಗಳು, ಮಗ್ಗುಲು ಬದಲಿಸುವ ಕಥೆ ಸಿನಿಮಾವನ್ನು ಸದಾ ಜೀವಂತವಾಗಿಟ್ಟಿದೆ.

ಚಿತ್ರದಲ್ಲಿ ರಚನಾ ಇಂದರ್‌ ಡಿಟೆಕ್ಟಿವ್‌ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ.ಭವಾನಿ ಪ್ರಕಾಶ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಮಾತು ಕಮ್ಮಿ, ಕೆಲಸ ಜಾಸ್ತಿ ಎಂಬ ಪಾತ್ರ. ಉಳಿದಂತೆ ನವೀನ್‌ ಕುಮಾರ್‌ ಹಾಗೂ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next