Advertisement
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ರಿಲಯನ್ಸ್ ಜಿಯೋದ 4ಜಿ ನೆಟ್ವರ್ಕ್ ವೇಗವು ಶೇ 15ರಷ್ಟು ಹೆಚ್ಚಾಗಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐ) ವೇಗವು ತಿಂಗಳಿಂದ ತಿಂಗಳಿಗೆ ಕ್ರಮವಾಗಿ ಸುಮಾರು ಶೇ 85 ಮತ್ತು ಶೇ 60ರಷ್ಟು, ಅಂದರೆ 11.9 ಎಂಬಿಪಿಎಸ್ ಹಾಗೂ 14.4 ಎಂಬಿಪಿಎಸ್ ಗೆ ಏರಿಕೆಯಾಗಿದೆ.
Related Articles
Advertisement
ವೊಡಾಫೋನ್ ಐಡಿಯಾ ಸೆಪ್ಟೆಂಬರ್ ತಿಂಗಳಲ್ಲಿ 7.2 ಎಂಬಿಪಿಎಸ್ ಸರಾಸರಿ ಅಪ್ಲೋಡ್ ವೇಗ ಹೊಂದಿತ್ತು. ನಂತರದ ಸ್ಥಾನದಲ್ಲಿ 6.2 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ಇದ್ದರೆ, ಭಾರ್ತಿ ಏರ್ಟೆಲ್ 4.5 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಸರ್ಕಾರಿ ಸ್ವಾಮ್ಯದ ದೂರಸಂರ್ಪಕ ಸಂಸ್ಥೆ ಬಿಎಸ್ಎನ್ಎಲ್, ಆಯ್ದ ಪ್ರದೇಶಗಳಲ್ಲಿ 4ಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ, ಅದರ ನೆಟ್ವರ್ಕ್ ವೇಗವನ್ನು ಟ್ರಾಯ್ ಚಾರ್ಟ್ ನಲ್ಲಿ ನಮೂದಿಸಿಲ್ಲ.
ಮೈಸ್ಪೀಡ್ ಆಪ್ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.